Advertisement
ಖಾಸಗಿ ಮತ್ತು ಕೆಎಸ್ಆರ್ಟಿಸಿಯ ನೂರಾರು ಸಿಟಿ ಬಸ್ಗಳು 500ಕ್ಕೂ ಅಧಿಕ ಟ್ರಿಪ್ಗ್ಳಲ್ಲಿ ಬಸ್ ನಿಲ್ದಾಣವನ್ನು ಪ್ರವೇಶಿಸುವ ಸ್ಥಳ ಇದಾಗಿದೆ. ಮೊದಲೇ ಈ ಸ್ಥಳ ಇಕ್ಕಟ್ಟಿನಿಂದ ಕೂಡಿದೆ. ನಿಲ್ದಾಣದೊಳಗೆ ಸ್ಥಳಾವಕಾಶದ ಕೊರತೆಯಿಂದ ಕೆಲವು ಬಸ್ಗಳನ್ನು ರಸ್ತೆ ಬದಿಯಲ್ಲಿಯೇ ನಿಲುಗಡೆ ಮಾಡಲಾಗುತ್ತಿದೆ. ಪಾದಚಾರಿಗಳು ನಡೆದಾಡಲು ಸ್ಥಳಾವಕಾಶವೇ ಇಲ್ಲ.
ಇಲ್ಲಿ ಲಭ್ಯವಿರುವ ಸ್ವಲ್ಪ ಜಾಗದಲ್ಲಿ ಫುಟ್ಪಾತ್ ನಿರ್ಮಿಸುವ ಕಾಮಗಾರಿ ಈ ಹಿಂದೆ ನಡೆದಿತ್ತು. ಆದರೆ ಫುಟ್ಪಾತ್ ನಿರ್ಮಾಣವಾಗಬೇಕಾದ ಸ್ಥಳದಲ್ಲಿ ಕೂಡ ಸಾಮಗ್ರಿಗಳನ್ನು ಇಟ್ಟಿರುವುದರಿಂದ ಆ ಕಾಮಗಾರಿ ಕೂಡ ಅಪೂರ್ಣವಾಗಿದೆ. ಅಪಾಯಕಾರಿ ನಡಿಗೆ
ನಿಲ್ದಾಣ ಪ್ರವೇಶಿಸುವ ಬಸ್ಗಳ ನಡುವೆ ರಸ್ತೆಯ ಮಧ್ಯದಲ್ಲಿಯೇ ಪಾದಚಾರಿಗಳು ಕೂಡ ನಿಲ್ದಾಣದ ಕಡೆಗೆ ಅಪಾಯಕಾರಿಯಾಗಿ ಹೋಗುವಂತಾಗಿದೆ. ಮಹಿಳೆಯರು, ಹಿರಿಯ ನಾಗರಿಕರು ಪ್ರಾಣಭಯದಲ್ಲಿ ನಡೆಯುವಂತಾಗಿದೆ. ರಸ್ತೆಯ ಒಂದು ಬದಿಯಲ್ಲಿ ಕಟ್ಟಡ ಸಾಮಗ್ರಿಗಳನ್ನು ಇಡಲಾಗಿದ್ದರೆ ಇನ್ನೊಂದು ಬದಿಯಲ್ಲಿ ಹಳೆಯ ವಿದ್ಯುತ್ ಕಂಬಗಳನ್ನು ಇಡಲಾಗಿದೆ.
Related Articles
ರಸ್ತೆ ಬದಿ, ಫುಟ್ಪಾತ್ ಮೇಲೆ ಇರುವ ಸಾಮಗ್ರಿಗಳನ್ನು ತೆರವುಗೊಳಿಸದಿದ್ದರೆ ಇಲ್ಲಿ ಅವಘಡ ಉಂಟಾಗುವ ಅಪಾಯವಿದೆ. ಕೂಡಲೇ ಸಾಮಗ್ರಿಗಳನ್ನು ತೆರವು ಗೊಳಿಸಬೇಕು ಎನ್ನುತ್ತಾರೆ ಬಸ್ ಚಾಲಕರು, ಪಾದಚಾರಿಗಳು.
Advertisement