Advertisement
ಶಿವರಾಮ್ ಅವರ ಶ್ರೀ ತುಂಗಾ ಎನ್ನುವ ಹೆಸರಿನ ಮನೆಯಲ್ಲಿ ಕಳ್ಳತನವಾಗಿದ್ದು, ಶಿವರಾಮ್ ಹಾಗೂ ಅವರ ಪತ್ನಿ ಕೆಲಸದ ನಿಮಿತ್ತ ಬೆಂಗಳೂರಿಗೆ ತೆರಳಿದ್ದಾಗ ಈ ಕೃತ್ಯ ಸಂಭವಿಸಿದೆ. ಮನೆಯ ಒಳಗಡೆ ರೂಮ್‌ನಲ್ಲಿದ್ದ ಸುಮಾರು 142 ಗ್ರಾಂ ತೂಕದ ವಿವಿಧ ಬಗೆಯ ಅಂದಾಜು 8.52 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳು, 8 ಲಕ್ಷ ರೂ. ಮೌಲ್ಯದ 40 ಗ್ರಾಂ ವಜ್ರದ ಆಭರಣಗಳು, 2 ಲಕ್ಷ ರೂ. ನಗದನ್ನು ಕಳ್ಳತನಗೈದಿರುವುದಾಗಿದೆ. ಒಟ್ಟಾರೆ 18.52 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ ನಗದು ಕಳ್ಳತನವಾಗಿದೆ. ಈ ಕುರಿತಂತೆ ಶಿವರಾಮ್ ಅವರ ಸ್ನೇಹಿತ ಗಣೇಶ್ ಅವರು ನೀಡಿದ ದೂರಿನಂತೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. Advertisement
Kundapura: ಮನೆಗೆ ನುಗ್ಗಿ ಚಿನ್ನಾಭರಣ ಕಳವು
06:54 PM Dec 22, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.