ಕುಂದಗೋಳ: ತಾಲೂಕಿನ ಯರೇಬೂದಿಹಾಳ ಗ್ರಾಮದ ಗ್ರಾ.ಪಂ. ಆವರಣದಲ್ಲಿ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಮತ್ತು ಗ್ರಾ.ಪಂ. ಆಡಳಿತ ಮಂಡಳಿಯ ಅಧಿಕಾರ ದುರುಪಯೋಗ ಮತ್ತು ಸರ್ಕಾರದ ನಿಯಮಾವಳಿಗಳ ಉಲ್ಲಂಘನೆ ಮಾಡಿರುವುದನ್ನು ಖಂಡಿಸಿ ಗ್ರಾಮಸ್ಥರು ಆ.27ರ ಮಂಗಳವಾರ ಪ್ರತಿಭಟನೆ ನಡೆಸಿದ ಘಟನೆ ಯರೇಬೂದಿಹಾಳ ಗ್ರಾಮದಲ್ಲಿ ನಡೆಯಿತು.
ಧರಣಿಯಲ್ಲಿ ಯರೇಬೂದಿಹಾಳ ಗ್ರಾಮದ ಅಮ್ಮಿನಭಾವಿ ಫ್ಲಾಟ್‌ನ 268 ಹಿಸ್ಸಾ 2.4.6. ನ ಸರ್ವೇ ನಂಬರಿನ 3 ಎಕರೆ 9 ಗುಂಟೆಯಲ್ಲಿ ಒಟ್ಟು 60 ಎನ್.ಎ. ಫ್ಲಾಟ್‌ಗಳು ನಿರ್ಮಾಣವಾಗಿದ್ದು, ಇದರಲ್ಲಿ 59 ನಂಬರಿನ ನಿವೇಶನವನ್ನು ಉದ್ಯಾನವನಕ್ಕಾಗಿ ಬಿಟ್ಟಿದ್ದು, 60 ನಂಬರಿನ ಫ್ಲಾಟ್‌ನ್ನು ನಾಗರಿಕ ಸೌಲಭ್ಯಕ್ಕಾಗಿ ಬಿಟ್ಟಿದ್ದು ಉಳಿದ 58 ಫ್ಲಾಟ್‌ಗಳು ಮೂಲ ಮಾಲಿಕರ ಹೆಸರಿನಲ್ಲಿ ಇ- ಸ್ವತ್ತು ತಯಾರಗಬೇಕಾಗಿತ್ತು.
ಇದರಲ್ಲಿ ಮೂಲ ಮಾಲಿಕನ ಹೆಸರನ್ನು ಬಿಟ್ಟು 3ನೇ ವ್ಯಕ್ತಿಯಾದ ಕಳಸ ಗ್ರಾಮದ ಅಜುರುದ್ದಿನ.ಬಂ.ಬಂದಗಿಸಾಬನವರ, ಹೆಸರಿಗೆ 26 ಫ್ಲಾಟ್‌ಗಳನ್ನು ಯಾವುದೇ ನೋಂದ ಕಾಗದ ಇಲ್ಲದೆ ಕೆವಲ 200 ರೂ. ಬಾಂಡ್ ಮೇಲೆ ಈ ಹಿಂದಿನ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಎ.ಕೆ. ಧರ್ಮಣ್ಣ ಹಾಗೂ ಗ್ರಾ ಪಂ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿ ಯಾವುದೇ ದಾಖಲೆಗಳನ್ನು ಪರಿಶೀಲಿಸದೆ ಬಂದಗಿ ಸಾಬ ಹೆಸರಿನಲ್ಲಿ 26 ಫ್ಲಾಟ್‌ಗಳ ಇ-ಸ್ವತ್ತು ಉತಾರ ತಯಾರಿಸಲು ಸಭೆಯಲ್ಲಿ ಎಲ್ಲರೂ ಸೇರಿ ಠರಾವು ಪಾಸ್ ಮಾಡಿ ಒಪ್ಪಿಗೆ ಸೂಚಿಸಿದ್ದಾರೆ.
ಬಂದಗಿ ಸಾಬ ಅವರ ಹಣದ ಆಮಿಷಕ್ಕೆ ಒಳಗಾಗಿ 26 ಫ್ಲಾಟ್‌ಗಳನ್ನು ಕಾನೂನು ಬಾಹಿರವಾಗಿ ಬಂದಗಿಸಾಬ ಹೆಸರಿಗೆ ನಮೂಸಿದಿ ಇ-ಸ್ವತ್ತು ಪೂರೈಸಿರುತ್ತಾರೆ. ಹೀಗೆ ಪೂರೈಸಿದ 26 ಫ್ಲಾಟ್‌ಗಳನ್ನು ಗ್ರಾಮದ ಕೆಲವರು ಖರೀದಿ ಮಾಡಿಕೊಂಡಿದ್ದಾರೆ.
ಖರೀದಿಸಿದ ಫ್ಲಾಟ್‌ಗಳಿಗೆ ನೀಡಿರುವ ಈ 26 ಈ ಸ್ವತ್ತುಗಳು ಕಾನೂನು ಬಾಹಿರವಾಗಿರುವುದರಿಂದ ಯಾವ ಸೌಲಭ್ಯಗಳು ದೊರೆಯಿತ್ತಿಲ್ಲ. ಹೀಗೆ ಕಾಯ್ದೆ ಕಾನೂನು ಗಾಳಿಗೆ ತೂರಿದ ಈ ಹಿಂದಿನ ಪಿಡಿಒ ಅವರನ್ನು ಕೆಲಸದಿಂದ ವಜಾ ಮಾಡಬೇಕು ಹಾಗೂ ಪಂಚಾಯತ್ ಆಡಳಿತ ಮಂಡಳಿಯ ವಿರುದ್ದ ಕಾನೂನು ಕ್ರಮ ಜರುಗಿಸಬೇಕೆಂದು ಮಂಜುನಾಥ ಎಮ್.ಯಲವಿಗಿ, ಮೌಲಾಸಾಬ. ಎಪ್. ಹಗೇದ, ಚನ್ನಪ್ಪ.ಬ. ಮಲ್ಲಾಪೂರ ಪ್ರತಿಭಟನೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ಅದರಂತೆ ಈ ಹಿಂದೆ ಜು.2 ರಂದು ಯರೆಬೂದಿಹಾಳ ಗ್ರಾ.ಪಂ. ಎದುರು ಪ್ರತಿಭಟನೆ ನಡೆಸಿದ್ದರು. ಆ ಸಂದರ್ಭ ಈ ತಾ.ಪಂ. ಇಒ ಜಗದೀಶ ಕಮ್ಮಾರ ಮಾತನಾಡಿ 1 ತಿಂಗಳ ಒಳಗಾಗಿ ಎಲ್ಲವನ್ನೂ ಸರಿಪಡಿಸುತ್ತೇನೆಂದು ಲಿಖಿತ ರೂಪದ ಮೂಲಕ ಲೇಟರ್ ನೀಡಿದ್ದರು. ಲೇಟರ್ ನೀಡಿ ಒಂದುವರೆ ತಿಂಗಳು ಕಳೆದರೂ ಯಾವ ಪ್ರಯೋಜನ ಆಗಿಲ್ಲ. ಆದ್ದರಿಂದ ಇದು ಸರಿ ಆಗುವವರೆಗೂ ಧರಣಿ ನಡೆಸುತ್ತೇವೆಂದು ಮುದಕಣ್ಣ ಮಲ್ಲಾಪೂರ ಹೇಳಿದರು.
ಪ್ರತಿಭಟನೆಯಲ್ಲಿ ಮುದಕಣ್ಣ ಮಲ್ಲಾಪೂರ, ಮಮತಾಜ ಬೀ ಹಗೇದ, ಮಂಜುನಾಥ ಯಲವಗಿ, ಗುರುಶಿದ್ದಪ್ಪ ಮುಡೆಣ್ಣೆವರ, ಈಶ್ವರಪ್ಪ ಆದರಳ್ಳಿ, ಮೌಲಾಲಿ ಹಗೆದ, ಹನುಮಂತಪ್ಪ ಸೋರಟುರ, ಕುಮಾರ ಕುರವೀನಶೇಟ್ಟಿ, ಸೇರಿದಂತೆ ಅನೇಕರಿದ್ದರು.