Advertisement

ತಾಲೂಕು ಕಚೇರಿಯಲ್ಲಿ ಮೂಲ ಸೌಕರ್ಯದ ಕೊರತೆ: ಆಕ್ರೋಶ

03:07 PM Sep 22, 2021 | Team Udayavani |

ನೆಲಮಂಗಲ: ತಾಲೂಕಿನ ಹೃದಯಭಾಗದಲ್ಲಿರುವ ತಾಲೂಕು ಕಚೇರಿಯಲ್ಲಿನ ಶೌಚಾಲಯ ಸಂಪೂರ್ಣ ದುಸ್ಥಿತಿ ಎದುರಾಗಿದ್ದು, ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸುವ ಅಧಿಕಾರಿಗಳೇ ಗಾಂಧಿ ಕನಸಿಗೆ ಎಳ್ಳುನೀರು ಬಿಟ್ಟಿದ್ದಾರೆ.

Advertisement

ನಗರದ ತಾಲೂಕು ಕಚೇರಿಯ ಒಳಭಾಗದಲ್ಲಿರುವ ಪುರುಷರು ಬಳಸುವ ಶೌಚಾಲಯ ಪ್ರವೇಶಿಸುತ್ತಿದ್ದಂತೆ ಹಳೆಯ ಕುರ್ಜಿ, ಊಟ ತಿಂದ ತಟ್ಟೆಗಳು, ಗಲೀಜಿನ ಕವರ್‌, ಕಸದ ರಾಶಿ ಕಾಣಬೇಕು.

ಶೌಚಾಲಯದ ನೀರಿನ ಪೈಪ್‌, ಬಾಗಲು ಕಿತ್ತು ಹೋಗಿದ್ದರೂ ಸರಿಪಡಿಸಿಲ್ಲ, ನೀರಿನ ವ್ಯವಸ್ಥೆ ಸರಿಯಿಲ್ಲ, ಒಂದು ಕ್ಷಣ ಅದರ ಒಳಗೆ ನಿಲ್ಲಲು ಸಾಧ್ಯವಾಗದಂತಹ ಸ್ಥಿತಿಯಲ್ಲಿ ತಾಲೂಕು ಕಚೇರಿಯ ಶೌಚಾಲಯವಿದ್ದು ತಾಲೂಕು ಕಚೇರಿಯ ಸುತ್ತಲು ಇರುವ ಖಾಲಿ ಜಾಗದಲ್ಲಿ ಜನರು ಮೂತ್ರವಿಸರ್ಜನೆ ಮಾಡುವ ಅನಿವಾರ್ಯತೆ ಎದುರಾಗಿದೆ.

ಸಿಬ್ಬಂದಿಗೆ ಮಾತ್ರ ವ್ಯವಸ್ಥೆ: ತಾಲೂಕು ಕಚೇರಿಯ ಹಿಂಭಾಗದಲ್ಲಿ ಕಚೇರಿಯ ಪುರುಷ ಸಿಬ್ಬಂದಿಗೆ ಶೌಚಾಲಯ ವ್ಯವಸ್ಥೆ ಮಾಡಲಾಗಿದೆ. ಆದರೆ, ಇಲ್ಲಿ ಸಾರ್ವಜನಿಕರಿಗೆ ಪ್ರವೇಶವಿಲ್ಲ, ತಾಲೂಕು ಕಚೇರಿಗೆ ಬಂದ ಒಬ್ಬ ಸಾರ್ವಜನಿಕ ಒಂದು ಕೆಲಸ ಮಾಡಿಸಿಕೊಳ್ಳಲು ಬೆಳಗ್ಗೆಯಿಂದ ಸಂಜೆಯವರೆಗೂ ಅಲೆಯಬೇಕು. ಅಂತವರಿಗೆ ಒಂದು ಕನಿಷ್ಠ ಉತ್ತಮ ಶೌಚಾಲಯ ವ್ಯವಸ್ಥೆ ಇಲ್ಲದಿರುವು ದು ತಾಲೂಕಿಗೆ ಅವಮಾನವಾಗುವಂತಾಗಿದೆ.

ಇದನ್ನೂ ಓದಿ:ರಾಜ್ಯದಲ್ಲೂ ದಲಿತ ಸಿಎಂ ಕೂಗು ಜೀವಂತ

Advertisement

ಕುಡಿಯಲು ನೀರಿಲ್ಲ: ತಾಲೂಕು ಕಚೇರಿಗೆ ತಾಲೂಕಿನ 250ಕ್ಕೂ ಹೆಚ್ಚು ಗ್ರಾಮಗಳಿಂದ ಜನರು ವಿವಿಧ ಕಂದಾಯ ಇಲಾಖೆಯ ಕೆಲಸಗಳಿಗೆ ಪ್ರತಿನಿತ್ಯ ಬರುತ್ತಾರೆ. ಅಂತವರಿಗೆ ತಾಲೂಕು ಆಡಳಿತ ಕನಿಷ್ಠ ಕುಡಿಯುವ ನೀರಿನ ಸೌಲಭ್ಯವನ್ನು ತಾಲೂಕು ಕಚೇರಿ ಯಲ್ಲಿ ಮಾಡಿಲ್ಲ, ಸಿಬ್ಬಂದಿಗೆ ಕಚೇರಿಯ ಕೊಠಡಿ ಒಳಗೆ ಸೌಲಭ್ಯ ಮಾಡಿಕೊಂಡು ಸಾರ್ವಜನಿಕರನ್ನು ಅನಾಥ ಮಾಡಿದ್ದು, ವಯಸ್ಸಾ ದವರು, ಮಹಿಳೆಯರು ಅಂಗಡಿಯಲ್ಲಿ ಹಣ ಕೊಟ್ಟು ನೀರಿನ ಬಾಟಲ್‌ ಖರೀದಿ ಮಾಡಿ ಮಾಡುವ ದುಸ್ಥಿತಿ ಎದುರಾಗಿದೆ.

ಯಾರು ಹೊಣೆ?: ತಾಲೂಕು ಕಚೇರಿಯಲ್ಲಿ ಕನಿಷ್ಠ ಮೂಲ ಸೌಲಭ್ಯಗಳಾದ ಶೌಚಾಲಯ, ಕುಡಿಯುವ ನೀರು ವ್ಯವಸ್ಥೆ ಯನ್ನು ಸಾರ್ವಜನಿಕರಿಗೆ ಮಾಡದಿರುವುದಕ್ಕೆ ಯಾರು ಹೊಣೆ ಎಂಬ ಪ್ರಶ್ನೆ ಮಾಡಬೇಕಾಗಿದೆ. ಈ ಸೌಲಭ್ಯ ನೀಡಲು ಸರ್ಕಾರ ಆದೇಶ ನೀಡಬೇಕಾ? ಜಿಲ್ಲಾಧಿಕಾರಿಗಳು ಸೂಚನೆ ಬೇಕಾ? ಇಲ್ಲ. ಬಿ.ಆರ್‌ಅಂಬೇಡ್ಕರ್‌ ಬರೆದಂತಹ ಸಂವಿಧಾನದಲ್ಲಿ ಇದರ ಬಗ್ಗೆ ಪ್ರಸ್ತಾಪ ಮಾಡಿಲ್ಲವೇ? ಎಂಬ ಪ್ರಶ್ನೆಯನ್ನು ಸಂಬಂಧಪಟ್ಟವರಿಗೆ ಪ್ರಶ್ನೆ ಮಾಡಬೇಕಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಾಲೂಕು ಕಚೇರಿಯಲ್ಲಿರುವ ಶೌಚಾಲಯ ಸ್ವತ್ಛತೆ ಮಾಡಲು ಸೂಚಿಸಲಾಗಿದ್ದು, ಹೊರಭಾಗದಲ್ಲಿ ಹೊಸ ಶೌಚಾಲಯ ಶೀಘ್ರದಲ್ಲಿ ನಿರ್ಮಾಣ ಮಾಡಲಾಗುತ್ತದೆ. ಅಲ್ಲಿಯವರೆಗೂ ಪರ್ಯಾಯ ವ್ಯವಸ್ಥೆ ಮಾಡಲಾಗುತ್ತದೆ.
-ಕೆ. ಮಂಜುನಾಥ್‌, ತಹಶೀಲ್ದಾರ್‌

-ಕೊಟ್ರೇಶ್‌.ಆರ್‌

Advertisement

Udayavani is now on Telegram. Click here to join our channel and stay updated with the latest news.

Next