Advertisement
ವೃತ್ತಿಯಲ್ಲಿ ವಕೀಲರಾಗಿದ್ದ ಕುದ್ಮುಲ್ ರಂಗರಾಯರು ಸತ್ಯ, ನ್ಯಾಯಕ್ಕಾಗಿ ದುಡಿದು, ದೀನ ದಲಿತರ ವಕಾಲತ್ತುಗಳನ್ನು ತಾವೇ ವಹಿಸುವ ಮೂಲಕ ‘ಬಡವರ ಬಂಧು’ ಹಾಗೂ ‘ಬಡವರ ವಕೀಲರು’ ಎಂದೇ ಪ್ರಸಿದ್ಧಿ ಪಡೆದಿದ್ದರು. ಆಗಿನ ಬ್ರಿಟಿಷ್ ಕಾಲದ 19ನೇ ಶತಮಾನದ ಮಧ್ಯ ಕಾಲದಲ್ಲಿ ದಲಿತರ ಅಭಿವೃದ್ಧಿಗಾಗಿ ಪ್ರತ್ಯೇಕ ಇಲಾಖೆಯನ್ನು ಸ್ಥಾಪಿಸಿ ಪ್ರತ್ಯೇಕ ಶಾಲೆ, ಕಾಲನಿ, ಭೂಮಿ, ಬಾವಿ, ವಿತರಣಾ ಕಾರ್ಯಕ್ರಮವನ್ನು ರೂಪಿಸಿದ್ದರು.
Related Articles
19ನೇ ಶತಮಾನದ ಅಂತ್ಯದಲ್ಲಿ ಜಿಲ್ಲೆಯ ದಲಿತರಿಗೆ ಯಾವುದೇ ಶಾಲಾ, ಸಂಸ್ಥೆಗಳಲ್ಲಿ ಮುಕ್ತ ಪ್ರವೇಶವಿರಲಿಲ್ಲ. ಆಗ ರಂಗರಾಯರು ವೆಲೆನ್ಸಿಯ ಸಮೀಪದ ನಂದಿಗುಡ್ಡೆ ಬಳಿ ಅಸ್ಪೃಶ್ಯರಿಗಾಗಿಯೇ ಒಂದು ಶಾಲೆಯನ್ನು ತೆರೆದು ಆ ಶಾಲೆಯಲ್ಲಿ ಮಕ್ಕಳಿಗೆ ಭೋಜನದ ವ್ಯವಸ್ಥೆಯನ್ನು ಕಲ್ಪಿಸಿ ಕೊಟ್ಟಿದ್ದರು.
Advertisement
1982ರಲ್ಲಿ ದಲಿತರ ವಿದ್ಯಾಭ್ಯಾಸಕ್ಕೆ ತನ್ನದೇ ಸ್ವಂತ ಹಣದಿಂದ ನಗರದ ಚಿಲಿಂಬಿಯಲ್ಲಿ ಬಾಡಿಗೆಗೆ ಮನೆಯನ್ನುಪಡೆದು ಪ್ರಾಥಮಿಕ ಶಾಲೆಯನ್ನು ಆರಂಭಿಸಿದ್ದರು. ಆದರೆ ಕೆಲವು ಸ್ಥಾಪಿತ ಹಿತಾಸಕ್ತಿಗಳ ಕಿರುಕುಳದಿಂದಾಗಿ, ಶಾಲೆಯನ್ನು ಮುಚ್ಚಬೇಕಾದ ಪರಿಸ್ಥಿತಿ ಬಂದಿತ್ತು. ಬಳಿಕ ಕಂಕನಾಡಿ, ಬೋಳೂರು ದಡ್ಡಲ್‌ಕಾಡ್‌ಗಳಲ್ಲಿ ಪ್ರಾಥಮಿಕ ಶಾಲೆಯನ್ನು ಪ್ರಾರಂಭಿಸಿದ್ದರು. ದಲಿತರಿಗೆ ಕೈಗಾರಿಕಾ ತರಬೇತಿ
ದಲಿತರು ಸ್ವಾವಲಂಬಿಗಳಾಗಿ ಬದುಕಬೇಕು ಎಂಬ ನೆಲೆಯಲ್ಲಿ ಶೇಡಿಗುಡ್ಡೆಯ ಕಟ್ಟಡದಲ್ಲಿ ದಲಿತರಿಗೆ ಕೈಗಾರಿಕಾ ತರಬೇತಿಯನ್ನು ಆರಂಭಿಸಿ ದರು. ಕೊರಗ ಜನಾಂಗದವರಿಗೆ ಭೂಮಿ ಹಾಗೂ ಮನೆಯನ್ನು ನಿರ್ಮಿಸಿ ಆಶ್ರಯವನ್ನು ಕಲ್ಪಿಸಿದ್ದರು. ಜತೆಗೆ ಗುಡಿ ಕೈಗಾರಿಕೆಗೂ ಸಹಾಯ ಮಾಡಿ ಈ ಜನಾಂಗಕ್ಕೆ ಉಡುಪಿ-ಪುತ್ತೂರಿನಲ್ಲಿ ದರ್ಖಾಸು ಭೂಮಿ ಕೊಡಿಸಿದ್ದರು. ಹೆಮ್ಮಕ್ಕಳಿಗೆ ವಿದ್ಯಾರ್ಥಿನಿಲಯ
ದೂರದ ಊರಿನಿಂದ ಬರುವ ಹೆಮ್ಮಕ್ಕಳಿಗೆ ವಿದ್ಯಾರ್ಥಿನಿಲಯವನ್ನು ಶೇಡಿಗುಡ್ಡೆಯಲ್ಲಿ ಸ್ಥಾಪಿಸಿ ಅವರ ವಿದ್ಯಾಭ್ಯಾಸಕ್ಕೆ, ಸ್ಫೂರ್ತಿ ಹಾಗೂ ಬೆಳವಣಿಗೆಗೆ ಅವಕಾಶ ಕಲ್ಪಿಸಿದರು. ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ ಶಿಕ್ಷಕ ತರಬೇತಿ ಕೊಟ್ಟು, ಅವರು ಸ್ಥಾಪಿಸಿದ ಅತ್ತಾವರ ಬಾಬುಗುಡ್ಡೆ ಶಾಲೆ, ದಡ್ಡಲ್‌ಕಾಡ್, ಉಳ್ಳಾಲ, ತಲಪಾಡಿ, ತೋಕೂರು, ಬೋಳೂರು, ಮೂಲ್ಕಿ, ಉಡುಪಿ, ಬನ್ನಂಜೆ, ನೇಜಾರು ಮುಂತಾದ ಶಾಲೆಗಳಿಗೆ ಪರಿಶಿಷ್ಟ ಜಾತಿಯ ಅಧ್ಯಾಪಕರನ್ನು ನೇಮಿಸಿ ಅವರ ಸರ್ವತೋಮುಖ ಬೆಳವಣಿಗೆಗೆ ದಾರಿ ದೀಪವಾಗಿದ್ದರು.