ಬೆಂಗಳೂರು : ಕೋವಿಡ್ ನಿಯಂತ್ರಣಕ್ಕೆ ಬರುವವರೆಗೆ ತಮ್ಮ ಪಕ್ಷ ಆಯೋಜಿಸಿದ್ದ ಜನತಾ ಜಲಧಾರೆ ಕಾರ್ಯಕ್ರಮ ಮುಂದೂಡಲಾಗಿದೆ ಎಂದು ಮಾಜಿ ಸಿಎಂ ಎಚ್ .ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನವರಿ 26ರಿಂದ ರಾಜ್ಯದ 51 ಪ್ರಮುಖ ನದಿಗಳ ನೀರು ಸಂಗ್ರಹ ಮಾಡಿ ಜಲಧಾರೆ ಕಾರ್ಯಕ್ರಮ ದ ಮೂಲಕ ತಿಳುವಳಿಕೆ ಮೂಡಿಸಲು ಕಾರ್ಯಕ್ರಮ ಆಯೋಜಿಸಿದ್ದೆವು.ಕಳಸದ ಮೂಲಕ 180 ತಾಲೂಕು ಪ್ರವಾಸ ಮಾಡಲು ಯೋಚಿಸಿದ್ದೆವು. ಆದರೆ ಕೋವಿಡ್ ನಿಯಂತ್ರಣಕ್ಕೆ ಬಂದ ಮೇಲೆ ಜನತಾ ಜಲಧಾರೆ ಕಾರ್ಯಕ್ರಮ ನಡೆಸುತ್ತೇವೆ ಎಂದರು.
ನಮ್ಮ ನೀರು ನಮ್ಮ ಹಕ್ಕು ಎಂಬ ಪರಿಜ್ಞಾನ ಈ ಅಮೃತ ಮಹೋತ್ಸವದ ಸಂದರ್ಭದಲ್ಲಿ ಕೈ ನಾಯಕರಿಗೆ ಮೂಡಿರುವುದಕ್ಕೆ ಅಭಿನಂದನೆಗಳು. ಅಂದು ಶಾಂತಿಯುವ ಧರಣಿ ಮಾಡಿದ ರೈತರ ಮೇಲೆ ಪ್ರಹಾರ ನಡೆಸಿ, ಬಾಸುಂಡೆ ಬರುವಂತೆ ಹಲ್ಲೆ ನಡೆಸಿದ್ದರು. ರೈತರ ಮೇಲೆ ದಬ್ಬಾಳಿಕೆ ಮಾಡಿ, ಚಿತ್ರದುರ್ಗ, ಬಳ್ಳಾರಿ ಜೈಲ್ ಗೆ ಕಳಿಸಿದ ಕಾಂಗ್ರೆಸ್ ಇಂದು ನಮ್ಮ ನೀರು ನಮ್ಮ ಹಕ್ಕು ಎಂದು ಹೊರಟಿದೆ ಎಂದು ವ್ಯಂಗ್ಯವಾಡಿದರು.
ಯಾವ ನೈತಿಕತೆ ಇಂದ ಮಹಾದಾಯಿ ಪಾದಯಾತ್ರೆ ಮಾಡ್ತಿರಾ? ಮುಂದಿನ ಅಧಿವೇಶನದಲ್ಲಕ ಅಧಿವೇಶನದಲ್ಲಿ ಕಾಂಗ್ರೆಸ್ ನಾಯಕರ ಸಮ್ಮುಖದಲ್ಲಿ ಮಾತನಾಡುತ್ತೇನ ಎಂದು ಹೇಳಿದರು.
ಜವಾಬ್ದಾರಿಯುತ ಜನ ಪ್ರತಿನಿಧಿಗಳಾಗಿ, ಸರ್ಕಾರದ ನಿಯಮಗಳನ್ನು ಉಲ್ಲಂಘನೆ ಮಾಡಬಾರದು. ಹೀಗಾಗಿ ಜನವರಿ 26ರ ಜಲಧಾರೆ ಕಾರ್ಯಕ್ರಮ ಮುಂದೂಡಿಕೆ ಮಾಡಿದ್ದೇವೆ. ಕೋವಿದ್ ತಹಬದಿಗೆ ಬಂದ ಮೇಲೆ ಮಾಡುತ್ತೇವೆ ಎಂದು ಹೇಳಿದರು.
ದೇಶದಲ್ಲಿ ಬಡತನ ಹೆಚ್ಚಾಗುತ್ತಿದೆ. ಇದಕ್ಕೆ ಕಾರಣ ಸರ್ಕಾರದ ಈ ರೀತಿ ನಿಲುವು.ಘೋಷಣೆ ಮಾಡಿರೋ ಪ್ಯಾಕೇಜ್ ಗಳು ಬಡವರಿಗೆ ತಲುಪಬೇಕು. ವ್ಯಾಕ್ಸಿನೇಷನ್ ನಿಂದಾಗಿ ಒಳ್ಳೆದಾಗಿದೆ. ವ್ಯಾಕ್ಸಿನೇಷನ್ ಪಡೆದವರಿಗೆ ಮತ್ತೆ ಕೊರೋನಾ ಬಂದರೆ ಅಷ್ಟೊಂದು ಪರಿಣಾಮ ಬೀರುತ್ತಿಲ್ಲ .ವ್ಯಾಕ್ಸಿನೇಷನ್ ನಲ್ಲಿ ಅಕ್ರಮ ನಡೆಯುತ್ತಿದ್ದರೆ ಅದನ್ನ ಸರ್ಕಾರ ತಡೆಗಟ್ಟಬೇಕು ಎಂದು ಆಗ್ರಹಿಸಿದರು.