Advertisement

ಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆ ಬಿಡುಗಡೆ

11:36 PM Jan 27, 2020 | Lakshmi GovindaRaj |

ಕಲಬುರಗಿ: ನಗರದಲ್ಲಿ ಫೆ. 5, 6 ಮತ್ತು 7ರಂದು ನಡೆಯುವ 85ನೇ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ 21 ಪುಟಗಳ ಆಮಂತ್ರಣ ಪತ್ರಿಕೆಯನ್ನು ಸೋಮವಾರ ಹಿರಿಯ ಸಾಹಿತಿ, ನಾಡೋಜ ಡಾ|ಗೀತಾ ನಾಗಭೂಷಣ ಬಿಡುಗಡೆಗೊಳಿಸಿದರು. ಜತೆಗೆ ಸಮ್ಮೇಳನದ ಪ್ರಚಾರಾರ್ಥಎರಡು ಸಿಡಿಗಳನ್ನೂ ಬಿಡುಗಡೆ ಮಾಡಲಾಯಿತು.

Advertisement

ಆಮಂತ್ರಣ ಪತ್ರಿಕೆ ಮುಖಪುಟ ಜಿಲ್ಲೆಯ ವೈಶಿಷ್ಟತೆ ಬಿಂಬಿಸುವ ಸಮ್ಮೇಳನ ಲಾಂಛನ, ಕನ್ನಡಾಂಬೆ ಚಿತ್ರ, ಸಮ್ಮೇಳನದ ದಿನಾಂಕ ಹಾಗೂ ಸಮ್ಮೇಳನಾಧ್ಯಕ್ಷರಾದ ಡಾ|ಎಚ್‌.ಎಸ್‌.ವೆಂಕಟೇಶಮೂರ್ತಿ ಅವರ ಭಾವಚಿತ್ರ ಹೊಂದಿದೆ. ಪತ್ರಿಕೆ ಹಸಿರು ಬಣ್ಣದಿದ್ದು, ಪ್ರಕೃತಿ ಹಾಗೂ ಸಂಭ್ರಮದ ಸಂಕೇತ. ಕಣ್ಣಿಗೆ ತಂಪು ಎಂದು ಅವರು ಬಣ್ಣಿಸಿದರು.

ಪ್ರಧಾನ ವೇದಿಕೆಗೆ ಕನ್ನಡ ಮೊದಲ ಉಪಲಬ್ಧ ಕೃತಿ ಕವಿರಾಜ ಮಾರ್ಗ ನೀಡಿದ ಶ್ರೀವಿಜಯ, ಮಹಾದ್ವಾರಕ್ಕೆ ತತ್ವ ಪದಕಾರ ಕಡಕೋಳ ಮಡಿವಾಳಪ್ಪ ಹಾಗೂ ದ್ವಾರಗಳಿಗೆ ಡಾ|ಸಿದ್ದಯ್ಯ ಪುರಾಣಿಕ, ಡಾ| ಶಾಂತರಸ ಹಾಗೂ ಪೂಜ್ಯ ದೊಡ್ಡಪ್ಪ ಅಪ್ಪರ ಹೆಸರಿಡಲಾಗಿದೆ. ಎರಡು ಸಮನಾಂತರ ವೇದಿಕೆಗಳಿಗೆ ಡಾ| ಚನ್ನಣ್ಣ ವಾಲೀಕಾರ ಹಾಗೂ ಡಾ|ಎಂ.ಎಸ್‌.ಲಠೆ ಹೆಸರಿಡಲಾಗಿದೆ. ಫೆ. 5ರಂದು 8.30ಕ್ಕೆ ಸಮ್ಮೇಳನಾಧ್ಯಕ್ಷರ ಮೆರವಣಿಗೆ ನಡೆಯಲಿದ್ದು, ಬೆಳಿಗ್ಗೆ 11ಗಂಟೆಗೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಸಮ್ಮೇಳನ ಉದ್ಘಾಟಿಸುವರು.

Advertisement

Udayavani is now on Telegram. Click here to join our channel and stay updated with the latest news.

Next