ನವದೆಹಲಿ: ಯುದ್ಧ ನೌಕೆಗಳ ಮೇಲ್ಮೈ ನಿಂದ ಹಾರಿಸಬಹುದಾದ, “ಸರ್‌ಫೇಸ್-ಟು-ಏರ್’ ಮಾದರಿಯ ಕ್ಷಿಪಣಿಯೊಂದನ್ನು ಶುಕ್ರವಾರ ಯಶಸ್ವಿಯಾಗಿ ಪರೀಕ್ಷಿಸಲಾಯಿತು.
ರಕ್ಷಣಾ ಅಭಿವೃದ್ಧಿ ಮತ್ತು ಸಂಶೋಧನಾ ಸಂಸ್ಥೆ (ಡಿಆರ್‌ಡಿಒ) ಈ ಕ್ಷಿಪಣಿಯನ್ನು ಅಭಿವೃದ್ಧಿಪಡಿಸಿದೆ.
“ಒಡಿಶಾದ ಚಾಂದೀಪುರ ಬಳಿಯ ಸಾಗರದಲ್ಲಿ ನಿಲ್ಲಿಸಲಾಗಿದ್ದ ನೌಕಾಪಡೆಯ ಯುದ್ಧ ಹಡಗಿನಿಂದ ವಿಎಲ್-ಎಸ್‌ಎಸ್‌ಎಎಂ ಕ್ಷಿಪಣಿಯನ್ನು ಪರೀಕ್ಷಾರ್ಥವಾಗಿ ಉಡಾವಣೆ ಮಾಡಲಾಗಿದ್ದು, ಅದು ನಿರೀಕ್ಷಿತ ಫಲಿತಾಂಶ ನೀಡಿದೆ’ ಎಂದು ಡಿಆರ್‌ಡಿಒ ಹೇಳಿದೆ.
ಯುದ್ಧ ನೌಕೆಗಳ ಮೇಲಾಗುವ ವೈಮಾನಿಕ ದಾಳಿಗಳನ್ನು ತಡೆಯಲು ನೌಕೆಗಳ ಮೂಲಕ ಉಡಾವಣೆ ಮಾಡುವಂಥ ಕ್ಷಿಪಣಿಗಳನ್ನು ತಯಾರಿಸಲಾಗಿದೆ ಎಂದು ಸಂಸ್ಥೆ ವಿವರಿಸಿದೆ.
ಹೊಸ ಕ್ಷಿಪಣಿಗಳ ಉಡಾವಣೆ ಯಶಸ್ವಿಯಾಗಿದ್ದಕ್ಕೆ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಡಿಆರ್‌ಡಿಒ ಸಂಸ್ಥೆಯನ್ನು ಅಭಿನಂದಿಸಿದ್ದಾರೆ.