Advertisement

ಪ್ಲೇ-ಆಫ್ ಸನಿಹ ಕೋಲ್ಕತಾ ನೈಟ್‌ರೈಡರ್

11:24 PM Oct 03, 2021 | Team Udayavani |

ದುಬಾೖ: ಈಗಾಗಲೇ ಕೂಟದಿಂದ ಹೊರಬಿದ್ದಿರುವ ಸನ್‌ರೈಸರ್ ಹೈದರಾಬಾದ್‌ ತಂಡವನ್ನು 6 ವಿಕೆಟ್‌ಗಳಿಂದ ಮಣಿಸಿದ ಕೋಲ್ಕತಾ ನೈಟ್‌ರೈಡರ್ ಪ್ಲೇ ಆಫ್‌ ಸನಿಹ ಬಂದು ನಿಂತಿದೆ.

Advertisement

ರವಿವಾರದ ದ್ವಿತೀಯ ಪಂದ್ಯದಲ್ಲಿ ಹೈದರಾಬಾದ್‌ 8 ವಿಕೆಟ್‌ ನಷ್ಟಕ್ಕೆ ಕೇವಲ 115 ರನ್‌ ಮಾಡಿದರೆ, ಕೆಕೆಆರ್‌ 19.4 ಓವರ್‌ಗಳಲ್ಲಿ 4 ವಿಕೆಟಿಗೆ 119 ರನ್‌ ಬಾರಿಸಿ ತನ್ನ 6ನೇ ಗೆಲುವನ್ನು ದಾಖಲಿಸಿತು.

ಚೇಸಿಂಗ್‌ ವೇಳೆ ಶುಭಮನ್‌ ಗಿಲ್‌ 57 ರನ್‌ ಬಾರಿಸಿ ಅಗ್ರ ಕ್ರಮಾಂಕವನ್ನು ಆಧರಿಸಿ ನಿಂತರು. ನಿತೀಶ್‌ ರಾಣಾ 25 ರನ್‌ ಮಾಡಿದರು.

ಖಾತೆ ತೆರೆಯದ ವೃದ್ಧಿಮಾನ್‌ ಸಾಹಾ ಅವರನ್ನು ದ್ವಿತೀಯ ಎಸೆತದಲ್ಲೇ ಕೆಡವಿದ ಟಿಮ್‌ ಸೌಥಿ ಹೈದರಾಬಾದ್‌ ಕುಸಿತಕ್ಕೆ ಚಾಲನೆ ನೀಡಿದರು. ಜಾಸನ್‌ ರಾಯ್‌ (10) ಕೂಡ ಸಿಡಿಯಲು ವಿಫ‌ಲರಾದರು. ನಾಯಕ ಕೇನ್‌ ವಿಲಿಯಮ್ಸನ್‌ ಬಿರುಸಿನ ಆಟಕ್ಕಿಳಿದರೂ 26 ರನ್‌ ಮಾಡುವಷ್ಟರಲ್ಲಿ ರನೌಟ್‌ ಆಗಿ ನಿರ್ಗಮಿಸಿದರು (21 ಎಸೆತ, 4 ಬೌಂಡರಿ).

ಇದನ್ನೂ ಓದಿ:ಜೂನಿಯರ್‌ ವಿಶ್ವ ಶೂಟಿಂಗ್‌ ಚಾಂಪಿಯನ್‌ಶಿಪ್‌: ಭಾರತಕ್ಕೆ ಅಗ್ರಸ್ಥಾನದ ಗೌರವ

Advertisement

ಡೆತ್‌ ಓವರ್‌ಗಳಲ್ಲಿ ಹಿಟ್ಟರ್‌ಗಳಾದ ಜಾಸನ್‌ ಹೋಲ್ಡರ್‌ ಮತ್ತು ಅಬ್ದುಲ್‌ ಸಮದ್‌ ಕ್ರೀಸಿನಲ್ಲಿದ್ದರು. ಆದರೆ ವರುಣ್‌ ಚಕ್ರವರ್ತಿ ಈ ಜೋಡಿಯನ್ನು ಬೇಗನೇ ಬೇರ್ಪಡಿಸಿದರು. ಹೋಲ್ಡರ್‌ ಕೇವಲ 2 ರನ್‌ ಮಾಡಿ ನಿರ್ಗಮಿಸಿದರು. ಅದೇ ಓವರ್‌ನಲ್ಲಿ 2 ಸಿಕ್ಸರ್‌ ಬಾರಿಸಿದ ಸಮದ್‌ ಸಿಡಿದು ನಿಂತರೂ ಹೆಚ್ಚು ಹೊತ್ತು ಉಳಿಯಲಿಲ್ಲ. ಸೌಥಿ ಮುಂದಿನ ಓವರ್‌ನಲ್ಲೇ ಈ ಅಪಾಯಕಾರಿ ಆಟಗಾರನ ವಿಕೆಟ್‌ ಹಾರಿಸಿದರು. ಸಮದ್‌ ಗಳಿಕೆ 18 ಎಸೆತಗಳಿಂದ 25 ರನ್‌. ಇದು 3 ಸಿಕ್ಸರ್‌ಗಳನ್ನು ಒಳಗೊಂಡಿತ್ತು.

ಸಂಕ್ಷಿಪ್ತ ಸ್ಕೋರ್‌: ಹೈದರಾಬಾದ್‌-8 ವಿಕೆಟಿಗೆ 115 (ವಿಲಿಯಮ್ಸನ್‌ 26, ಸಮದ್‌ 25, ಗರ್ಗ್‌ 21, ಸೌಥಿ 26ಕ್ಕೆ 2, ಚಕ್ರವರ್ತಿ 26ಕ್ಕೆ 2, ಮಾವಿ 29ಕ್ಕೆ 2, ಶಕಿಬ್‌ 20ಕ್ಕೆ 1). ಕೆಕೆಆರ್‌-19.4 ಓವರ್‌ಗಳಲ್ಲಿ 4 ವಿಕೆಟಿಗೆ 119 (ಗಿಲ್‌ 57, ರಾಣಾ 25, ಹೋಲ್ಡರ್‌ 32ಕ್ಕೆ 2).

Advertisement

Udayavani is now on Telegram. Click here to join our channel and stay updated with the latest news.

Next