ಬೆಂಗಳೂರು: ಕಾರಿನ ಕಿಟಕಿ ಗಾಜು ಒಡೆದು ಲ್ಯಾಪ್‌ಟಾಪ್‌ಗ್ಳನ್ನು ಕಳವು ಮಾಡುತ್ತಿದ್ದ ಆರೋಪಿಯನ್ನು ಜಯ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ತಮಿಳುನಾಡಿನ ಸದ್ದಾನಾಯ್ಡು (32) ಬಂಧಿತ. ಆರೋಪಿಯಿಂದ 12 ಲಕ್ಷ ರೂ. ಮೌಲ್ಯದ 17 ಲ್ಯಾಪ್‌ಟಾಪ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಈತನ ಸಹೋದರ ಗಂಗೇಶ್ ಎಂಬಾತ ತಲೆಮರೆಸಿಕೊಂಡಿದ್ದು, ಆತನಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.
ಸದ್ದಾನಾಯ್ಡು ಮತ್ತು ಈತನ ಸಹೋದರ ಗಂಗೇಶ್, ವಿದ್ಯಾಭ್ಯಾಸವನ್ನು ಅರ್ಧಕ್ಕೆ ಮೊಟಕುಗೊಳಿಸಿದ್ದು, ಸೇಲಂನಲ್ಲಿ ಕೃಷಿ ಕೆಲಸ ಮಾಡಿಕೊಂಡಿದ್ದಾರೆ. ಜತೆಗೆ ವಾರಕ್ಕೆ 2-3 ಬಾರಿ ಸೇಲಂನಿಂದಲೇ ಬೈಕ್‌ನಲ್ಲಿ ಬೆಂಗಳೂರಿಗೆ ಬರುತ್ತಿದ್ದರು. ಬಳಿಕ ಟೆಕಿಗಳು ಹೆಚ್ಚು ಸೇರುವ ಕಾಫಿ ಡೇ, ಹೋಟೆಲ್‌ಗಳು, ಪಬ್ ಹಾಗೂ ರೆಸ್ಟೋರೆಂಟ್‌ಗಳ ಬಳಿ ಬಂದು ಕಾರಿನ ಒಳಗಡೆ ಪರಿಶೀಲಿಸುತ್ತಿದ್ದರು. ಒಂದು ವೇಳೆ ಲ್ಯಾಪ್‌ಟಾಪ್ ಬ್ಯಾಗ್ ಕಂಡು ಬಂದರೆ, ಕೂಡಲೇ ಕಾರಿನ ಕಿಟಕಿಯ ಗಾಜು ಒಡೆದು ಕಾರಿನಲ್ಲಿದ್ದ ಲ್ಯಾಪ್‌ಟಾಪ್‌ಗಳನ್ನು ದೋಚಿ ಪರಾರಿಯಾಗುತ್ತಿದ್ದರು. ಇತ್ತೀಚೆಗೆ ಜಯನಗರದ 5ನೇ ಬ್ಲಾಕ್‌ನಲ್ಲಿರುವ ಕಾಫಿ ಅಂಗಡಿಯ ಮಂದೆ ಪಾರ್ಕಿಂಗ್ ಮಾಡಿದ್ದ ಕಾರಿನ ಕಿಟಕಿಯ ಗಾಜು ಒಡೆದು ಲ್ಯಾಪ್‌ಟಾಪ್ ಕಳವು ಮಾಡಿದ್ದರು. ಈ ಸಂಬಂಧ ತಮಿಳುನಾಡಿನ ದಡಗಪಟ್ಟಿ ಸರ್ಕಲ್ ಆರೋಪಿಯನ್ನು ಬಂಧಿಸಲಾಗಿದೆ.
ಆರೋಪಿಗಳು ಈ ಹಿಂದೆ ಸೇಲಂ ಗ್ಯಾಂಗ್ ಜತೆ ಸೇರಿ ಕೃತ್ಯ ಎಸಗುತ್ತಿದ್ದರು. ಇದೀಗ ಇಬ್ಬರೇ ಕೃತ್ಯ ಮುಂದುವರಿಸಿªದಾರೆ ಎಂದು ಪೊಲೀಸರು ಹೇಳಿದರು.
ಮೂರು ಗಂಟೆಯಲ್ಲೇ ಕೃತ್ಯ: ತಮಿಳುನಾಡಿನಿಂದ ಸಂಜೆ 6 ಗಂಟೆ ಸುಮಾರಿಗೆ ಬೆಂಗಳೂರಿಗೆ ಬೈಕ್‌ನಲ್ಲಿ ಬರುತ್ತಿದ್ದ ಸಹೋದರರು, ರಾತ್ರಿ 9 ಗಂಟೆ ಅವಧಿಯಲ್ಲಿ ವಿವಿಧೆಡೆ ಸುತ್ತಾಡಿ ಕಾರಿನ ಗಾಜು ಒಡೆದು 3-4 ಲ್ಯಾಪ್‌ಟಾಪ್ ಕಳವು ಮಾಡಿಕೊಂಡು, ಸೇಲಂನಲ್ಲಿ ಕಡಿಮೆ ಮೊತ್ತಕ್ಕೆ ಮಾರಾಟ ಮಾಡುತ್ತಿದ್ದರು. ಹೀಗೆ ವಾರದಲ್ಲಿ 2-3 ದಿನಗಳು ಬಂದು, ಜಯನಗರ, ಜೆ.ಪಿ.ನಗರ, ಎಲೆಕ್ಟ್ರಾನಿಕ್ ಸಿಟಿ, ಇಂದಿರಾನಗರ ವ್ಯಾಪ್ತಿಯಲ್ಲಿ ಕೃತ್ಯವೆಸ ಗಿ ಪರಾರಿಯಾಗುತ್ತಿದ್ದರು. ಸದ್ದಾನಾಯ್ಡು ಬಂಧನದಿಂದ ಜಯನಗರ ಠಾಣೆಯಲ್ಲಿ ದಾಖಲಾಗಿದ್ದ 5 ಲ್ಯಾಪ್‌ಟಾಪ್ ಕಳವು ಪ್ರಕರಣಗಳು ಪತ್ತೆಯಾಗಿವೆ.