ಕೊಲಂಬೊ: ಶ್ರೀಲಂಕಾದ ರಾಷ್ಟ್ರಾಧ್ಯಕ್ಷ ಗೊಟಬಯಾ ರಾಜಪಕ್ಸೆ ಶ್ರೀಲಂಕಾಕ್ಕೆ ವಿದಾಯ ಹೇಳಿ ವಿದೇಶಕ್ಕೆ ಹಾರಿರುವುದು ಖಚಿತವಾಗಿದೆ. ಮತ್ತೊಂದೆಡೆ ದ್ವೀಪರಾಷ್ಟ್ರದ ಮಾಜಿ ಹಣಕಾಸು ಸಚಿವ ಬಾಸಿಲ್ ರಾಜಪಕ್ಸೆ ದುಬೈಗೆ ಪರಾರಿಯಾಗಲು ಯತ್ನಿಸಿದ ಸಂದರ್ಭದಲ್ಲಿ ವಿಮಾನ ನಿಲ್ದಾಣದಲ್ಲಿ ಸಾರ್ವಜನಿಕರು ಗುರುತಿಸಿ ಆಕ್ಷೇಪ ವ್ಯಕ್ತಪಡಿಸಿದ್ದರಿಂದ ವಲಸೆ ಅಧಿಕಾರಿಗಳು ಬಾಸಿಲ್ ಪ್ರಯಾಣಕ್ಕೆ ಅನುಮತಿ ನಿರಾಕರಿಸಿರುವ ಘಟನೆ ನಡೆದಿರುವುದಾಗಿ ವರದಿಯಾಗಿದೆ.
ಇದನ್ನೂ ಓದಿ:ರೋಹಿತ್ ರನ್ ಗಳಿಸದಿದ್ದಾಗ ಯಾರೂ ಕೇಳುವುದಿಲ್ಲ. ಆದರೆ.. : ಕೊಹ್ಲಿ ಬೆನ್ನಿಗೆ ನಿಂತ ಗಾವಸ್ಕರ್
ಲಂಕಾದಿಂದ ಪರಾರಿಯಾದ ಗೊಟಬಯಾ ರಾಜಪಕ್ಸೆ ಸಹೋದರರಾಗಿರುವ ಬಾಸಿಲ್ ಕೊಲಂಬೊ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಿಐಪಿ ಟರ್ಮಿನಲ್ ಮೂಲಕ ಪ್ರವೇಶಿಸಿ ದೇಶ ಬಿಟ್ಟು ಪರಾರಿಯಾಗಲು ಸಿದ್ಧತೆ ನಡೆಸಿದ್ದರು. ಆದರೆ ಸಾರ್ವಜನಿಕರು ಗುರುತಿಸಿ, ದೇಶ ಬಿಟ್ಟು ತೆರಳದಂತೆ ಆಕ್ಷೇಪ ವ್ಯಕ್ತಪಡಿಸಿರುವುದಾಗಿ ಮೂಲಗಳು ತಿಳಿಸಿವೆ.
ವಿಮಾನ ನಿಲ್ದಾಣದಲ್ಲಿ ಇಮಿಗ್ರೇಷನ್ (ವಲಸೆ) ಅಧಿಕಾರಿಗಳು ಕೂಡಾ ಪ್ರಯಾಣಕ್ಕೆ ಅನುಮತಿ ನೀಡದೆ ಇದ್ದ ಪರಿಣಾಮ ಬಾಸಿಲ್ ಬಂದ ದಾರಿಗೆ ಸುಂಕ ಇಲ್ಲವೆಂಬಂತೆ ವಾಪಸ್ ತೆರಳಿರುವುದಾಗಿ ವರದಿ ವಿವರಿಸಿದೆ.
ಬಾಸಿಲ್ ರಾಜಪಕ್ಸೆಗೆ ಆಶ್ರಯ ನೀಡಲಾಗುತ್ತದೆ ಎಂಬ ವರದಿಯನ್ನು ಭಾರತ ಸರ್ಕಾರ ತಳ್ಳಿಹಾಕಿದೆ ಎಂದು ಮೂಲಗಳು ಹೇಳಿವೆ. ಆರ್ಥಿಕ ಬಿಕ್ಕಟ್ಟಿನಿಂದ ಕಂಗೆಟ್ಟಿರುವ ಶ್ರೀಲಂಕಾದ ಅಧ್ಯಕ್ಷ ಗೊಟಬಯಾ ರಾಜಪಕ್ಸೆ ರಾಜೀನಾಮೆ ನೀಡಿ ಭಾರತಕ್ಕೆ ಪರಾರಿಯಾಗಿದ್ದಾರೆ ಎಂಬ ವರದಿಯನ್ನೂ ನಿರಾಕರಿಸಿದೆ.