ಕುರುಗೋಡು : ಮಾಜಿ ಶಾಸಕ ನಾರಾ ಸೂರ್ಯನಾರಾಯಣ ರೆಡ್ಡಿ ಹಾಗೂ ಹಾಲಿ ಶಾಸಕ ಗಣೇಶ್ ಬಗ್ಗೆ ಇಲ್ಲ ಸಲ್ಲದ ಅಪಪ್ರಚಾರ ವನ್ನು ಮಾಡುವುದು ಬಿಜೆಪಿಗರು ಬಿಡಬೇಕು ಎಂದು ಪುರಸಭೆ ಸದಸ್ಯ ಎನ್. ನಾಗರಾಜ್ ಹೇಳಿದರು.
ಪಟ್ಟಣದ ಶಾಸಕರ ಜನ ಸಂಪರ್ಕ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾ ಗೋಷ್ಠಿ ಯಲ್ಲಿ ಮಾತನಾಡಿದ ಅವರು, ಸೂರ್ಯನಾರಾಯಣ ರೆಡ್ಡಿ ದಣಿ ಅವರು, ನಮ್ಮ ಒಡೆಯ, ನಮ್ಮ ಸಂಪತ್ತು ಅವರಿಗೆ ಪೂಜೆ ಮಾಡೋದು ಗೊತ್ತು, ಅಭಿನಂದಿಸುವುದು ಗೊತ್ತು ಇದರ ಬಗ್ಗೆ ಇನ್ನೊಬ್ಬರಿಂದ ಪಾಠ ಕಲಿಯಬೇಕಿಲ್ಲ ಎಂದು ತಿಳಿಸಿದರು.
ಕಂಪ್ಲಿ ಮತ್ತು ಕುರುಗೋಡಿಗೆ ಅನುಮೋದನೆಗೊಂಡ 100 ಹಾಸಿಗೆವುಳ್ಳ ಆಸ್ಪತ್ರೆ ಯನ್ನು ನಮ್ಮ ಮಾವ ಸಚಿವ ಬಿ. ಶ್ರೀರಾಮುಲು ಅವರು ಮಂಜೂರು ಮಾಡಿಸಿಕೊಂಡು ಅನುದಾನ ಬಿಡುಗಡೆ ಮಾಡಿಸಿಕೊಂಡು ಬಂದಿದ್ದಾರೆ ಅಂದಿದ್ದಕ್ಕೆ ರಾಮುಲು ಅವರು ಬಹಿರಂಗ ಚರ್ಚೆಗೆ ಬರಲಿ ಅಂದು ಹಾಲಿ ಶಾಸಕರು ಸವಾಲು ಕರೆದಿದ್ದಾರೆ. ಒಂದು ವೇಳೆ ಮಾಜಿ ಶಾಸಕ ಸುರೇಶ್ ಬಾಬು ನಾನು ತಂದಿದ್ದು ಅನುದಾನ ಅಂದ್ರೆ ಅವರನ್ನೇ ಕರಿಯುತ್ತಿದ್ದರು. ಕ್ಷೇತ್ರದಲ್ಲಿ ನಡೆಯುವ ಹಲವಾರು ಕಾಮರಿಗಳನ್ನು ನಮ್ಮ ಮಾವ ಹಾಕಿಸಿಕೊಂಡು ಬಂದಿದ್ದಾನೆ ಎಂದು ಹೇಳಿ ಕ್ಷೇತ್ರದ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಅದರ ಬಗ್ಗೆ ದಾಖಲಾತಿ ಇದ್ರೆ ಸಾಬೀತು ಪಡಿಸಲಿ, ನಾವು ಪಡಿಸುತ್ತೇವೆ ಎಂದರು.
ಶಾಸಕರ ಬಗ್ಗೆ ಕ್ಷೇತ್ರದ ಜನರಿಗೆ ಸುಳ್ಳು ಸುದ್ದಿ ಹಬ್ಬಿಸಿ ಮುಂದಿನ ಚುನಾವಣೆ ಯಲ್ಲಿ ಮತ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಇನ್ನೂ ಸೋಲಿನ ಭಯ ಮಾಜಿ ಶಾಸಕರಲ್ಲಿ ಈಗಾಗಲೇ ಕಾಡುತ್ತಿರುವುದು ದಿನ ದಿಂದ ದಿನಕ್ಕೆ ಪತ್ರಿಕೆ ಗೋಷ್ಠಿ ನಡೆಸಲು ಹೊರಟಿದ್ದಾರೆ. ಸುಮ್ನೆ ಖಾಲಿ ಕೂಡದೆ ಅಧಿಕಾರದ ದಾಹ ಪಡೆಯಲು ನಾನಾ ಪ್ರಯತ್ನ ಈಗಲೇ ನಡಿಸುತಿದ್ದಾರೆ ಎಂದರು. ಕ್ಷೇತ್ರದ ಜನರಿಗೆ ಗೊತ್ತಿದೆ ಯಾರು ಕೆಲಸ ಮಾಡುತ್ತಿದ್ದಾರೆ ಎಂದು ಅಲ್ಲದೆ ಎಸ್ಟಿ ಮೀಸಲಾತಿ 7.5 ಸಮುದಾಯಕ್ಕೆ ಕೊಡುತ್ತೇನೆ ಎಂದು ನಂತರ ವಿರೋಧ ಮಾಡಿದ್ದಾರೆ. ಇದರಿಂದ ರಾಜ್ಯದ ಎಸ್ಟಿ ಸಮುದಾಯದ ಜನಕ್ಕೆ ಮೋಸ ಮಾಡಿದಂತಾಗಿದೆ ಆದ್ದರಿಂದ ಮುಂದಿನ ಚುನಾವಣೆ ಯಲ್ಲಿ ಅಳಿಯ ಹಾಗೂ ಮಾವನಿಗೆ ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಸಿದರು.
ಇದನ್ನೂ ಓದಿ : 6 ಗಂಟೆಗಳ ಕಾಲ ಇ.ಡಿ ವಿಚಾರಣೆ ಎದುರಿಸಿದ ಸೋನಿಯಾ ಗಾಂಧಿ : ಮತ್ತೆ ನಾಳೆ ಹಾಜರಾಗುವಂತೆ ಸೂಚನೆ
ನಂತರ ಶೇಖಣ್ಣ ಮಾತನಾಡಿ, ಮಾಜಿ ಶಾಸಕ ಸುರೇಶ್ ಬಾಬು ಅವರು 10 ವರ್ಷ ಶಾಸಕರಾಗಿದ್ದಾಗ ಕ್ಷೇತ್ರಕ್ಕೆ ಅವರು ನೀಡಿರುವ ಕೊಡುಗೆಯಾದರೂ ಏನು. ಅವಾಗ ಏನಾದ್ರೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ವಿರೋಧ ಮಾಡಿದ್ರಾ ಇವಾಗ ಯಾಕೆ ನೀವು ಸುಮ್ನೆ ಅಪಪ್ರಚಾರ ಮಾಡುತ್ತಿದ್ದೀರಿ ಅಭಿವೃದ್ಧಿ ಕೆಲಸ ಮಾಡೋಕೆ ಬಿಡಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಅಲ್ಲದೆ ಮಿನಿ ವಿಧಾನಸೌಧ, 100 ಹಾಸಿಗೆ ಆಸ್ಪತ್ರೆ, ಕಂಪ್ಲಿ ಸೇತುವೆ ನಿರ್ಮಾಣದ ಕಾಮಗಾರಿ ಬಗ್ಗೆ ವಿಧಾನಸಭೆ ಯಲ್ಲಿ ಹಾಲಿ ಶಾಸಕರು ದ್ವನಿ ಎತ್ತಿದಾಗ ನೀವು ಎಲ್ಲಿಗೆ ಹೋಗಿದ್ರಿ ಅದರ ಬಗ್ಗೆ ಮಾತನಾಡಬಹುದಿತ್ತಲ್ಲ ಎಂದರು.
ಮೊದಲು ಅಪಪ್ರಚಾರ ಮಾಡುವುದು ಬಿಟ್ಟು ಅಭಿವೃದ್ಧಿ ಕೆಲಸ ಮಾಡುವುದಕ್ಕೆ ಸಹಕಾರ ನೀಡಿ, ಚುನಾವಣೆ ಸಂದರ್ಭದಲ್ಲಿ ಅಪಪ್ರಚಾರ ಬಿಟ್ಟು ಏನಾದ್ರೂ ಮಾಡಿ ಆಗ ಜನರು ನಿಜವಾದ ನಾಯಕನನ್ನು ಆಯ್ಕೆ ಮಾಡುತ್ತಾರೆ. ಸದ್ಯ ಇಲ್ಲ ಸಲ್ಲದ ಆರೋಪ ಮಾಡುವುದು ಬಿಟ್ಟು ಶಾಸಕರನ್ನು ಅವಮಾನಿಸಿದ್ದಕ್ಕೆ ಕ್ಷಮೆ ಯಾಚಿಸಬೇಕು ಎಂದು ಹೇಳಿದರು.
ಪುರಸಭೆ ಸದಸ್ಯ ಚನ್ನಪಟ್ಟಣ ಮಲ್ಲಿಕಾರ್ಜುನ, ಬ್ಲಾಕ್ ಅಧ್ಯಕ್ಷ ಬಂಗಿ ಮಲ್ಲಯ್ಯ ಮಾತನಾಡಿದರು.
ಈ ಸಂದರ್ಭದಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರು ಇದ್ದರು.