Advertisement

ಪರೀಕ್ಷಾ ಕೇಂದ್ರದಲ್ಲಿ ಅಕ್ರಮ : ವಿದ್ಯಾರ್ಥಿ ದೂರು ನೀಡಿದರೂ ಸೊಪ್ಪು ಹಾಕದ ಆಯೋಜಕರು

05:27 PM Apr 17, 2022 | Team Udayavani |

ಕುಷ್ಟಗಿ: 2022-23ನೇ ಸಾಲಿನ ಆರ್.ಎಂ.ಎಸ್.ಎ. (ಆದರ್ಶ ವಿದ್ಯಾಲಯ) ಪರೀಕ್ಷೆಯಲ್ಲಿ ಅಕ್ರಮದ ಬಗ್ಗೆ ಬಾಲಕನೋರ್ವ ಪ್ರತಿಭಟಿಸಿದರೂ, ಆಯೋಜಕರು ಸೊಪ್ಪು ಹಾಕದ ಪ್ರಕರಣ ಬೆಳಕಿಗೆ ಬಂದಿದೆ.

Advertisement

6ನೇ ತರಗತಿ ಪ್ರವೇಶಕ್ಕಾಗಿ ಆಯೋಜಿಸಿರುವ ಪ್ರವೇಶ ಪರೀಕ್ಷೆಗೆ ಕುಷ್ಟಗಿ ಪಟ್ಟಣದಲ್ಲಿ 7 ಪರೀಕ್ಷಾ ಕೇಂದ್ರದ ವ್ಯವಸ್ಥೆ ಮಾಡಲಾಗಿದೆ. ಇಲ್ಲಿನ ವಿಜಯ ಚಂದ್ರಶೇಖರ ವಿದ್ಯಾಲಯದ ಪರೀಕ್ಷಾ ಕೇಂದ್ರದ ಕೊಠಡಿ ಸಂಖ್ಯೆ 10 ರಲ್ಲಿ ಹೊರಗಿನ ವ್ಯಕ್ತಿ ಬಂದು, ಕೆಲವರಿಗೆ ಮಾತ್ರ ಸರಿಯುತ್ತರ ನಮೂದಿಸಲು ಮುಂದಾಗಿದ್ದಾನೆ.

ಆಗ ಅದೇ ಕೊಠಡಿಯಲ್ಲಿ ಸಾಗರ ನಾಗೂರು ಎನ್ನುವ ಪರೀಕ್ಷಾರ್ಥಿ ಕೂಡಲೇ ಪ್ರತಿಭಟಿಸಿದ್ದಾನೆ. ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಮೇಲ್ವಿಚಾರಕರೊಬ್ಬರು ಪ್ರತಿಭಟಿಸಿದ ವಿದ್ಯಾರ್ಥಿಯ ಉತ್ತರ ಪತ್ರಿಕೆ ಕಸಿಯಲು ಮುಂದಾಗಿದ್ದಾರೆ.

ಅಲ್ಲದೇ ಪೊಲೀಸರಿಗೆ ಹೇಳಿ ಪರೀಕ್ಷಾ ಕೊಠಡಿಯಿಂದ ಹೊರ ಹಾಕುವ ಬೆದರಿಕೆಯನ್ನು ಹಾಕಿದ್ದರಿಂದ ಸುಮ್ಮನಾಗಬೇಕಾಯಿತು ಎಂದು ವಿದ್ಯಾರ್ಥಿ ಸಾಗರ ನಾಗೂರು ತಿಳಿಸಿದ್ದಾರೆ.

ಇದನ್ನೂ ಓದಿ : 25ವರ್ಷದ ಹಿಂದೆ 59 ಮಂದಿಯನ್ನು ಬಲಿ ಪಡೆದಿದ್ದ ದೆಹಲಿಯ ಉಪಹಾರ್ ಥಿಯೇಟರ್ ನಲ್ಲಿ ಮತ್ತೆ ಬೆಂಕಿ

Advertisement

ಅಕ್ರಮವಾಗಿ ಪರೀಕ್ಷಾ ಕೊಠಡಿ ನುಗ್ಗಿ ಉತ್ತರ ಬರೆಯಿಸಿದ ವ್ಯಕ್ತಿ ಹಾಗೂ ಮೇಲ್ವಿಚಾರಕರನ್ನು ಗುರುತಿಸಿದ್ದೇನೆ. ಓರ್ವ ವ್ಯಕ್ತಿ ಅಕ್ರಮವಾಗಿ ಪರೀಕ್ಷಾ ಕೊಠಡಿ ಪ್ರವೇಶಿಸಿದ್ದ ಸಿಸಿ ಟಿವಿ ಪುಟೇಜ್ ಆಧಾರಿಸಿ ಸದರಿ ವ್ಯಕ್ತಿ ಹಾಗೂ ಮೇಲ್ವಿಚಾರಕರ ವಿರುದ್ದ ಕ್ರಮ ಕೈಗೊಳ್ಳಬೇಕು. ವಿದ್ಯಾರ್ಥಿಗೆ ಸಹಾಯ ಮಾಡಿದ ವಿದ್ಯಾರ್ಥಿಯ ಫಲಿತಾಂಶ ತಡೆ ಹಿಡಿಯಬೇಕು. ಈ ಖಾಸಗಿ ವ್ಯಕ್ತಿ ಎಷ್ಟು ಜನರಿಗೆ ಸಹಾಯ ಮಾಡಿದ್ದಾನೆಂದು ತನಿಖೆ ನಡೆಸಬೇಕು. ಒಂದು ವೇಳೆ ಕ್ರಮ ಕೈಗೊಳ್ಳದೇ ಇದ್ದಲ್ಲಿ ಡಿಡಿಪಿಆಯ್ ಅವರಿಗೆ ದೂರು ನೀಡುವುದಾಗಿ ಬಾಲಕನ ತಂದೆ ಮಂಜುನಾಥ ನಾಗೂರು ತಿಳಿಸಿದ್ದು, ಇದಕ್ಕೂ ಮೇಲಾಧಿಕಾರಿಗಳು ಸ್ಪಂಧಿಸದೇ ಇದ್ದಲ್ಲಿ ಕಾನೂನು ಮೊರೆ ಹೋಗುವುದಾಗಿ ತಿಳಿಸಿದ್ದಾರೆ. ನನ್ನ ಮಗ ಕಷ್ಟಪಟ್ಟು ಓದಿದ್ದಾನೆ. ಈ ರೀತಿಯ ಬೆಳವಣಿಗೆಯ ಹಿನ್ನೆಲೆಯಲ್ಲಿ ಪರೀಕ್ಷಾ ಕೊಠಡಿಯ ಇನ್ನುಳಿದ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದ್ದು, ಕೂಡಲೇ ಸದರಿ ಪರೀಕ್ಷೆ ರದ್ದುಗೊಳಿಸಿ ಮತ್ತೊಮ್ಮೆ ಪರೀಕ್ಷೆ ನಡೆಸಬೇಕೆಂದು ಮಂಜುನಾಥ ನಾಗೂರು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next