ಹೇಗ್: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತು ಮಾಜಿ ರಕ್ಷಣ ಸಚಿವ ಯೋವ್ ಗ್ಯಾಲಂಟ್ ಅವರಿಗೆ ಯುದ್ಧ ಅಪರಾಧಗಳು ಮತ್ತು ಮಾನವೀಯತೆಯ ವಿರುದ್ಧದ ಅಪರಾಧಗಳ ಕುರಿತು ಅಂತಾರಾಷ್ಟ್ರೀಯ ಕ್ರಿಮಿನಲ್ ಕೋರ್ಟ್ (ICC) ಗುರುವಾರ(ನ21)ಬಂಧನ ವಾರಂಟ್ ಹೊರಡಿಸಿದೆ.
ನೆತನ್ಯಾಹು ಮತ್ತು ಗ್ಯಾಲಂಟ್ರನ್ನು ಕೊಲೆ, ಕಿರುಕುಳ ಮತ್ತು ಅಮಾನವೀಯ ಕೃತ್ಯಗಳನ್ನು ಒಳಗೊಂಡಂತೆ ಮಾನವೀಯತೆಯ ವಿರುದ್ಧದ ಅಪರಾಧಗಳನ್ನು ಆರೋಪವನ್ನು ICC ಹೊರಿಸಿದೆ.
ಯುದ್ಧದ ವಿಧಾನ ಹಸಿವಿನ ಯುದ್ಧದ ಅಪರಾಧವಾಗಿದ್ದು, ಗಾಜಾದಲ್ಲಿ ನಾಗರಿಕರಿಗೆ ಆಹಾರ, ನೀರು ಮತ್ತು ವೈದ್ಯಕೀಯ ಸಹಾಯದಂತಹ ಅಗತ್ಯ ಸರಬರಾಜುಗಳನ್ನು ನಿರ್ಬಂಧಿಸಿದ್ದಾರೆ ಎಂದು ಆರೋಪಿಸಲಾಗಿದೆ. ಮಕ್ಕಳನ್ನೂ ಒಳಗೊಂಡಂತೆ ತೀವ್ರವಾದ ಮಾನವೀಯ ಬಿಕ್ಕಟ್ಟುಗಳು ಮತ್ತು ಸಾವುಗಳಿಗೆ ಕಾರಣವಾಗಿದೆ ಎಂದು ಆರೋಪ ಹೊರಿಸಲಾಗಿದೆ.
ಉದ್ದೇಶಪೂರ್ವಕವಾಗಿ ನಾಗರಿಕರನ್ನು ಮತ್ತು ಸೀಮಿತ ವೈದ್ಯಕೀಯ ಸರಬರಾಜುಗಳನ್ನು ಗುರಿಯಾಗಿಸಿಕೊಂಡಿದ್ದಾರೆ ಎಂದು ನಂಬಲು ಸಮಂಜಸವಾದ ಆಧಾರಗಳನ್ನು ಕಂಡುಕೊಳ್ಳಲಾಗಿದೆ ಎಂದು ನ್ಯಾಯಾಲಯ ಹೇಳಿದೆ. ನ್ಯಾಯಾಲಯದ ತೀರ್ಪು 2023 ಅಕ್ಟೋಬರ್ 8 ರಿಂದ 2024, ಮೇ 20 ರವರೆಗಿನ ಸಂಶೋಧನೆಗಳನ್ನು ಆಧರಿಸಿದ್ದಾಗಿದೆ.
“ಗಾಜಾದ ನಾಗರಿಕರ ವಿರುದ್ಧ ಉದ್ದೇಶಪೂರ್ವಕವಾಗಿ ದಾಳಿಗಳನ್ನು ನಿರ್ದೇಶಿಸುವ ಯುದ್ಧ ಅಪರಾಧಕ್ಕಾಗಿ ನೆತನ್ಯಾಹು ಮತ್ತು ಗ್ಯಾಲಂಟ್ ಅವರು ನಾಗರಿಕ ಮೇಲಧಿಕಾರಿಗಳಾಗಿ ಕ್ರಿಮಿನಲ್ ಹೊಣೆಗಾರಿಕೆಯನ್ನು ಹೊಂದಿದ್ದಾರೆ ಎಂದು ನಂಬಲು ಸಮಂಜಸವಾದ ಆಧಾರಗಳಿವೆ ಎಂದು ಚೇಂಬರ್ ನಿರ್ಣಯಿಸಿದೆ” ಎಂದು ನ್ಯಾಯಾಲಯ ಹೇಳಿದೆ.
ಪ್ಯಾಲೆಸ್ತೀನ್ ನಲ್ಲಿನ ಪರಿಸ್ಥಿತಿಯಲ್ಲಿ ತನ್ನ ಅಧಿಕಾರ ವ್ಯಾಪ್ತಿಯ ವಿರುದ್ಧ ಇಸ್ರೇಲ್ ಮಾಡಿದ ಎರಡು ಸವಾಲುಗಳನ್ನು ಅಂತಾರಾಷ್ಟ್ರೀಯ ಕ್ರಿಮಿನಲ್ ಕೋರ್ಟ್ ವಜಾಗೊಳಿಸಿದೆ.