Advertisement
ಈವರೆಗೆ 36 ಟೆಸ್ಟ್‌ಗಳಲ್ಲಿ ಭಾರತವನ್ನು ಮುನ್ನಡೆಸಿರುವ ವಿರಾಟ್ ಕೊಹ್ಲಿ 21ರಲ್ಲಿ ಗೆಲುವು ಕಂಡಿದ್ದಾರೆ. ಈ ಸಾಧನೆಯಲ್ಲಿ ಅವರದು ಸೌರವ್ ಗಂಗೂಲಿಗೆ ಸರಿಸಮನಾದ ದಾಖಲೆ. ಇವರಿಬ್ಬರೂ ಭಾರತಕ್ಕೆ ಅತ್ಯಧಿಕ ಗೆಲುವು ತಂದಿತ್ತ ನಾಯಕರ ಯಾದಿಯಲ್ಲಿ ಜಂಟಿ 2ನೇ ಸ್ಥಾನದಲ್ಲಿದ್ದಾರೆ. ಇನ್ನೊಂದು ಟೆಸ್ಟ್‌ನಲ್ಲಿ ಗೆಲುವು ಸಾಧಿಸಿದರೆ ಕೊಹ್ಲಿ ಒಬ್ಬರೇ 2ನೇ ಸ್ಥಾನದಲ್ಲಿ ಕಾಣಿಸಿಕೊಳ್ಳಲಿದ್ದು, ಗಂಗೂಲಿ ಮೂರಕ್ಕೆ ಇಳಿಯಲಿದ್ದಾರೆ.
60 ಪಂದ್ಯಗಳಲ್ಲಿ 27 ಗೆಲುವು ಕಂಡ ಮಹೇಂದ್ರ ಸಿಂಗ್ ಧೋನಿಗೆ ಅಗ್ರಸ್ಥಾನ ಮೀಸಲು. ಮೊಹಮ್ಮದ್ ಅಜರುದ್ದೀನ್ (14), ಸುನೀಲ್ ಗಾವಸ್ಕರ್ (9) ಅನಂತರದ ಸ್ಥಾನದಲ್ಲಿದ್ದಾರೆ. ನಂ.1 ಆಗುವರೇ ಕೊಹ್ಲಿ?
ವಿರಾಟ್ ಕೊಹ್ಲಿ ಮರಳಿ ನಂ.1 ಟೆಸ್ಟ್ ಬ್ಯಾಟ್ಸ್‌ಮನ್ ಆಗುವರೇ ಎಂಬುದು ಮತ್ತೂಂದು ನಿರೀಕ್ಷೆ. ಸದ್ಯ ಆಸ್ಟ್ರೇಲಿಯದ ನಿಷೇಧಿತ ಕ್ರಿಕೆಟಿಗ ಸ್ಟೀವನ್ ಸ್ಮಿತ್ 929 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದ್ದಾರೆ. ಕೊಹ್ಲಿ 903 ಅಂಕ ಹೊಂದಿದ್ದು, 2ನೇ ಸ್ಥಾನದಲ್ಲಿದ್ದಾರೆ. 5 ಪಂದ್ಯಗಳ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದರೆ ಕೊಹ್ಲಿ ಮತ್ತೆ ವಿಶ್ವದ ಅಗ್ರಮಾನ್ಯ ಟೆಸ್ಟ್ ಬ್ಯಾಟ್ಸ್‌ಮನ್ ಆಗುವ ಸಾಧ್ಯತೆ ಇದೆ.