Advertisement

Korea ಓಪನ್‌ ಬ್ಯಾಡ್ಮಿಂಟನ್‌: ಸಾತ್ವಿಕ್‌-ಚಿರಾಗ್‌ ದ್ವಿತೀಯ ಸುತ್ತಿಗೆ

11:04 PM Jul 18, 2023 | Team Udayavani |

ಯೋಸು (ಕೊರಿಯಾ): “ಕೊರಿಯಾ ಓಪನ್‌ ಸೂಪರ್‌ 500 ಬ್ಯಾಡ್ಮಿಂಟನ್‌’ ಪಂದ್ಯಾವಳಿಯಲ್ಲಿ ಸಾತ್ವಿಕ್‌ ಸಾಯಿರಾಜ್‌ ರಾಂಕಿ ರೆಡ್ಡಿ – ಚಿರಾಗ್‌ ಶೆಟ್ಟಿ 2ನೇ ಸುತ್ತು ಪ್ರವೇಶಿಸಿದ್ದಾರೆ.

Advertisement

ವಿಶ್ವದ ನಂ.3 ಜೋಡಿಯಾಗಿ ರುವ ಸಾತ್ವಿಕ್‌-ಚಿರಾಗ್‌ ಮೊದಲ ಸುತ್ತಿನ ಪಂದ್ಯದಲ್ಲಿ ಥಾಯ್ಲೆಂಡ್‌ನ‌ ಸುಪಾಕ್‌ ಜೊಮೊ-ಕಿಟ್ಟಿನುಪಾಂಗ್‌ ಕೆಡ್ರೆನ್‌ ಅವರನ್ನು 21-16, 21-14 ಅಂತರದಿಂದ ಮಣಿಸಿದರು. ಮುಂದಿನ ಸುತ್ತಿನಲ್ಲಿ ಚೀನದ ಹೆ ಜಿ ಟಿಂಗ್‌-ಝೂ ಹಾವೊ ಡಾಂಗ್‌ ವಿರುದ್ಧ ಸೆಣಸಲಿದ್ದಾರೆ.

ಆದರೆ ಇನ್ನೊಂದು ಡಬಲ್ಸ್‌ನಲ್ಲಿ ಭಾರತಕ್ಕೆ ಹಿನ್ನಡೆ ಆಯಿತು. ಧ್ರುವ ಕಪಿಲ ಜತೆಗೂಡಿ ಆಡಲಿಳಿದಿದ್ದ ಎಂ.ಆರ್‌. ಅರ್ಜುನ್‌ ಪಂದ್ಯದ ನಡುವೆ ಬೆನ್ನುನೋವಿಗೆ ಸಿಲುಕಿದ ಕಾರಣ ಹಿಂದೆ ಸರಿದರು. ಇವರು ಚೀನದ ಲಿಯು ಯು ಚೆನ್‌-ಒಯು ಕ್ಸುವಾನ್‌ ಯಿ ವಿರುದ್ಧ ಆಡುತ್ತಿದ್ದರು. ಮೊದಲ ಗೇಮ್‌ನಲ್ಲಿ 5-6ರ ಹಿನ್ನಡೆಯಲ್ಲಿದ್ದಾಗ ಅರ್ಜುನ್‌ ಬೆನ್ನುನೋವಿಗೊಳಗಾದರು.

Advertisement

Udayavani is now on Telegram. Click here to join our channel and stay updated with the latest news.

Next