Advertisement

Karkala: ಡಾ. ಟಿ.ಎಂ.ಎ. ಪೈ ರೋಟರಿ ಆಸ್ಪತ್ರೆಯಲ್ಲಿ 24*7 ಸಿಟಿ ಸ್ಕ್ಯಾನ್ ಸೌಲಭ್ಯ ಉದ್ಘಾಟನೆ

04:08 PM Nov 08, 2024 | Team Udayavani |

ಕಾರ್ಕಳ/ಮಣಿಪಾಲ: ಆರೋಗ್ಯ ಸೇವೆಗಳ ಪ್ರಗತಿಯತ್ತ ಮಹತ್ವದ ಹೆಜ್ಜೆಯಾಗಿ ಕಾರ್ಕಳದ ಡಾ.ಟಿಎಂಎ ಪೈ ರೋಟರಿ ಆಸ್ಪತ್ರೆಯು ಅತ್ಯಾಧುನಿಕ 24*7 ಸಿಟಿ ಸ್ಕ್ಯಾನ್ ಸೌಲಭ್ಯ ಉದ್ಘಾಟಿಸಲಾಯಿತು.

Advertisement

ರೋಗಿಗಳ ಆರೈಕೆಗಾಗಿ ಆಸ್ಪತ್ರೆಯ ರೋಗನಿರ್ಣಯದ ಸಾಮರ್ಥ್ಯ ಹೆಚ್ಚಿಸಿದೆ. ಈ ಅತ್ಯಾಧುನಿಕ ಸೌಲಭ್ಯ 16-ಸ್ಲೈಸ್ ಸಿಟಿ ಸ್ಕ್ಯಾನರ್ ಹೊಂದಿದೆ. ಇದು ಹೆಚ್ಚಿನ ರೆಸಲ್ಯೂಶನ್ ಇಮೇಜಿಂಗ್ (ನಿಖರವಾದ ಚಿತ್ರಣ) ಮತ್ತು ತ್ವರಿತವಾದ ವರದಿ ನೀಡುವುದರಿಂದ ತ್ವರಿತವಾಗಿ ರೋಗನಿರ್ಣಯದ ಮೂಲಕ ಸುಧಾರಿತ ಚಿಕಿತ್ಸೆ ಸಕ್ರಿಯಗೊಳಿಸಲು ಸಹಾಯ ಮಾಡುತ್ತದೆ.

ಮಣಿಪಾಲ್ ಹೆಲ್ತ್ ಎಂಟರ್‌ಪ್ರೈಸಸ್ ಪ್ರೈವೇಟ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ದಿಲೀಪ್ ಜೋಸ್ ಸಿಟಿ ಸ್ಕ್ಯಾನ್ ಸೌಲಭ್ಯ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮಾಹೆ ಸಹ ಕುಲಾಧಿಪತಿ ಡಾ ಎಚ್.ಎಸ್. ಬಲ್ಲಾಳ್, ಡಾ. ಟಿಎಂಎ ಪೈ ರೋಟರಿ ಆಸ್ಪತ್ರೆಯಲ್ಲಿ  24*7 ಸಿ ಟಿ  ಸ್ಕ್ಯಾನ್ ಸೌಲಭ್ಯವನ್ನು ಪ್ರಾರಂಭಿಸುತ್ತಿರುವುದು  ಸಮುದಾಯಕ್ಕೆ ಉನ್ನತ ದರ್ಜೆಯ ಆರೋಗ್ಯ ಸೇವೆಯನ್ನು ಒದಗಿಸುವ ನಮ್ಮ ಬದ್ಧತೆಯ ಪ್ರಮುಖ ಹೆಜ್ಜೆಯಾಗಿದೆ ಎಂದರು.

Advertisement

ಈ ಸಂದರ್ಭದಲ್ಲಿ, ಮಾಹೆ ಉಪಕುಲಪತಿ ಲೆಫ್ಟಿನೆಂಟ್ ಜನರಲ್ (ಡಾ.) ಎಂ.ಡಿ.  ವೆಂಕಟೇಶ್ VSM (ನಿವೃತ್ತ) ಮಾತನಾಡಿ, ಗುಣಮಟ್ಟದ ವೈದ್ಯಕೀಯ ಸೇವೆಗಳು ಎಲ್ಲರಿಗೂ ದೊರಕಬೇಕು ಎಂಬ ನಮ್ಮ ಧ್ಯೇಯವನ್ನು ಪ್ರತಿಬಿಂಬಿಸುತ್ತದೆ ಎಂದರು.

ಮಣಿಪಾಲ ಹೆಲ್ತ್‌ಮ್ಯಾಪ್ ಡಯಾಗ್ನೋಸ್ಟಿಕ್ಸ್ ಪ್ರೈ.ಲಿ.ನ ಮುಖ್ಯ ರೇಡಿಯಾಲಜಿಸ್ಟ್ ಹಾಗೂ ಪ್ರಾದೇಶಿಕ ಮುಖ್ಯಸ್ಥ ಡಾ ಸಂದೀಪ್ ಬಲ್ಲಾಳ್ ಆಸ್ಪತ್ರೆಯಲ್ಲಿ ಪರಿಚಯಿಸಲಾದ ಸುಧಾರಿತ ಸಿ ಟಿ ಸ್ಕ್ಯಾನ್ ಸಾಮರ್ಥ್ಯಗಳ ಪರಿಚಯ ನೀಡಿದರು.

ಈ ಸಂದರ್ಭದಲ್ಲಿ ಮಾಹೆ ಟ್ರಸ್ಟಿ ವಸಂತಿ ಆರ್.ಪೈ., ಮಾಹೆಯ ಆರೋಗ್ಯ ವಿಜ್ಞಾನಗಳ ಸಹ ಉಪಕುಲಪತಿ ಡಾ. ಶರತ್ ಕುಮಾರ್ ರಾವ್, ಮಾಹೆಯ ಸಿ ಓ ಓ ಡಾ. ರವಿರಾಜ್ ಎನ್.ಎಸ್., ಕೆ ಎಂ ಸಿ  ಮಣಿಪಾಲ ಡೀನ್ ಡಾ. ಪದ್ಮರಾಜ್ ಹೆಗ್ಡೆ, ಡಾ. ಟಿಎಂಎ ಪೈ ರೋಟರಿ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಕೀರ್ತಿನಾಥ ಬಲ್ಲಾಳ್, ಮಾಹೆಯ ಬೋಧನಾ ಆಸ್ಪತ್ರೆಗಳ ಸಿಒಒ ಡಾ. ಆನಂದ್ ವೇಣುಗೋಪಾಲ್, ರೋಟರಿ ಕ್ಲಬ್ ಆಫ್ ಕಾರ್ಕಳ ರಾಕ್ ಸಿಟಿ ಅಧ್ಯಕ್ಷ ಆರ್.ಟಿ. ಉಪೇಂದ್ರ ವಾಗ್ಲೆ, ರೋಟರಿ ಕ್ಲಬ್ ಆಫ್ ಕಾರ್ಕಳ ಅಧ್ಯಕ್ಷ ಆರ್. ಇಕ್ಬಾಲ್ ಅಹಮದ್ ಹಾಗೂ ಹಿರಿಯ ರೋಟರಿ ಸದಸ್ಯರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next