Advertisement
ದಕ್ಷಿಣ ಭಾರತ ಸೇರಿದಂತೆ ಬೆಂಗಳೂರಿನ ಬಹುತೇಕ ಪ್ರದೇಶಗಳಲ್ಲಿ ತನ್ನ ಮಳಿಗೆ ಹೊಂದಿರುವ ಪೈ ಇಂಟರ್ ನ್ಯಾಷನಲ್‌ನ ಹೊಸ ಮಳಿಗೆ ಕೆಂಗೇರಿ ರಿಂಗ್ ರಸ್ತೆಯ ನಾಗದೇವನಹಳ್ಳಿಯಲ್ಲಿ ಈಗ ಶುಭಾರಂಭಗೊಂಡಿದೆ.
Related Articles
Advertisement
ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ರಾಜಕುಮಾರ್ ಪೈ ಅವರು ಈ ಸಂದರ್ಭದಲ್ಲಿ ಮಾತನಾಡಿ, “ಇದು ನಮ್ಮ ಸಂಸ್ಥೆಯ 83ನೇ ಶೋರೂಂ ಆಗಿದ್ದು, 22 ಮೊಬೈಲ್ ಸ್ಟೋರ್, ರಾಜ್ಯದ ಬೇರೆ ಬೇರೆ ಭಾಗದಲ್ಲಿ 14, ತೆಲಂಗಾಣದಲ್ಲಿ 16, ಆಂಧ್ರದಲ್ಲಿ 1 ಹಾಗೂ ಬೆಂಗಳೂರಿನಲ್ಲಿ 30 ಶೋರೂಮ್‌ಗಳನ್ನು ನಾವು ಹೊಂದಿದ್ದೇವೆ. ಇದರಲ್ಲಿ ತಲಾ ಎರಡು ಸ್ಯಾಮಸಂಗ್ ಹಾಗೂ ಎಲ್‌ಜಿ ಮತ್ತು ಒಂದು ಸೋನಿ ಬ್ರ್ಯಾಂಡ್ ಶಾಪ್ ಜತೆಗೆ 25 ಮಲ್ಟಿ ಬ್ರ್ಯಾಂಡ್ ಸ್ಟೋರ್‌ಗಳು ಬೆಂಗಳೂರಿನಲ್ಲಿವೆ,’ ಎಂದರು.
“ಪೈ ಇಂಟರ್‌ನ್ಯಾಷನಲ್ ಎಲೆಕ್ಟ್ರಾನಿಕ್ಸ್‌ನ “ಹೆನ್ರಿ’ ಟಿವಿಗಳಿಗೆ ಉತ್ತಮ ಬೇಡಿಕೆಯಿದ್ದು, ಅತಿ ಶೀಘ್ರವದಲ್ಲೇ ಸ್ಮಾರ್ಟ್ ಮತ್ತು 4ಕೆ ಟಿವಿಯನ್ನು ಮಾರುಕಟ್ಟೆಗೆ ಪರಿಚಯಿಸಲಿದ್ದೇವೆ. ಗುಣಮಟ್ಟದ ಜತೆಗೆ ಅತ್ಯುತ್ತಮ ಸೇವೆ ಒದಗಿಸಲು ಪೈ ಇಂಟರ್‌ನ್ಯಾಷನಲ್ ಹೆಸರಾಗಿದೆ. ಗ್ರಾಹಕರ ವಿಶ್ವಾಸ ಗಳಿಸುವ ಮೂಲಕ ಕಳೆದ ವರ್ಷ 1050 ಕೋಟಿ ರಿಟೇಲ್ ವಹಿವಾಟು ನಡೆಸಿದ್ದೇವೆ.
ಈ ವರ್ಷ 1400 ಕೋಟಿ ರಿಟೇಲ್ ವಹಿವಾಟು ನಡೆಸುವ ಗುರಿ ಹೊಂದಿದ್ದೇವೆ. ಈ ಹಣಕಾಸು ವರ್ಷದಲ್ಲಿ 20 ಹೊಸ ಮಳಿಗೆಗಳನ್ನು ತೆರೆಯುವ ಉದ್ದೇಶವನ್ನು ಸಂಸ್ಥೆ ಹೊಂದಿದ್ದು, ಫರ್ನಿಚರ್ ಮಳಿಗೆ ಕ್ಷೇತ್ರವನ್ನೂ ಸಂಸ್ಥೆ ಪ್ರವೇಶಿಸಿದ್ದು, ಈಗಾಗಲೇ ಮೂರು ಮಳಿಗೆಗಳನ್ನು ಹೊಂದಿದೆ. ಶೀಘ್ರದಲ್ಲೇ ಇನ್ನೂ ಮೂರು ಹೊಸ ಪೀಠೊಪಕರಣ ಮಳಿಗೆಗಳನ್ನು ತೆರೆಯಲಿದ್ದೇವೆ,’ ಎಂದು ಮಾಹಿತಿ ನೀಡಿದರು.