ಕೊರಟಗೆರೆ: ಒಂದೇ ರಾತ್ರಿ 4 ಕಡೆ ಡಾಬಾ ಹಾಗೂ ಅಂಗಡಿಗಳ ಶಟರ್ ಒಡೆದು 1 ಲಕ್ಷ ರೂ ಗೂ ಹೆಚ್ಚು ಮೌಲ್ಯದ ನಗದು ಹಾಗೂ ವಸ್ತುಗಳನ್ನ ಕಳವು ಮಾಡಲಾಗಿದೆ.
ಕೊರಟಗೆರೆ ತಾಲೂಕಿನ ಶ್ರೀ ಕ್ಷೇತ್ರ ಗೊರವನಹಳ್ಳಿ ಸಮೀಪದ ಗೌಡರ ಡಾಬಾ ಎಂ ಎಸ್ ಐ ಎಲ್ ವೈನ್ಸ್ ಸ್ಟೋರ್ ಸಮೀಪದ ಚಿಲ್ಲರೆ ಅಂಗಡಿ, ಮತ್ತೊಂದು ಹೋಟೆಲ್ ಸೇರಿದಂತೆ ಜಟ್ಟಿ ಅಗ್ರಹಾರದ ಅಂಗಡಿಯೂಂದರ ಬೀಗ ಒಡೆದು 1ಲಕ್ಷ ರೂ ಹೆಚ್ಚು ಮೌಲ್ಯದ ನಗದು ಹಾಗೂ ಅಂಗಡಿ ವಸ್ತುಗಳನ್ನ ಕಳವು ಮಾಡಲಾಗಿದೆ.
ಗೊರವನಹಳ್ಳಿ ಗೌಡರ ಡಾಬದಲ್ಲಿ 20 ಸಾವಿರಕ್ಕೂ ಹೆಚ್ಚು ಮೌಲ್ಯದ ಸಿಗರೇಟ್ ಹಾಗೂ ಗುಟ್ಕಾ 10 ಸಾವಿರಕ್ಕೂ ಹೆಚ್ಚು ನಗದು, ಪಕ್ಕದ ನರೇಂದ್ರ ಎಂಬುವರ ಅಂಗಡಿ 20 ಸಾವಿರದ ಸಿಗರೇಟ್ ಹಾಗೂ ಗುಟ್ಕಾ ಅಡಿಗೆ ಎಣ್ಣೆ,10ಸಾವಿರ ನಗದು, ಲಕ್ಷ್ಮಣ್ ಎಂಬುವರ ಮತ್ತೊಂದು ಹೋಟೆಲ್ ಅಲ್ಲಿಯೂ 20 ಸಾವಿರ ನಗದು 5-10 ಸಾವಿರ ಮೌಲ್ಯದ ಸಿಗರೇಟ್ ಗುಟ್ಕಾ ಹಾಗೂ ಕಡ್ಲೆ ಎಣ್ಣೆ ಈ ಕಳ್ಳತನದ ಬಳಿಕ ಪಕ್ಕದ ಜಟ್ಟಿಅಗ್ರಹಾರದಲ್ಲಿ ಸುರೇಶ್ ಎಂಬುವರ ಅಂಗಡಿಯ 15ಸಾವಿರಕ್ಕೂ ಹೆಚ್ಚು ಮೌಲ್ಯದ ಅಡುಗೆ ಎಣ್ಣೆ, ಸಿಗರೇಟ್ , ಗುಟ್ಕಾ 5ಸಾವಿರ ನಗದು ಹಣವನ್ನ ಅಂಗಡಿಗಳ ಬೀಗ ಹೊಡೆದು ಕಳವು ಮಾಡಲಾಗಿದೆ.
ಈ ಕಳವು ಪ್ರಕ್ರಿಯೆ ಕೇವಲ ದಿನಸಿ ಸಾಮಾನುಗಳು, ಬೀಡಿ ಸಿಗರೇಟು ಗುಟ್ಕಾ , ಅಡುಗೆ ಎಣ್ಣೆ ಸಣ್ಣಪುಟ್ಟ ದಿನಸಿ ಪದಾರ್ಥಗಳು, ನಗದು ಹಣ ಸೇರಿದಂತೆ ಚಿಲ್ಲರೆ ಹಣಕ್ಕೆ ಕಳ್ಳತನ ಪ್ರಕ್ರಿಯೆ ನಡೆದಿದ್ದು, ಯಾರೋ ಅಕ್ಕಪಕ್ಕದ ಸ್ಥಳೀಯರು ಕಂಡು ಕೇಳಿ ನೋಡಿ ಯಾರು ಇಲ್ಲದ ಅಂಗಡಿಗಳನ್ನು ಟಾರ್ಗೆಟ್ ಮಾಡಿ ಕಳ್ಳತನ ಮಾಡಲಾಗಿದೆ ಎನ್ನಲಾಗಿದೆ.
ಈ ಸಂಬಂಧ ಕೊರಟಗೆರೆ ಪೋಲಿಸ್ ವೃತ್ತ ನೀರೀಕ್ಷರಾದ ಸಿಪಿಐ ಕೆ ಸುರೇಶ್ ಪಿಎಸ್ಐ ಚೇತನ್ ಕುಮಾರ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.