ಮುಂಬೈ: ಖ್ಯಾತ ಬಹುಭಾಷಾ ನಟ ವಿಜಯ್ ಸೇತುಪತಿ ನಟಿಸುತ್ತಿರುವ ಬಹುನಿರೀಕ್ಷಿತ ‘ಲಾಭಂ’ ಸಿನಿಮಾವನ್ನು ಮೊದಲು ಚಿತ್ರಮಂದಿರದಲ್ಲಿಯೇ ಬಿಡುಗಡೆಗೊಳಿಸಲಾಗುವುದು ಎಂದು ಚಿತ್ರತಂಡ ತಿಳಿಸಿದೆ.
ಕಳೆದ ವಾರ ಈ ಚಿತ್ರ ಡಿಜಿಟಲ್ ವೇದಿಕೆಯಾದ ನೆಟ್ ಫ್ಲಿಕ್ಸ್ ಗೆ ಮಾರಾಟವಾಗಿದೆ. ಈ ಸಿನಿಮಾ ಚಿತ್ರಮಂದಿರದಲ್ಲಿ ಬಿಡುಗಡೆಯಾಗುವುದಿಲ್ಲ ಬದಲಾಗಿ ನೇರವಾಗಿ ಡಿಜಿಟಲ್ ಸ್ಟೀಮಿಂಗ್ ಮೂಲಕವೇ ಬಿಡುಗಡೆಗೊಳ್ಳಲಿದೆ ಎಂಬ ವದಂತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು.
ಈ ಕುರಿತಾಗಿ ನಟ ವಿಜಯ್ ಸೇತುಪತಿ ತಮ್ಮ ಸಾಮಾಜಿಕ ಜಾಲತಾಣವಾದ ಟ್ವೀಟರ್ ನಲ್ಲಿ ಪೋಸ್ಟ್ ಒಂದನ್ನು ಟ್ಟೀಟ್ ಮಾಡುವ ಮೂಲಕ ಸ್ಪಷ್ಟನೆ ನೀಡಿದ್ದು, ಸಾಮಾಜಿಕ, ರಾಜಕೀಯ ಅಂಶಗಳನ್ನು ಒಳಗೊಂಡಿರುವ ‘ಲಾಭಂ’ ಸಿನಿಮಾವನ್ನು ಮೊದಲು ಓಟಿಟಿಯಲ್ಲಿ ಬಿಡುಗಡೆಗೊಳಿಸುವುದಿಲ್ಲ. ಬದಲಾಗಿ ಚಿತ್ರಮಂದಿರದಲ್ಲಿಯೇ ಭರ್ಜರಿಯಾಗಿ ಬಿಡುಗಡೆಗೊಳಿಸಲಿದ್ದೇವೆ ಎಂದಿದ್ದಾರೆ.
ಇದನ್ನೂ ಓದಿ:ಕೃಷಿ ಕಾಯ್ದೆ ರೈತರಿಗೆ ಮಾರಕವಲ್ಲ: ಸುರೇಶ್
Related Articles
ಚಿತ್ರತಂಡದ ಈ ನಿರ್ಧಾರಕ್ಕೆ ಸಿನಿ ಪ್ರೇಕ್ಷಕರು ಕೂಡಾ ಬಹುಪರಾಕ್ ಎಂದಿದ್ದು. ಸಿನಿಮಾವನ್ನು ಚಿತ್ರಮಂದಿರದಲ್ಲಿಯೇ ನೋಡಲು ಉತ್ಸುಕರಾಗಿದ್ದಾರೆ ಎಂದು ವರದಿಯಾಗಿದೆ.
ಕಳೆದ ಏಪ್ರಿಲ್ 2019 ರಲ್ಲಿ ನಟ ವಿಜಯ್ ಸೇತುಪತಿ ನಾನು ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕರಾದ ಎಸ್ ಪಿ ಜ್ಞಾನನಾಥನ್ ಅವರೊಂದಿಗೆ ಸೇರಿಕೊಂಡು ಹೊಸ ಸಿನಿಮಾ ವೊಂದನ್ನು ಮಾಡಲು ಉತ್ಸುಕನಾಗಿದ್ದೇನೆ. ಈ ಸಿನಿಮಾದ ತಯಾರಿ ಬರದಿಂದ ಸಾಗುತ್ತಿದ್ದು 2020ರ ಮೇ ನಲ್ಲಿ ತೆರೆ ಕಾಣಲಿದೆ ಎಂದಿದ್ದರು.
ಆದರೆ ಇದೀಗ ಚಿತ್ರತಂಡ ಕೋವಿಡ್ 19 ನ ಕಾರಣದಿಂದಾಗಿ ಈ ಸಿನಿಮಾದ ಬಿಡುಗಡೆ ವಿಳಂಬಗೊಂಡಿದೆ. ಮುಂಬರುವ ವರ್ಷದ ಆರಂಭದಲ್ಲಿ ಚಿತ್ರ ತೆರೆಕಾಣಲಿದೆ. ಸಿನಿಮಾ ಬಿಡುಗಡೆಯ ದಿನಾಂಕವನ್ನು ಸದ್ಯದಲ್ಲಿಯೇ ತಿಳಿಸಲಾಗುವುದು ಎಂದಿದೆ.