Advertisement

Udupi: ಪ್ರಾಚ್ಯ ವಿದ್ಯಾ ಸಮ್ಮೇಳನ: ಚೀನಾದಲ್ಲೂ ಭಾರತದ ಜ್ಞಾನದ ಕುರಿತು ಮಾಹಿತಿ ಇದೆ:ಭಾಟೇ

07:39 PM Oct 24, 2024 | Team Udayavani |

ಉಡುಪಿ:’ಪೌರ್ವಾತ್ಯ ಜ್ಞಾನ ಕೇವಲ ಒಂದು ಭಾಷೆಯಲ್ಲಿ ಇರೋದು ಮಾತ್ರ ಅಲ್ಲ. ಬಹುಭಾಷೆಗಳಲ್ಲಿ ಬಹುರೂಪದಲ್ಲಿ ಪ್ರಕಟಗೊಂಡಿದೆ’ ಎಂದು ಸರೋಜಾ ಭಾಟೇ ಹೇಳಿದರು.

Advertisement

ಬೆಂಗಳೂರಿನ ಭಾರತೀಯ ವಿದ್ವತ್‌ ಪರಿಷತ್‌ (BVP), ಪರ್ಯಾಯ ಶ್ರೀಪುತ್ತಿಗೆ ಮಠ, ಹೊಸದಿಲ್ಲಿಯ ಕೇಂದ್ರೀಯ ಸಂಸ್ಕೃತ ವಿ.ವಿ. ಸಹಯೋಗದೊಂದಿಗೆ ಗುರುವಾರ(ಅ24) ಶ್ರೀಕೃಷ್ಣಮಠದ ರಾಜಾಂಗಣದಲ್ಲಿ ಆರಂಭಗೊಂಡ ಮೂರು ದಿನಗಳ ಅಖಿಲ ಭಾರತ ಪ್ರಾಚ್ಯವಿದ್ಯಾ ಸಮ್ಮೇಳನ ಉದ್ಘಾಟನ ಸಭೆಯಲ್ಲಿ ಮಾತನಾಡಿದ ಎಐಒಸಿಯ ಸಮ್ಮೇಳನದ ಅಧ್ಯಕ್ಷೆ ಸರೋಜಾ ಭಾಟೇ , ”ಭಾಷೆ, ಧರ್ಮ, ದೇಶ ಮೀರಿದ ಒಂದು ಜ್ಞಾನ ವಾಗಿ ಓರಿಯಂಟಲ್ ಪರಿಭಾಷೆಯನ್ನು ಗ್ರಹಿಸಬೇಕು. ಇದು ಸಂಸ್ಕೃತ, ಪಾಕೃತ, ಪಾಲಿ, ಪರ್ಷಿಯನ್ ಇರಾನಿಯನ್ ಎಲ್ಲವೂ ಆಗಿರುವ ಮಹಾಜ್ಞಾನ. ಚೀನಾದಲ್ಲೂ ಭಾರತ ಜ್ಞಾನ ದ ಕುರಿತು ಮಾಹಿತಿ ಇದೆ. 1 ಸಾವಿರ ವರ್ಷಗಳ ಕಾಲ ಭಾರತೀಯ ಜ್ಞಾನ ಇಡೀ ಪ್ರಪಂಚವನ್ನೇ ಆಳಿತ್ತು ಅನ್ನೋದು ಕೂಡ ಸಂಶೋಧನೆಯಿಂದ ಗೊತ್ತಾಗುತ್ತದೆ’ ಎಂದರು.

ಚ ಮೂ ಕೃಷ್ಣ ಶಾಸ್ತ್ರಿ ಮಾತು :
‘ಪೌರ್ವಾತ್ಯ ಎಂಬ ಕಲ್ಪನೆ ಬ್ರಿಟಿಷ್ ಕಾಲದಲ್ಲಿ ಲಂಡನ್ ಮುಖ್ಯ ಕೇಂದ್ರ ವಾಗಿಟ್ಟು ಮಾಡಿದ್ದು. ಆದರೆ ಈಗ ಇದು ಕಳೆದ 100 ವರ್ಷದಲ್ಲಿ ಮಹತ್ತರ ಬದಲಾವಣೆ ಕಂಡಿದೆ. ಭಾರತೀಯ ಜ್ಞಾನದ ಮಹತ್ವ, ಮತ್ತು ಶ್ರೇಷ್ಠತೆಯನ್ನು ಇದು ಸ್ಥಾಪಿಸಿದೆ. ಮುಂದಿನ ದಿನಗಳು ಭಾರತೀಯ ಭಾಷಾಕೇಂದ್ರಿತ ಒಂದು ಇಕೋ ಸಿಸ್ಟಮ್ ಆಗಿ ಬದಲಾಗಬೇಕು. ಈಗ ನಾವು ಅಧ್ಯಯನ ಮಾಡುತ್ತಿರುವ ಇಂಗ್ಲಿಷ್ ನಲ್ಲಿಯ ಭಾರತೀಯ ಜ್ಞಾನ ಸೆಕೆಂಡರಿ ಸೋರ್ಸ್. ನಮಗೆ ಪ್ರೈಮರಿ ಸೋರ್ಸ್ ಬೇಕಾದ್ರೆ ಸಂಸ್ಕೃತ ಸೇರಿದಂತೆ ಭಾರತೀಯ ಎಲ್ಲ ಭಾಷೆಗಳೇ ಬೇಕು. ಇಂತಹ ಕಾರ್ಯಕ್ರಮ ಎಐಒಸಿ ಮೂಲಕ ಸಾಧ್ಯವಾಗುತ್ತಿದೆ’ಎಂದರು.

Advertisement

Udayavani is now on Telegram. Click here to join our channel and stay updated with the latest news.

Next