Advertisement

ಲಂಕಾ ಸಚಿವನನ್ನು”ಮಂಕಿ’ಗೆ ಹೋಲಿಸಿ ಮಾಲಿಂಗ ವಿವಾದ

10:18 AM Jun 23, 2017 | Team Udayavani |

ಕೊಲಂಬೊ: ಶ್ರೀಲಂಕಾ ಸರ್ಕಾರದ ಕ್ರೀಡಾ ಸಚಿವನನ್ನೇ “ಮಂಕಿ’ಗೆ ಹೋಲಿಸಿದ ವೇಗದ ಬೌಲರ್‌ ಲಸಿತ್‌ ಮಾಲಿಂಗ
ಈಗ ವಿವಾದಕ್ಕೊಳಗಾಗಿದ್ದಾರೆ. ಸದ್ಯ ಮಾಲಿಂಗ ವಿರುದ್ಧ ಪ್ರಕರಣ ದಾಖಲಾಗಿದ್ದು ತನಿಖೆಗೆ ಆದೇಶಿಸಲಾಗಿದೆ. 

Advertisement

ಇತ್ತೀಚೆಗೆ ಚಾಂಪಿಯನ್ಸ್‌ ಟ್ರೋಫಿನಲ್ಲಿ ಹಲವಾರು ಕ್ಯಾಚ್‌ಗಳನ್ನು ಬಿಟ್ಟಿತ್ತು. ಮಾಲಿಂಗ ಪಾಕ್‌ ವಿರುದ್ಧದ ಪಂದ್ಯದಲ್ಲಿ ಪ್ರಮುಖ ಕ್ಯಾಚ್‌ ಬಿಟ್ಟಿದ್ದರು. ಇದನ್ನು ಕ್ರೀಡಾ ಸಚಿವ ದಯಾಸಿರಿ ಜಯಶೇಖರ ಟೀಕಿಸಿದ್ದರು. ಇದಕ್ಕೆ ಪ್ರತಿಯಾಗಿ ಟೀವಿ
ಕಾರ್ಯಕ್ರಮವೊಂದರಲ್ಲಿ ಮಾಲಿಂಗ ಪ್ರತಿಕ್ರಿಯಿಸಿ, ಟೀಕೆಗಳ ಬಗ್ಗೆ ಮಾತನಾಡಲಾರೆ. ಕ್ರೀಡಾ ಸಚಿವರಿಗೆ ಕ್ರಿಕೆಟ್‌ ಬಗ್ಗೆ ಏನು ಗೊತ್ತಿದೆ? ಎನ್ನುವ ಶೈಲಿಯಲ್ಲಿ ಪ್ರತಿಕ್ರಿಯಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next