Advertisement

Coconut Oil Controversy: 20 ವರ್ಷಗಳ ಕೊಬ್ಬರಿ ಎಣ್ಣೆ ವಿವಾದಕ್ಕೆ ಸುಪ್ರೀಂ ಬ್ರೇಕ್‌

09:41 AM Dec 20, 2024 | Team Udayavani |

ಹೊಸದಿಲ್ಲಿ: ಕೊಬ್ಬರಿ ಎಣ್ಣೆ (Coconut Oil) ಖಾದ್ಯವೋ ಅಥವಾ ಸೌಂದರ್ಯವರ್ಧಕವೋ ಎಂಬ 20 ವರ್ಷಗಳ ಗೊಂದಲಕ್ಕೆ ಕೊನೆಗೂ ಸುಪ್ರೀಂ ಕೋರ್ಟ್‌ ಅಂತ್ಯ ಹಾಡಿದೆ. ಕೊಬ್ಬರಿ ಎಣ್ಣೆಯನ್ನು ಯಾವ ರೀತಿ ಮಾರ್ಕೆಟಿಂಗ್‌ ಮಾಡಲಾಗುತ್ತದೆ ಎಂಬುದನ್ನು ಆಧರಿಸಿ ಅದು ಖಾದ್ಯವೋ ಅಥವಾ ಸೌಂದರ್ಯವರ್ಧಕ ಎಂಬುದನ್ನು ನಿರ್ಧರಿಸಿ ಎಂದು ತ್ರಿಸದಸ್ಯ ನ್ಯಾಯಪೀಠ ಆದೇಶ ನೀಡಿದೆ.

Advertisement

ಕೊಬ್ಬರಿ ಎಣ್ಣೆಗೆ ಸಂಬಂಧಿಸಿದಂತೆ ಸುಮಾರು 20 ವರ್ಷಗಳಿಂದ ಸುಪ್ರೀಂಕೋರ್ಟ್‌ನಲ್ಲಿ (Supreme Court) ವಿಚಾರಣೆ ನಡೆಯುತ್ತಿದ್ದು, ಸಿಜೆಐ ಸಂಜೀವ್‌ ಖನ್ನಾ ಅವರನ್ನೊಳಗೊಂಡ ತ್ರಿಸದಸ್ಯ ಪೀಠ ಈ ಆದೇಶ ನೀಡಿದೆ. ಅಡುಗೆಗೆ ಬಳಸುವ ಕೊಬ್ಬರಿ ಎಣ್ಣೆ ಆಹಾರ ಸುರಕ್ಷತೆ ಮಾನದಂಡಗಳಿಗೆ ಪೂರಕವಾಗಿರಬೇಕು. ಅದೇ ರೀತಿ ತಲೆಗೆ ಹಚ್ಚಲು ಬಳಸುವ ಕೊಬ್ಬರಿ ಎಣ್ಣೆ ಸೌಂದರ್ಯ ವರ್ಧಕ ಮಾನದಂಡಗಳಿಗೆ ಅನುಸಾರವಾಗಿರಬೇಕು ಎಂದು ಸುಪ್ರೀಂ ಕೋರ್ಟ್‌ನ ನ್ಯಾಯಪೀಠ ಹೇಳಿದೆ.

ಏನಿದು ಪ್ರಕರಣ?: ಶುದ್ಧ ಕೊಬ್ಬರಿ ಎಣ್ಣೆಯನ್ನು “ಹೇರ್‌ ಆಯಿಲ್‌’ (Hair Oil) ಎಂದು ಪರಿಗಣಿಸಲು ಕೋರಿ ಕಂದಾಯ ಇಲಾ­ಖೆ ಸುಪ್ರೀಂ ಕೋರ್ಟ್‌ ಮೆಟ್ಟಿಲೇ­ರಿತ್ತು. ಇದರಲ್ಲಿ ಪ್ಯಾರಾಚೂಟ್‌ ಬ್ರಾಂಡ್‌ ವಿರುದ್ಧದ 3 ಪ್ರಕರಣಗಳು ಸೇರಿದ್ದವು.

Advertisement

Udayavani is now on Telegram. Click here to join our channel and stay updated with the latest news.

Next