Advertisement

ಕೊರಿಯಾ ಓಪನ್‌ ಬ್ಯಾಡ್ಮಿಂಟನ್‌: ಪ್ರಶಸ್ತಿ ಸುತ್ತಿಗೆ ಚಿರಾಗ್‌-ಸಾತ್ವಿಕ್‌

08:31 PM Jul 22, 2023 | Team Udayavani |

ಯೋಸು (ಕೊರಿಯಾ): ಚಿರಾಗ್‌ ಶೆಟ್ಟಿ-ಸಾತ್ವಿಕ್‌ ಸಾಯಿರಾಜ್‌ ರಾಂಕಿರೆಡ್ಡಿ “ಕೊರಿಯಾ ಓಪನ್‌ ಸೂಪರ್‌-500′ ಬ್ಯಾಡ್ಮಿಂಟನ್‌ ಡಬಲ್ಸ್‌ ಪ್ರಶಸ್ತಿಗೆ ಹತ್ತಿರವಾಗಿದ್ದಾರೆ.

Advertisement

ಶನಿವಾರದ ಸೆಮಿಫೈನಲ್‌ನಲ್ಲಿ ಭಾರತದ ಜೋಡಿ 21-15, 24-22 ನೇರ ಗೇಮ್‌ಗಳಿಂದ ಚೀನದ, ವಿಶ್ವದ ನಂ.2 ಖ್ಯಾತಿಯ ಲಿಯಾಂಗ್‌ ವೀ ಕೆಂಗ್‌-ವಾಂಗ್‌ ಚಾಂಗ್‌ ಅವರನ್ನು ಮಣಿಸಿ ಈ ಋತುವಿನ ಸತತ 2ನೇ ಪಂದ್ಯಾವಳಿಯ ಫೈನಲ್‌ಗೆ ಲಗ್ಗೆ ಹಾಕಿತು. ಇವರಿಬ್ಬರು ಜೂನ್‌ನಲ್ಲಿ ಇಂಡೋನೇಷ್ಯಾ ಟೂರ್ನಿಯ ಪ್ರಶಸ್ತಿ ಸುತ್ತಿಗೆ ನೆಗೆದಿದ್ದರು.
“ಜಿನ್ನಾಮ್‌ ಸ್ಟೇಡಿಯಂ’ನಲ್ಲಿ ನಡೆದ ಸೆಮಿಫೈನಲ್‌ ಪಂದ್ಯವನ್ನು ಭಾರತದ ಜೋಡಿ 40 ನಿಮಿಷಗಳಲ್ಲಿ ಜಯಿಸಿತು. ಇದು ಕೆಂಗ್‌-ಚಾಂಗ್‌ ವಿರುದ್ಧ ಚಿರಾಗ್‌-ಸಾತ್ವಿಕ್‌ ಸಾಧಿಸಿದ ಮೊದಲ ಗೆಲುವು. ಇವರೆದುರು ಆಡಿದ ಹಿಂದಿನೆರಡು ಪಂದ್ಯಗಳಲ್ಲಿ ಸೋಲನುಭವಿಸಿದ್ದರು.

ಚಿರಾಗ್‌-ಸಾತ್ವಿಕ್‌ ಪ್ರಸಕ್ತ ಋತುವಿನಲ್ಲಿ ಉತ್ತಮ ಫಾರ್ಮ್ ಕಾಯ್ದುಕೊಂಡು ಬಂದಿದ್ದು, 3ನೇ ಪ್ರಶಸ್ತಿ ಮೇಲೆ ಕಣ್ಣಿಟ್ಟಿದ್ದಾರೆ. ಇದಕ್ಕೂ ಮೊದಲು ಸ್ವಿಸ್‌ ಓಪನ್‌ ಸೂಪರ್‌-500′ ಮತ್ತು ಇಂಡೋನೇಷ್ಯಾ ಸೂಪರ್‌-1000′ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next