Advertisement
ಭಕ್ತರ ಕನಸಿನಲ್ಲಿ ಬಂದ ಹನಮಂತ ಪಟ್ಟಣದಲ್ಲಿ ಇದೇ ಪ್ರದೇಶದಲ್ಲಿ ದೇವಸ್ಥಾನ ಸ್ಥಾಪಿಸುವಂತೆ ಆಜ್ಞಾಪಿಸಿದ್ದರಿಂದ ನಿರ್ಮಿಸಿದ ದೇವಸ್ಥಾನದಲ್ಲಿ ಬಂದು ನೆಲೆಗೊಂಡನೆಂದು ಪ್ರತೀತಿ ಇದೆ. ಅಂದಿನ ದಿನಗಳಲ್ಲಿ ಇಲ್ಲಿನ ಕುಂಬಾರ ಮತ್ತು ಹತ್ತಿಕಾಳ ಮನೆತನದವರಿಂದ ಪೂಜೆ ಪುನಸ್ಕಾರಗಳು ವ್ಯವಸ್ಥಿತವಾಗಿ ನಡೆದುಕೊಂಡು ಬಂದಿವೆ. ದೇವಸ್ಥಾನವನ್ನು ಪುನರುಜ್ಜೀವನಗೊಳಿಸಲು ತೀರ್ಮಾನಿಸಿದ ಭಕ್ತ ಮಂಡಳಿ 2012ರಲ್ಲಿ 1.5 ಕೋಟಿ ರೂ.ಗಳ ವೆಚ್ಚದಲ್ಲಿ ವಿಶೇಷವಾದ ಕಲ್ಲಿನಿಂದ ಸುಂದರವಾದ ದೇವಸ್ಥಾನ ಪುನರ್ ನಿರ್ಮಾಣ ಮಾಡಲಾಗಿದೆ. ದಿ| ವೇ| ರುದ್ರಯ್ಯನವರು ಪುರಾಣಿಕಮಠ ಇವರ ನೇತೃತ್ವದಲ್ಲಿ ಸಾವಿರಾರು ಭಕ್ತರ ಸೇವಾ ಕಾರ್ಯದಿಂದ ದೇವಸ್ಥಾನ ಹೊಸ ಸ್ವರೂಪ ಹೊಂದಿದ್ದು, ನಿತ್ಯ ದೇವಸ್ಥಾನದಲ್ಲಿ ಪೂಜೆ, ಮಂಗಳಾರತಿ ಮತ್ತು ಶನಿವಾರ ವಿಶೇಷ ಅಲಂಕಾರಿಕ ಪೂಜೆ ನೆರವೇರಿ ಪಟ್ಟಣದ ಎಲ್ಲ ವರ್ಗದ ಜನರು ಇಲ್ಲಿಗೆ ಬಂದು ಪ್ರಾರ್ಥಿಸುತ್ತಾರೆ. Advertisement
ಹನುಮಂತ ದೇವಸ್ಥಾನಕ್ಕಿದೆ ವಿಶೇಷ ಇತಿಹಾಸ
04:30 PM Nov 08, 2018 | |
Advertisement
Udayavani is now on Telegram. Click here to join our channel and stay updated with the latest news.