Advertisement

ನ. 14ರಿಂದ ಡಿ. 6ರ ತನಕ ಶ್ರೀಲಂಕಾ ಪ್ರೀಮಿಯರ್‌ ಲೀಗ್‌

06:59 PM Sep 03, 2020 | mahesh |

ಕೊಲಂಬೊ: ಮುಂದೂಡಲ್ಪಟ್ಟ ಚೊಚ್ಚಲ ಶ್ರೀಲಂಕಾ ಪ್ರೀಮಿಯರ್‌ ಲೀಗ್‌ ಕ್ರಿಕೆಟ್‌ ಪಂದ್ಯಾವಳಿ ನ. 14ರಿಂದ ಡಿ. 6ರ ತನಕ ನಡೆಯಲಿದೆ ಎಂಬುದಾಗಿ ಶ್ರೀಲಂಕಾ ಕ್ರಿಕೆಟ್‌ ಮಂಡಳಿ ತಿಳಿಸಿದೆ. ಮೂಲ ವೇಳಾಪಟ್ಟಿಯಂತೆ ಈ ಲೀಗ್‌ ಆ. 28ರಿಂದ ಸೆ. 20ರ ತನಕ ನಡೆಯಬೇಕಿತ್ತು. ಆದರೆ ಕೊರೊನಾದಿಂದಾಗಿ ಮುಂದೂಡಲ್ಪಟ್ಟಿತು.

Advertisement

“ಬಹು ನಿರೀಕ್ಷೆಯ ಈ ಪಂದ್ಯಾವಳಿ ನವಂಬರ್‌ ಆರಂಭದಲ್ಲಿ ಅಧಿಕೃತವಾಗಿ ಉದ್ಘಾಟನೆಗೊಳ್ಳಲಿದೆ’ ಎಂದು ಲಂಕಾ ಕ್ರಿಕೆಟ್‌ ಮಂಡಳಿ ಗುರುವಾರ ಪ್ರಕಟಿಸಿದೆ. ಇದು 23 ಪಂದ್ಯಗಳ ಕಿರು ಪಂದ್ಯಾವಳಿಯಾಗಿದೆ.

ಡಂಬುಲ, ಪಲ್ಲೆಕೆಲೆ ಮತ್ತು ಹಂಬಂತೋಟದ ಅಂತಾರಾಷ್ಟ್ರೀಯ ಕ್ರಿಕೆಟ್‌ ಕ್ರೀಡಾಂಗಣಗಳಲ್ಲಿ ಈ ಪಂದ್ಯಗಳು ನಡೆಯಲಿವೆ. ಕೊಲಂಬೊ, ಕ್ಯಾಂಡಿ, ಗಾಲೆ, ಡಂಬುಲ ಮತ್ತು ಜಾಪ್ನಾ ಜಿಲ್ಲೆಗಳ 5 ತಂಡಗಳು ಪಾಲ್ಗೊಳ್ಳಲಿವೆ.

Advertisement

Udayavani is now on Telegram. Click here to join our channel and stay updated with the latest news.

Next