Advertisement

ಕುರುಗೋಡು : ಬೈಕ್ ಮೂಲಕ ತೆರಳಿ ಕಾಮಗಾರಿ ಉದ್ಘಾಟನೆ ಮಾಡಿದ ಶಾಸಕ.!

12:18 PM Sep 03, 2022 | Team Udayavani |

ಕುರುಗೋಡು : ಕಾಮಗಾರಿಗಳನ್ನು ಜನತೆಗೆ ಸಮರ್ಪಕವಾಗಿ ತಲುಪಿಸುವ ಉದ್ದೇಶದಿಂದ ಶಿರುಗುಪ್ಪ ಶಾಸಕ ಎಂ.ಎಸ್.ಸೋಮಲಿಂಗಪ್ಪ ಸಾಕ್ಷಿಯ ನಡೆ ರೈತರ ಗಮನ ಸೆಳದಿದೆ.

Advertisement

ಹೌದು ಇತ್ತೀಚಿಗೆ ಸುರಿದ ಮಳೆಯಿಂದ ರಸ್ತೆ ಸಮರ್ಪಕವಾಗಿರದೆ ತಮ್ಮ ಕಾರು ಸ್ಥಳಕ್ಕೆ ಹೋಗದ ಕಾರಣ ಕಾರ್ಯಕರ್ತರ ದ್ವಿ-ಚಕ್ರ ವಾಹನದಲ್ಲೇ ತೆರಳಿ ದೊಡ್ಡರಾಜು ಕ್ಯಾಂಪಿನ ಪರಿಶಿಷ್ಟ ಜಾತಿ ಕಾಲೋನಿಯಲ್ಲಿ ನಿರ್ಮಾಣಗೊಂಡ 11 ಲಕ್ಷದ ಕುಡಿಯುವ ನೀರಿನ ಘಟಕ ಹಾಗೂ ಚನ್ನಪಟ್ಟಣ ವ್ಯಾಪ್ತಿಯ ಹೊರ ಪ್ರದೇಶದಲ್ಲಿ ಇರುವ ದೊಡ್ಡ ಬೀಳು ಹಳ್ಳದಿಂದ ನಿರ್ಮಾಣಗೊಂಡ ಏತ ನೀರಾವರಿ ಯೋಜನೆಯನ್ನು ಉದ್ಘಾಟನೆ ನೆರೆವೆರಿಸಿದ ಸನ್ನಿವೇಶ ಕಂಡು ಬಂತು.

ಬಳಿಕ ಮಾತನಾಡಿದ ಅವರು 2021-22ನೇ ಸಾಲಿನ ಎಸ್.ಸಿ.ಪಿ ಕಾಮಗಾರಿ 65 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡಿದ್ದು, ಇದರಿಂದ ಒಟ್ಟು 54 ಫಲಾನುಭವಿಗಳಿಗೆ ಅನುಕೂಲವಾಗಲಿದೆ. 59.54 ಎಕರೆ ವ್ಯಾಪ್ತಿಯಲ್ಲಿ ಏತನೀರಾರಿ ಯೋಜನೆ ಒಳಪಡಲಿದೆ ಎಂದರು.

ಇದನ್ನೂ ಓದಿ : ಹಲವು ಆರೋಗ್ಯ ಸಮಸ್ಯೆಗಳಿಗೆ ರಾಮಬಾಣ ಈ ಅರಶಿನ-ಕಾಳುಮೆಣಸಿನ ಕಷಾಯ

ಫಲಾನುಭವಿ ರೈತರು ಭೂಮಿ ಆಧಾರಿತ ಜೊತೆಗೆ ಕೃಷಿ ಇಲಾಖೆ ಸೂಚಿಸುವ ಪ್ರಕಾರ ಬೆಳೆಗಳನ್ನು ಬೆಳೆದು ತಮ್ಮ ಆಧಾಯ ದ್ವಿಗುಣ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು. ನೀರಿನ ಮರುಪೂರಣವಗಬೇಕಾಗಿದೆ. ನೀರನ್ನು ಮಿತವಾಗಿ ಬಳಸಿ ನೀರನ್ನು ದುರ್ಬಳಕೆ ಮಾಡಬೇಡಿ ಅವಶ್ಯಕವಾಗಿರುವಷ್ಟೇ ನೀರನ್ನು ಬಳಸಿ ಈ ನಿಟ್ಟಿನಲ್ಲಿ ನೀರಿನ ಮಿತ ಬಳಕೆ ಬಗ್ಗೆ ರೈತರು ಗಮನಹರಿಸಬೇಕು ಎಂದರು. ನೀರಿನ ಮಿತ ಬಳಕೆ ಮೂಲಕ ಎಲ್ಲರ ಪ್ರಗತಿ ಸಾಧ್ಯ, ನಾವು ಸಬಲರಾಗಿ ಬದುಕಬೇಕಾದರೆ ಆರ್ಥಿಕವಾಗಿ ಸಬಲರಾಗಬೇಕು ಈ ನಿಟ್ಟಿನಲ್ಲಿ ನಮ್ಮ ಸರಕಾರ ಎಲ್ಲ ರೈತರ ಬೆಳವಣಿಗೆಗೆ ಶ್ರಮಿಸುತ್ತಿದೆ ಎಂದು ಹೇಳಿದರು.

Advertisement

ಪೂರ್ವದಲ್ಲಿ ಮಣ್ಣೂರಿನ ಸಮುದಾಯ ಭವನ, ಗ್ರಂಥಾಲಯ, ಮಣ್ಣೂರು, ಹಾಗೂ ದೊಡ್ಡರಾಜು ಕ್ಯಾಂಪುನಲ್ಲಿ ಶುದ್ದ ಕುಡಿವ ನೀರಿನ ಘಟಕ ಉದ್ಡಾಟಿಸಿದರು . ಈ ವೇಳೆಯಲ್ಲಿ ಪಕ್ಷದ ಮುಖಂಡರು ಹಾಗೂ ಕಾರ್ಯತರು ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next