Advertisement

Mangaluru: ಕೆಥೋಲಿಕರಿಂದ ಆತ್ಮಗಳ ದಿನಾಚರಣೆ: ಮರಣ ಹೊಂದಿದವರ ವಿಶೇಷ ಸ್ಮರಣೆ

12:31 AM Nov 04, 2024 | Team Udayavani |

ಮಂಗಳೂರು: ಮರಣ ಹೊಂದಿನ ತಮ್ಮ ಪ್ರೀತಿಪಾತ್ರರನ್ನು ಕೆಥೋಲಿಕರು ಶನಿವಾರ ವಿಶೇಷವಾಗಿ ಸ್ಮರಿಸಿದರು. ಮೃತಪಟ್ಟ ಭಕ್ತ ವಿಶ್ವಾಸಿಗಳ ಸ್ಮರಣೆ ದಿನ(ಆಲ್ ಸೋಲ್ಸ್ ಡೇ)ವನ್ನು ಚರ್ಚ್‌ಗಳಲ್ಲಿ ವಿಶೇಷ ಬಲಿಪೂಜೆ ನೆರವೇರಿಸಿ ಅವರಿಗಾಗಿ ಪ್ರಾರ್ಥಿಸಲಾಯಿತು. ದ.ಕ. ಹಾಗೂ ಉಡುಪಿ ಜಿಲ್ಲೆಯ ಎಲ್ಲ ಚರ್ಚ್‌ಗಳಲ್ಲಿ ಆಚರಣೆ ಕಂಡುಬಂತು.

Advertisement

ಮಂಗಳೂರು ಧರ್ಮಪ್ರಾಂತ್ಯಕ್ಕೆ ಒಳಪಟ್ಟ ಎಲ್ಲ ಕ್ರೈಸ್ತರು ಮೃತರಾದ ಕುಟುಂಬಸ್ಥರನ್ನು ಸ್ಮರಿಸಿದರು. ಮಂಗಳೂರು, ಪುತ್ತೂರು, ಬಂಟ್ವಾಳ, ವಿಟ್ಲ, ಬೆಳ್ತಂಗಡಿ, ಕಿನ್ನಿಗೋಳಿ, ಕಾಸರ ಗೋಡು, ಮುಡಿಪು ವಲಯಗಳ ಚರ್ಚ್‌ಗಳಲ್ಲಿ ಆಚರಣೆ ನಡೆಯಿತು. ಗ್ರಾಮಾಂತರ ಭಾಗದಲ್ಲಿ ಬೆಳಗ್ಗೆ ಹಾಗೂ ನಗರ ಪ್ರದೇಶಗಳಲ್ಲಿ ಸಂಜೆ ಬಲಿಪೂಜೆ ಜರಗಿತು.

ಪವಿತ್ರ ಸಭೆಯಿಂದ ಗುರುತಿಸಲ್ಪಟ್ಟ ಹಾಗೂ ಗುರುತಿಸಲ್ಪಡದ ದೇವರ ಸಾಮ್ರಾಜ್ಯದಲ್ಲಿರುವ ಎಲ್ಲ ಸಂತ ಭಕ್ತರನ್ನು ಕೆಥೋಲಿಕ್‌ ಧರ್ಮ ಪ್ರಾಂತ್ಯ ನ. 1ರಂದು ಸ್ಮರಿಸುತ್ತದೆ. ದೇವರ ಮಾರ್ಗದಲ್ಲಿ ನಡೆದು ಸ್ವರ್ಗಸ್ಥರಾಗಿ ಪ್ರತ್ಯೇಕ ದಿನದಂದು ಸ್ಮರಿಸದೇ ಇರುವ ಸಂತ ಭಕ್ತರು ಸಾಕಷ್ಟು ಸಂಖ್ಯೆಯಲ್ಲಿದ್ದು, ಅವರನ್ನು ಜತೆಯಾಗಿ ಸ್ಮರಿಸುವ ದಿನವೇ ಸಮಸ್ತ ಸಂತಭಕ್ತರ ದಿನವಾಗಿದೆ. ಅಂದು ಸಂತ ಭಕ್ತರ ಆದರ್ಶಗಳನ್ನು ಪಾಲಿಸಿ ಜೀವನ ದಲ್ಲಿ ಅಳವಡಿಸುವಂತೆ ಬಲಿಪೂಜೆಯ ವೇಳೆ ಪ್ರವಚನ ನೀಡಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next