ರಬಕವಿ-ಬನಹಟ್ಟಿ: ಚಿಕ್ಕಮಕ್ಕಳ ಮುಗªತೆ ಕಲಿಕೆಯಲ್ಲಿ ಮಿಂದೆದ್ದಾಗ ಮಕ್ಕಳ ಭಾವತರಂಗ ಹೊರಹೊಮ್ಮುವುದು. ಶಿಕ್ಷಣ ಕೇವಲ ನಾಲ್ಕು ಗೋಡೆಗಳ ಮಧ್ಯೆ ನಡೆಯುವುದಲ್ಲ. ಅಂತಾರಾತ್ಮರೊಂದಿಗೆ ನಡೆದಾಗ ಕಲಿಕಾ ಸಾರ್ಥಕತೆ ಮೂಡಲು ಸಾಧ್ಯ ಎಂದು ಮುಧೋಳದ ಅರಳಿಕಟ್ಟಿ ಸಂಸ್ಥೆಯ ಸಂಸ್ಥಾಪಕ ಟಿ. ವಿ. ಅರಳಿಕಟ್ಟಿ ಹೇಳಿದರು.
ಯಲ್ಲಟ್ಟಿಯ ಕೊಣ್ಣೂರ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ ಎಲ್.ಕೆ.ಜಿ.ಮತ್ತು 7ನೇ ತರಗತಿಯ ಗ್ರಾಜ್ಯುವೇಶನ್ ಡೇ-2022′ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಪದವಿ ಪ್ರದಾನ ಮಾಡಿ ಮಾತನಾಡಿದರು.
ಕೊಣ್ಣೂರ ಆಂಗ್ಲ ಮಾಧ್ಯಮ ಶಾಲೆಯ ವಾತಾವರಣ ಚಿನ್ನರ ಕಲರವದಿಂದ ತುಂಬಿ ತುಳುಕುತ್ತಿದೆ. ಗೌನ್‌ದಾರಿ (ನಿಲುವಂಗಿ) ಧರಿಸಿ, ತಮ್ಮ ಮಕ್ಕಳು ವೇದಿಕೆ ಏರಿ ಅತಿಥಿಗಳಿಂದ ಗ್ರಾಜ್ಯುವೇಶನ್ ಸರ್ಟಿಫಿಕೆಟ್ ಪಡೆದು ಕಾಮೆರಾಮನ್ ಕಡೆಗೆ ನೋಡಿದಾಗ ಪಾಲಕರ ಮೊಗದಲ್ಲಿ ಮೂಡಿದ ಮಂದಹಾಸ ನನ್ನ ಮಕ್ಕಳಿಗಾಗಿ ಪಟ್ಟ ಶ್ರಮ ಸಾರ್ಥಕವಾಯಿತು ಎಂಬ ನೆಮ್ಮದಿಯ ಭಾವ ಪಾಲಕರಲ್ಲಿ ಕಂಡು ಬಂತು. ಇಂತಹ ವಾತಾವರಣ ಸೃಷ್ಟಿ ಮಾಡಿದ್ದು ಪ್ರೊ| ಬಿ.ಕೆ.ಕೊಣ್ಣೂರರವರು ಎಂದರು. ಡಾ| ಸಿದ್ರಾಮಪ್ಪ ಹೂಲಿ ಮಾತನಾಡಿ, ಮಕ್ಕಳು ಸೃಜನಾತ್ಮಕವಾಗಿದ್ದಾರೆ.
ಅವರಲ್ಲಿ ಅಡಗಿದ ಪ್ರತಿಭೆ ಇಂದಿನ ಸಮೂಹ ಸಂಪರ್ಕ ಮಾಧ್ಯಮಗಳು ಆಕರ್ಷಿಸುತ್ತಿವೆ. ಮಾಧ್ಯಮವನ್ನು ಸರಿಯಾಗಿ ಬಳಸಿಕೊಂಡರೆ ಪೂರಕ ಇಲ್ಲದಿದ್ದರೆ ಅಧ್ಯಯನಕ್ಕೆ ಮಾರಕವಾಗುವುದು ಎಂದು ಹೇಳಿದರು.
ಸಂಸ್ಥಾಪಕ ಪ್ರೊ| ಬಿ.ಕೆ. ಕೊಣ್ಣೂರ ಮಾತನಾಡಿ, ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಸಂಸ್ಥೆ ಸದಾಕಾಲ ಶ್ರಮಿಸುತ್ತಿದೆ. ಶೈಕ್ಷಣಿಕ ಚಟುವಟಿಕೆಗಳೊಂದಿಗೆ ಸಂಗೀತ, ಗಣಕಯಂತ್ರ , ಯೋಗ ತರಭೇತಿಗಳನ್ನು ನೀಡಲಾಗುವುದು ಎಂದು ಹೇಳಿದರು. ಮುಖ್ಯೋಪಾಧ್ಯಾಯರಾದ ಸಿದ್ದು ಬೆಳಗಲಿ, ಆಡಳಿತಾಧಿ ಕಾರಿ ಶೀತಲ್ ಕೊಣ್ಣೂರ, ಜಯವಂತ ಕಾಡದೇವರ, ಸಿದ್ರಾಮಪ್ಪ ಹೂಲಿ, ರಾಹುಲ್ ಪಟ್ಟಾಡಿ, ಸಿಬ್ಬಂದಿ ಉಪಸ್ಥಿತರಿದ್ದರು.