Advertisement
ಕೆಸರುಮಯ ಮಾರ್ಗ ಸೇತುವೆ ನಿರ್ಮಾಣ ಹಂತದಲ್ಲಿ ಅಲ್ಲಿನ ಪರಿಸರದ ಮಣ್ಣನ್ನು ಅಗೆದು ಮುಖ್ಯರಸ್ತೆಯ ಅಂಚಿಗೆ ಎಸೆದಿರುವುದು ಸುರಿಯುತ್ತಿರುವ ಮಳೆಯ ಈ ಸಂದರ್ಭದಲ್ಲಿ ರಸ್ತೆಯುದ್ದಕ್ಕೂ ಕೆಸರು ಮಯವಾಗಿ ದ್ವಿಚಕ್ರ ವಾಹನ ಸಹಿತ ಇತರ ವಾಹನದಲ್ಲಿ ಸಂಚರಿಸುವವರು ಪ್ರಯಾಸದ ಪ್ರಯಾಣದಲ್ಲಿ ಸಾಗಬೇಕಾಗಿದೆ.
ಸ್ವಾಗತ ಗೋಪುರದ ಬಳಿಯ ಮಾಸ್ತಿಕಟ್ಟೆಯಿಂದ ದಳಿವರೆಗಿನ ಮುಖ್ಯ ರಸ್ತೆಯ ಡಾಮರು ಕಾಮಗಾರಿ ನಾನಾ ವಿಘ್ನಗಳ ನಡುವೆ ಅಂತೂ ಪೂರ್ಣಗೊಂಡಿದೆ. ಆದರೆ ಹಳೆಯ ಸೇತುವೆಯನ್ನು ತೆರವುಗೊಳಿಸಿ ಆರಂಭಗೊಂಡಿದ್ದ ಕಿರುಸೇತುವೆ ನಿರ್ಮಾಣ ಕಾಮಗಾರಿಗೆ ದೀರ್ಘಕಾಲದ ಅವ ಬೇಕಾಯಿತು. ಅರಣ್ಯ ಇಲಾಖೆ ಕಾನೂನು ರಸ್ತೆ ನಿರ್ಮಾಣಕ್ಕೆ ಅಡ್ಡಿಯಾಯಿತು. ಕಂದಾಯ, ಅರಣ್ಯ ಇಲಾಖೆ ಹಾಗೂ ಸರಕಾರದ ನಡುವಿನ ಒಡಂಬಡಿಕೆಯಿಂದ ಸೇತುವೆ ನಿರ್ಮಾಣಕ್ಕೆ ಅವಕಾಶ ಕಲ್ಪಿಸಲಾಯಿತು. ಸೇತುವೆ ನಿರ್ಮಾಣ ಕಾಮಗಾರಿ ವಿಳಂಬ ನೀತಿ ಬಗ್ಗೆ ಸುದಿನದಲ್ಲಿ ವರದಿ ಮಾಡಿದ ನಂತರ ಕಾಮಗಾರಿ ಆಮೆನಡಿಗೆಯಲ್ಲಿ ಕೊನೆಗೊಂಡಿತು. ಆದರೆ ಡಾಮರು ಕಾಣದ ಸೇತುವೆ ಸಹಿತ ಪರಿಸರ ಪ್ರತಿದಿನ ಕೊಲ್ಲೂರು ದೇಗುಲಕ್ಕೆ ಆಗಮಿಸುವ ಯಾತ್ರಾರ್ಥಿಗಳ ಸುಗಮ ವಾಹನ ಸಂಚಾರಕ್ಕೆ ಎದುರಾಗಿದ್ದ ಹೊಂಡಮಯ ರಸ್ತೆಯ ಅಡ್ಡಿಆತಂಕ ಕೊನೆಗೂ ಅಂತ್ಯಗೊಂಡಿತು ಎನ್ನುವಷ್ಟರಲ್ಲಿ ಇದೀಗ ಸೇತುವೆಯ ಮೇಲ್ಗಡೆಯ ಹೊಂಡ ಡಾಮರಿಲ್ಲದ ಹೊಂಡಮಯ ಪರಿಸರ ರಸ್ತೆಯಾಯಿತು. ವಾಹನ ಸಂಚಾರಕ್ಕೆ ಬಹಳಷ್ಟು ಕಿರಿಕಿರಿ ಉಂಟುಮಾಡುತ್ತಿದೆ. ಇದಕ್ಕೊಂದು ತುರ್ತು ಪರಿಹಾರ ಕಂಡು ಕೊಳ್ಳಬೇಕಾಗಿರುವುದರಿಂದ ಇಲಾಖೆ ಹಾಗು ಗುತ್ತಿಗೆದಾರರು ಶೀಘ್ರ ಕ್ರಮ ಕೈಗೊಳ್ಳಬೇಕಾಗಿದೆ. ಮಳೆಯಿಂದ ತೊಡಕು
ಕಿರುಸೇತುವೆ ಬಳಿ ಡಾಮರು ಕಾಮಗಾರಿಯನ್ನು ಪೂರ್ಣ ಗೊಳಿಸಲಾಗುವುದು. ಮಳೆಗಾಲದ ಹಿನ್ನೆಲೆಯಲ್ಲಿ ಕಾಮಗಾರಿ ಪೂರ್ಣಗೊಳಿಸಲು ತೊಡಕಾಗಿದೆ.
-ಇಲಾಖೆ ಅಧಿಕಾರಿಗಳು
Related Articles
ವಾಹನ ಸಂಚಾರಕ್ಕೆ ತೊಡಕಾಗಿರುವ ಇಲ್ಲಿನ ಸೇತುವೆ ಬಳಿಯ ಕಾಮಗಾರಿ ಅಪೂರ್ಣಗೊಂಡಿರುವುದು ಸಾವಿರಾರು ನಿತ್ಯಪ್ರಯಾಣಿಕರಿಗೆ ಕಿರಿಕಿರಿ ಉಂಟುಮಾಡಿದೆ. ಇಲಾಖೆ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಪ್ರತಿಭಟನೆ ಅನಿವಾರ್ಯವಾದೀತು.
-ರಮೇಶ ಗಾಣಿಗ ಕೊಲ್ಲೂರು, ತಾ.ಪಂ. ಮಾಜಿ ಸದಸ್ಯರು
Advertisement
2 ತಾಸು ಟ್ರಾಫಿಕ್ ಜಾಮ್ಅ.27ರಂದು ಕೆಸರುಮಯ ಮುಖ್ಯ ರಸ್ತೆಯ ಹೊಂಡದಲ್ಲಿ ಬಸ್ ಸಂಚರಿಸಲಾಗದೇ ಜಾಮ್ ಆದ ಹಿನ್ನೆಲೆಯಲ್ಲಿ 2 ಗಂಟೆಗೂ ಮಿಕ್ಕಿ ಕಾಲ ಟ್ರಾಫಿಕ್ ಜಾಮ್ ಆಗಿ ಭಕ್ತರು ಪರದಾಡಿದರು. ಬೆಂಗಳೂರು, ಕೇರಳ ಹಾಗು ತಮಿಳುನಾಡಿನಿಂದ ಆಗಮಿಸಿದ ಭಕ್ತರಿಗೆ ಸಾಗಬೇಕಾದ ಸಮಯದ ವಿಳಂಬದಿಂದಾಗಿ ಮುಂಗಡ ಕಾಯ್ದಿರಿಸಿದ ರೈಲುಗಳಲ್ಲಿ ಸಾಗಲಾಗದೇ ಪರದಾಡಿ ದರು.ಅನೇಕರು ದುಸ್ಥಿತಿಯಲ್ಲಿರುವ ಸಂಚಾರ ಮಾರ್ಗವಾಗಿ ನಡೆದುಕೊಂಡು ಇನ್ನೊಂದು ಭಾಗದ ಟ್ಯಾಕ್ಸಿಗಳಿಗಾಗಿ ಕಾಯಬೇಕಾದ ಪರಿಸ್ಥಿತಿ ಎದುರಾಯಿತು. ಒಟ್ಟಾರೆ ದಿನವಿಡೀ ವಾಹನ ಸಂಚಾರಕ್ಕೆ ಎದುರಾದ ಗೊಂದಲಮಯ ವ್ಯವಸ್ಥೆಯಿಂದಾಗಿ ಅನೇಕ ಭಕ್ತರು ಹಿಡಿಶಾಪ ಹಾಕುತ್ತಿರುವುದು ಕಂಡುಬಂತು. -ಡಾ| ಸುಧಾಕರ ನಂಬಿಯಾರ್