ಮಂಜೇಶ್ವರ: ಬೈಕ್ ಕಳವು ಸಂಬಂಧ ಮೇಲ್ಪರಂಬ ಪೊಲೀಸ್ ಠಾಣೆ ವ್ಯಾಪ್ತಿಯ ಕೋಳಿಯಡ್ಕ ಲಕ್ಷಂವೀಡು ನಿವಾಸಿಗಳಾದ ಅಬ್ದುಲ್ ಬಾಸಿತ್(22) ಮತ್ತು ಮುಹಮ್ಮದ್ ಅಫ್ಸಲ್(23)ನನ್ನು ಮಂಜೇಶ್ವರ ಪೊಲೀಸರು ಬಂಧಿಸಿದರು. ಉಪ್ಪಳ ನಿವಾಸಿಯಾದ ಮುಹಮ್ಮದ್ ಹಮೀದ್ ಅವರ ಬೈಕನ್ನು ಕಳವು ಮಾಡಲಾಗಿತ್ತು. ಆರೋಪಿಗಳು ಬೈಕ್ ಕಳವು ಮಾಡುವ ದೃಶ್ಯ ಸಿಸಿಟಿವಿಯಲ್ಲಿ ಮೂಡಿ ಬಂದಿತ್ತು. ಈ ದೃಶ್ಯದ ಆಧಾರದಲ್ಲಿ ಪೊಲೀಸರು ತನಿಖೆ ನಡೆಸಿದ್ದರು. ಆರೋಪಿಗಳನ್ನು ವಿದ್ಯಾನಗರದಿಂದ ಬಂಧಿಸಲಾಯಿತು.
Advertisement
ನೇಣು ಬಿಗಿದು ಯುವಕ ಆತ್ಮಹತ್ಯೆಮಾನ್ಯ: ಮಾನ್ಯ ನಿವಾಸಿ ಕೃಷ್ಣ ಅವರ ಪುತ್ರ ವಿಜೇಶ್(38) ಮನೆಯ ಬೆಡ್ ರೂಂನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ.
ಕಾಸರಗೋಡು: ಸೈಡ್ ನೀಡುವ ವಿಷಯದಲ್ಲಿ ಬಸ್ ಚಾಲಕ ಚೆರ್ಕಳ ಕೋಲಾಚಿಯಡ್ಕ ನಿವಾಸಿ ಅಹಮ್ಮದ್ ಕಬೀರ್(35) ಅವರಿಗೆ ವಿದ್ಯಾನಗರದಲ್ಲಿ ಹೆಲ್ಮೆಟ್‌ನಲ್ಲಿ ಹಲ್ಲೆ ಮಾಡಿದ ಘಟನೆ ನಡೆದಿದೆ. ಈ ಸಂಬಂಧ ಬೈಕ್ ಸವಾರ ಅಣಂಗೂರು ನಿವಾಸಿ ಮುಹಮ್ಮದ್ ರೊಯಾಸ್ (30) ವಿರುದ್ಧ ವಿದ್ಯಾನಗರ ಪೊಲೀಸರು ಕೇಸು ದಾಖಲಿಸಿದ್ದಾರೆ. ಗಾಂಜಾ ಸಹಿತ ಯುವಕನ ಬಂಧನ
ಕಾಸರಗೋಡು: ಸ್ಪೆಷಲ್ ಡ್ರೈವ್‌ನಂತೆ ಅಬಕಾರಿ ದಳ ನಡೆಸಿದ ಕಾರ್ಯಾಚರಣೆಯಲ್ಲಿ ಕಾರಿನಲ್ಲಿ ಸಾಗಿಸುತ್ತಿದ್ದ 0.75 ಗ್ರಾಂ ಮೆಥಾಫಿಟಾಮಿನ್ ಮತ್ತು 5 ಗ್ರಾಂ ಗಾಂಜಾ ವಶಪಡಿಸಿಕೊಂಡು, ಈ ಸಂಬಂಧ ಚೆರ್ವತ್ತೂರು ಮುಂಡಕಂಡಂ ಆಯಿಶಾ ಮಂಜಿಲ್‌ನ ಶಂಶೀರ್(27)ನನ್ನು ಬಂಧಿಸಿದೆ. ಕಾರನ್ನು ವಶಪಡಿಸಿಕೊಂಡಿದೆ.
Related Articles
ಕಾಸರಗೋಡು: ಚೆರ್ವತ್ತೂರು ತುರುತ್ತಿ ಕಾವುಂಚಿರದ ತಲಕ್ಕಾಟ್ ಹೌಸ್‌ನ ಸಾಮುವಲ್ ಅವರ ಪುತ್ರ ಎಸ್.ಮುರುಗನ್(41) ಮನೆಯ ಕಿಟಕಿ ಸರಳಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಚಂದೇರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Advertisement
ಪ್ಯಾಕೆಟ್ ಮದ್ಯ ಸಹಿತ ಯುಕವನ ಬಂಧನಕಾಸರಗೋಡು: ಸ್ಕೂಟರ್‌ನಲ್ಲಿ ಸಾಗಿಸುತ್ತಿದ್ದ 144 ಪ್ಯಾಕೆಟ್ ಮದ್ಯ ವಶಪಡಿಸಿಕೊಂಡ ಅಬಕಾರಿ ದಳ ಈ ಸಂಬಂಧ ಚೆರ್ಕಳದ ಮೋಹನನ್(44)ನನ್ನು ಬಂಧಿಸಿದೆ. ಮದ್ಯ ಸಾಗಿಸಲು ಬಳಸಿದ ಸ್ಕೂಟರನ್ನು ವಶಪಡಿಸಿದೆ. ಟ್ಯಾಂಕರ್ ಲಾರಿಯಿಂದ ರಸ್ತೆಗೆ ಹರಿದ ಎಣ್ಣೆ
ಕಾಸರಗೋಡು: ಆಹಾರದೆಣ್ಣೆ ಸಾಗಿಸುತ್ತಿದ್ದ ಟ್ಯಾಂಕರ್ ಸೋರಿಕೆಯಿಂದಾಗಿ ಕಾಸರಗೋಡಿನ ಹೊಸ ಬಸ್ ನಿಲ್ದಾಣ ಪರಿಸರದ ರಾ.ಹೆದ್ದಾರಿಯಲ್ಲಿ ಹರಿದು ವಾಹನ ಸಂಚಾರಕ್ಕೆ ಅಡ್ಡಿಯುಂಟಾಯಿತು. ಡಿ.25 ರಂದು ರಾತ್ರಿ 10.30 ಕ್ಕೆ ಮಂಗಳೂರಿನಿಂದ ಕಣ್ಣೂರಿಗೆ ಸಾಗುತ್ತಿದ್ದ ಟ್ಯಾಂಕರ್ ಲಾರಿಯಿಂದ ಎಣ್ಣೆ ರಸ್ತೆಗೆ ಹರಿದಿದೆ. ರಸ್ತೆಯಲ್ಲಿ ವ್ಯಾಪಕವಾಗಿ ಎಣ್ಣೆ ಹರಡಿದ್ದರಿಂದ ಇತರ ವಾಹನಗಳಿಗೆ ಸಂಚರಿಸಲು ಸಾಧ್ಯವಾಗದೆ ವಾಹನ ಸಂಚಾರ ಮೊಟಕುಗೊಂಡಿತು. ಕಾಸರಗೋಡು ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸಿ ನೀರು ಹಾಯಿಸಿ ಎಣ್ಣೆ ತೆರವುಗೊಳಿಸಿದ ಬಳಿಕ ವಾಹನ ಸಂಚಾರ ಆರಂಭಗೊಂಡಿತು.