Advertisement

Udupi: ಎಂಜಿಎಂ ಕಾಲೇಜಿನಲ್ಲಿ ನ.29 ರಿಂದ ಡಿ.1ವರೆಗೆ ಅಮೃತ ಮಹೋತ್ಸವ ಸಂಭ್ರಮ

10:29 AM Nov 21, 2024 | Team Udayavani |

ಉಡುಪಿ: ಮಹಾತ್ಮ ಗಾಂಧಿ ಮೆಮೋರಿಯಲ್‌ ಕಾಲೇಜಿನ ಅಮೃತ ಮಹೋತ್ಸವ ನ.29ರಿಂದ ಡಿ.1ರ ವರೆಗೆ ಕಾಲೇಜಿನಲ್ಲಿ ನಡೆಯಲಿದೆ ಎಂದು ಅಕಾಡೆಮಿ ಆಫ್ ಜನರಲ್‌ ಎಜುಕೇಶನ್‌ (ಎಜಿಇ) ಕಾರ್ಯದರ್ಶಿ ಬಿ.ಪಿ. ವರದರಾಯ ಪೈ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

Advertisement

ನ.29ರಂದು ಬೆಳಗ್ಗೆ 9ಕ್ಕೆ ಟಿ. ಮೋಹನದಾಸ ಪೈ ಮೆಮೋರಿಯಲ್‌ “ಅಮೃತ ಸೌಧ’ದ ಉದ್ಘಾಟನೆಯನ್ನು ಕಾಲೇಜು ಟ್ರಸ್ಟ್‌ ಅಧ್ಯಕ್ಷ ಟಿ. ಸತೀಶ್‌ ಯು. ಪೈ ನೆರವೇರಿಸಲಿದ್ದಾರೆ. ಶ್ರೀ ಕೃಷ್ಣಾಪುರ ಮಠಾಧೀಶರಾದ ಶ್ರೀ ವಿದ್ಯಾಸಾಗರತೀರ್ಥ ಸ್ವಾಮೀಜಿ ಉಪಸ್ಥಿತರಿರುವರು. ಬೆಳಗ್ಗೆ 9.30ಕ್ಕೆ ಜಿಲ್ಲಾ ಧಿಕಾರಿ ಡಾ| ಕೆ. ವಿದ್ಯಾಕುಮಾರಿ ವಸ್ತು ಪ್ರದರ್ಶನವನ್ನು ಉದ್ಘಾಟಿಸುವರು. ಇದೇ ವೇಳೆ ಅಂಚೆ ಲಕೋಟೆ ಬಿಡುಗಡೆ ನಡೆಯಲಿದೆ.

ಶಾಸಕ ಯಶ್‌ಪಾಲ್‌ ಎ.ಸುವರ್ಣ, ಮಣಿಪಾಲ ಎಜಿಇ ರಿಜಿಸ್ಟ್ರಾರ್‌ ರಂಜನ್‌ ಆರ್‌. ಪೈ, ಟಿಎಂಎ ಪೈ ಫೌಂಡೇಶನ್‌ ಅಧ್ಯಕ್ಷ ಅಶೋಕ್‌ ಪೈ, ಎಂಜಿಎಂ ಕಾಲೇಜಿನ ಟ್ರಸ್ಟಿ ವಸಂತಿ ಆರ್‌. ಪೈ, ಎಜಿಇ ಅಧ್ಯಕ್ಷ, ಮಾಹೆ ಸಹ ಕುಲಾಧಿಪತಿ ಡಾ| ಎಚ್‌.ಎಸ್‌.ಬಲ್ಲಾಳ್‌, ಸಹ ಕುಲಪತಿ ಡಾ| ನಾರಾಯಣ ಸಭಾಹಿತ್‌, ಬೆಂಗಳೂರು ಉತ್ತರ ವಿ.ವಿ.ಯ ಕುಲಪತಿ ಡಾ| ನಿರಂಜನ ವಾನಳ್ಳಿ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಮಧ್ಯಾಹ್ನ 12ಕ್ಕೆ ಆಡಳಿತ ಮಂಡಳಿ ಸದಸ್ಯರಿಗೆ ಗೌರವಾರ್ಪಣೆ, 2 ಗಂಟೆಗೆ ವಿಶ್ರಾಂತ ಪ್ರಾಂಶುಪಾಲರು, ಬೋಧಕ ಹಾಗೂ ಬೋಧಕೇತರ ಸಿಬಂದಿಗೆ ಗೌರವಾರ್ಪಣೆ ನಡೆಯಲಿದೆ ಎಂದರು.

ಪ್ರಾಂಶುಪಾಲ ಪ್ರೊ| ಲಕ್ಷ್ಮೀನಾರಾ ಯಣ ಕಾರಂತ ಮಾತನಾಡಿ, ನ.30ರಂದು ಬೆಳಗ್ಗೆ 8.15ಕ್ಕೆ ನಡೆಯುವ ಶೋಭಾಯಾತ್ರೆಗೆ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಶ್ರೀ ಕೃಷ್ಣಮಠದ ಆವರಣದಲ್ಲಿ ಜ್ಯೋತಿ ಹಸ್ತಾಂತರಿಸಲಿದ್ದು, 9ಕ್ಕೆ ಗಾಂಧಿ ಮೈನ್‌ ಸ್ಕೂಲಿನಿಂದ ಡಾ| ರಂಜನ್‌ ಆರ್‌. ಪೈ ಶೋಭಾಯಾತ್ರೆಗೆ ಚಾಲನೆ ನೀಡಲಿದ್ದಾರೆ. ಕಾಲೇಜಿನ ವರೆಗೆ ಶೋಭಾಯಾತ್ರೆ ನಡೆಯಲಿದೆ. ಬೆಳಗ್ಗೆ 11.30ಕ್ಕೆ “ಎಂಜಿಎಂ ನೆನಪು’ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ 12.30ರಿಂದ ಎಂಜಿಎಂ ಕಾಲೇಜು ನಡೆದು ಬಂದ ದಾರಿಯ ಕುರಿತು ಸಾಕ್ಷ್ಯಚಿತ್ರ ಪ್ರದರ್ಶನ ನಡೆಯಲಿದೆ ಎಂದರು.

ಡಿ.1ರಂದು ಬೆಳಗ್ಗೆ 9.30ರಿಂದ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯ ಕ್ರಮ, 11ಕ್ಕೆ ಹಳೆ ವಿದ್ಯಾರ್ಥಿಗಳ ಕಾರ್ಯಕ್ರಮ ನಡೆಯಲಿದ್ದು, ನೀತಿ ಆಯೋಗದ ಸದಸ್ಯ ಹಾಗೂ ಹೈದರಾಬಾದ್‌ ಪವರ್‌ ಫೈನಾನ್ಸ್‌ ಕಾರ್ಪೊರೇಷನ್‌ನ ಸಹ ಪ್ರಾಧ್ಯಾಪಕ ಪ್ರೊ| ಪ್ರಸನ್ನ ತಂತ್ರಿ ಮುಖ್ಯ ಅತಿಥಿ ಯಾಗಿರಲಿದ್ದಾರೆ. 3.30ರಿಂದ ಸಮಾ ರೋಪ ನಡೆಯಲಿದೆ. ಪೇಜಾವರ ಶ್ರೀಗಳು ಭಾಗವಹಿಸಲಿದ್ದು, ಎಂಜಿಎಂ ಕಾಲೇಜು ಟ್ರಸ್ಟ್‌ ಅಧ್ಯಕ್ಷ ಟಿ. ಸತೀಶ್‌ ಯು. ಪೈ ಅಧ್ಯಕ್ಷತೆ ವಹಿಸಲಿದ್ದಾರೆ.

Advertisement

ಮುಖ್ಯ ಅತಿಥಿಗಳಾಗಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಟಾಳ್ಕರ್‌, ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಯಶ್‌ಪಾಲ್‌ ಸುವರ್ಣ, ಮಂಗಳೂರು ವಿ.ವಿ. ಕುಲಪತಿ ಪ್ರೊ| ಪಿ.ಎಲ್‌.ಧರ್ಮ, ಪ್ರಾದೇಶಿಕ ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕ ಪ್ರೊ| ರಾಮೇಗೌಡ, ಡಿಡಿಪಿಯು ಮಾರುತಿ ಮುಖ್ಯ ಅತಿಥಿ ಗಳಾಗಿರುವರು. ಸಂಜೆ 5.30ರಿಂದ ಶ್ರೀ ವಿದ್ಯಾಭೂಷಣ ಮತ್ತು ಮೇಧಾ ಹಿರಣ್ಯಯಿ ಬೆಂಗಳೂರು ಇವರಿಂದ ಸಂಗೀತ ನಡೆಯಲಿದೆ ಎಂದರು.

ಪ.ಪೂ. ವಿಭಾಗದ ಪ್ರಾಂಶುಪಾಲೆ ಮಾಲತಿ ದೇವಿ ಎ., ಸಂಧ್ಯಾ ಕಾಲೇಜಿನ ಪ್ರಾಂಶುಪಾಲ ಡಾ| ದೇವಿದಾಸ ಎಸ್‌. ನಾಯ್ಕ, ವಿದ್ಯಾರ್ಥಿ ಕ್ಷೇಮಪಾಲನ ಅಧಿಕಾರಿ ಅರುಣ್‌ ಕುಮಾರ್‌, ಕಂಪ್ಯೂ ಟರ್‌ ಸಯನ್ಸ್‌ ವಿಭಾಗದ ಮುಖ್ಯಸ್ಥ ಡಾ| ವಿಶ್ವನಾಥ ಪೈ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರೊ| ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ, ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಸುಚಿತ್‌ ಕೋಟ್ಯಾನ್‌, ಸಂಸ್ಕೃತ ಉಪನ್ಯಾಸಕ ಮುರಳೀಧರ್‌, ಉಪನ್ಯಾಸಕ ಮನೋಷ್‌ ಕುಮಾರ್‌ ಎನ್‌. ಉಪಸ್ಥಿತರಿದ್ದರು.

75 ವರ್ಷ ಪೂರ್ಣ
1949ರಲ್ಲಿ ಡಾ| ಟಿ.ಎಂ.ಎ.ಪೈಗಳ ಕನಸಾಗಿ ಆರಂಭವಾದ ಉಡುಪಿಯ ಮೊತ್ತ ಮೊದಲ ಕಾಲೇಜು ಎಂಜಿಎಂ 75 ವರ್ಷಗಳನ್ನು ಪೂರ್ತಿಗೊಳಿಸಿದೆ. ಉಡುಪಿಯ ಗಾಂಧಿ ಮೈನ್‌ ಶಾಲೆಯಲ್ಲಿ ಆರಂಭವಾದ ಈ ಕಾಲೇಜು ಮರುವರ್ಷವೇ ಈಗಿನ ಸುಂದರ ಕ್ಯಾಂಪಸ್‌ಗೆ ಸ್ಥಳಾಂತರಗೊಂಡು ತನ್ನ ಗುಣಮಟ್ಟದ ಶಿಕ್ಷಣ ಹಾಗೂ ಸಾಂಸ್ಕೃತಿಕ ಪರಂಪರೆಯಿಂದ ಜನಮನ ಗೆದ್ದಿದೆ ಎಂದು ಬಿ.ಪಿ. ವರದರಾಯ ಪೈ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next