Advertisement
ಪುರಸಭೆ ವ್ಯಾಪ್ತಿಯಲ್ಲಿರುವ 23 ವಾರ್ಡ್‌ಗಳ ಪೈಕಿ 7 ಸಾಮಾನ್ಯ, 6 ಸಾಮಾನ್ಯ ಮಹಿಳೆ, 3 ಹಿಂದುಳಿದ ವರ್ಗ (ಎ) ಮಹಿಳೆ, 1 ಹಿಂದುಳಿದ ವರ್ಗ (ಬಿ) ಮಹಿಳೆ, 3 ಹಿಂದುಳಿದ ವರ್ಗ (ಎ), 1 ಹಿಂದುಳಿದ ವರ್ಗ (ಬಿ), 1 ಪರಿಶಿಷ್ಟ ಪಂಗಡ ಹಾಗೂ 1 ಪರಿಶಿಷ್ಟ ಜಾತಿಗೆ ಮೀಸಲಾತಿ ನೀಡಲಾಗಿದೆ.
ಮಹಿಳೆಯರಿಗಿಲ್ಲ ಶೇ. 50 ಮೀಸಲಾತಿ
ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಶೇ. 50 ರಷ್ಟು ಪ್ರಾತಿನಿಧ್ಯ ನೀಡಬೇಕು ಎನ್ನುವ ನಿಯಮ ಇಲ್ಲಿಗೆ ಮಾತ್ರ ಅನ್ವಯ ಆಗಿಲ್ಲ. ಇದಕ್ಕೂ ಮೊದಲು ಪ್ರಕಟವಾದ ವಾರ್ಡುವಾರು ಮೀಸಲಾತಿ ಪಟ್ಟಿಯಲ್ಲಿಯೂ 23 ವಾರ್ಡುಗಳ ಪೈಕಿ ಮಹಿಳೆಯರಿಗೆ ಕೇವಲ 10 ಸ್ಥಾನಗಳಲ್ಲಿ ಮಾತ್ರ ಅವಕಾಶ ನೀಡಲಾಗಿತ್ತು. ಅಂತಿಮ ಮೀಸಲಾತಿ ಪಟ್ಟಿಯಲ್ಲಿಯೂ 10 ಸ್ಥಾನಗಳನ್ನೂ ಮಾತ್ರ ನೀಡಲಾಗಿದೆ.
ಅದಲು – ಬದಲು
ಮೇ 25 ರಂದು ಮೊದಲು ಪ್ರಕಟಗೊಂಡ ಮೀಸಲಾತಿ ಪಟ್ಟಿಗೆ ಕೆಲವರು ಆಕ್ಷೇಪಣೆ ಸಲ್ಲಿಸಿದ ಕಾರಣ ಈಗ ಕೆಲವೊಂದನ್ನು ಬದಲಾಯಿಸ ಲಾಗಿದೆ. ಹಿಂದುಳಿದ ವರ್ಗ (ಎ) ಮಹಿಳೆಯಿದ್ದ ಫೆರ್ರಿ ವಾರ್ಡ್‌ಗೆ ಈ ಬಾರಿ ಹಿಂದುಳಿದ ವರ್ಗ (ಎ), ಸಾಮಾನ್ಯ ಮಹಿಳೆ ಇದ್ದ ಚಿಕನ್‌ಸಾಲ್(ಎಡಬದಿ) ವಾರ್ಡ್‌ಗೆ ಹಿಂದುಳಿದ (ಬಿ) ವರ್ಗಕ್ಕೆ, ಹಿಂದುಳಿದ ವರ್ಗ (ಬಿ) ಇದ್ದ ಮೀನು ಮಾರ್ಕೇಟ್ ವಾರ್ಡ್‌ಗೆ ಈಗ ಸಾಮಾನ್ಯ ನೀಡಲಾಗಿದೆ. ಸಾಮಾನ್ಯವಿದ್ದ ಕೋಡಿ ಉತ್ತರಕ್ಕೆ ಸಾಮಾನ್ಯ ಮಹಿಳೆ, ಪರಿಶಿಷ್ಟ ಜಾತಿಯಿದ್ದ ಟಿ.ಟಿ. ವಾರ್ಡ್‌ಗೆ ಸಾಮಾನ್ಯ ಮಹಿಳೆ, ಹಿಂದುಳಿದ ವರ್ಗ (ಎ) ಇದ್ದ ನಾನಾ ಸಾಹೇಬ್ ವಾರ್ಡ್‌ಗೆ ಹಿಂದುಳಿದ ವರ್ಗ (ಎ) ಮಹಿಳೆ, ಸಾಮಾನ್ಯ ಮಹಿಳೆಯಿದ್ದ ಜೆಎಲ್‌ಬಿಗೆ ಪರಿಶಿಷ್ಟ ಜಾತಿ, ಸಾಮಾನ್ಯ ಮಹಿಳೆ ಇದ್ದ ಹುಂಚಾರುಬೆಟ್ಟು ಸಾಮಾನ್ಯ ವರ್ಗಕ್ಕೆ ನೀಡಲಾಗಿದೆ.
ಕಾರ್ಕಳ: ಕಾರ್ಕಳ ಪುರ ಸಭೆಯ ವಾರ್ಡುವಾರು ಮೀಸಲಾತಿ ಅಂತಿಮ ಪಟ್ಟಿ ಪ್ರಕಟಗೊಂಡಿದೆ. ಒಟ್ಟು 23 ವಾರ್ಡ್‌ಗಳ ಪೈಕಿ 11 ವಾರ್ಡ್‌ಗಳಲ್ಲಿ ಮಹಿಳೆಯರಿಗೆ ಅವಕಾಶ ನೀಡಲಾಗಿದೆ. ಈ ಹಿಂದೆ ಗೊಂದಲಕ್ಕೊಳಗಾಗಿದ್ದ ಪೆರ್ವಾಜೆ ಸದ್ಭಾವನ ನಗರದಲ್ಲಿ ಸಾಮಾನ್ಯ ಬದಲಾಗಿ ಅಂತಿಮ ಪಟ್ಟಿಯಲ್ಲಿ ಸಾಮಾನ್ಯ ಮಹಿಳೆಗೆ ಅವಕಾಶ ನೀಡಲಾಗಿದೆ. ಗಾಂಧಿ ಮೈದಾನ ಅತ್ತೂರು ವಾರ್ಡ್‌ನಲ್ಲಿ ಸಾಮಾನ್ಯ ತೆಗೆದು ಸಾಮಾನ್ಯ ಮಹಿಳೆಗೆ ಹಾಗೂ ತಾಲೂಕು ಕಚೇರಿ-ಕಾಬೆಟ್ಟು ವಾರ್ಡ್‌ನಲ್ಲಿ ಸಾಮಾನ್ಯ ಮಹಿಳೆ ತೆಗೆದು ಸಾಮಾನ್ಯ ನೀಡಲಾಗಿದೆ.
ಆದರೆ ವರ್ಣಬೆಟ್ಟು- ಗೊಮ್ಮಟಬೆಟ್ಟು ವಾರ್ಡ್‌ನಲ್ಲಿ ಈ ಹಿಂದಿದ್ದ ಪಟ್ಟಿಯಲ್ಲಿದ್ದಂತೆ ಮೂರನೇ ಬಾರಿಗೆ ಸಾಮಾನ್ಯ ಮೀಸಲಾತಿ ಮುಂದುವರಿದಿದೆ. ಐದು ವರ್ಷಕೊಮ್ಮೆ ಬದಲಾಗಬೇಕೆನ್ನುವ ನಿಯಮವಿದ್ದರೂ ವರ್ಣಬೆಟ್ಟು-ಗೋಮಟಬೆಟ್ಟು ವಾರ್ಡ್‌ನಲ್ಲಿ ಬದಲಾಗಲಿಲ್ಲ.