ಮುಂಬೈ: ದುಬೈನಲ್ಲಿ ನಡೆಯುವ ಏಶ್ಯಾ ಕಪ್ ಏಕದಿನ ಕ್ರಿಕೆಟ್ ಟೂರ್ನಮೆಂಟ್ ಗೆ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಅಚ್ಚರಿ ಎಂಬಂತೆ ಭಾರತದ ನಾಯಕ ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡಿ, ರೋಹಿತ್ ಶರ್ಮಾಗೆ ನಾಯಕತ್ವದ ಜವಾಬ್ಧಾರಿ ನಿಡಲಾಗಿದೆ.
ಶನಿವಾರ ಬಿಸಿಸಿಐ ಪ್ರಕಟಿಸಿದ 16 ಆಟಗಾರರ ಪಟ್ಟಿಯಲ್ಲಿ ಹಲವು ಬದಲಾವಣೆ ಮಾಡಲಾಗಿದೆ. ಇಂಗ್ಲೆಂಡ್ ಏಕದಿನ ಸರಣಿಯಲ್ಲಿ ಆಡಿದ್ದ ಸುರೇಶ್ ರೈನ, ಉಮೇಶ್ ಯಾದವ್, ಸಿದ್ದಾರ್ಥ್ ಕೌಲ್ ರನ್ನು ಈ ಸರಣಿಯಿಂದ ಕೈ ಬಿಡಲಾಗಿದೆ.
ಇತ್ತೀಚಿಗೆ ಮುಗಿದ ಚತುಷ್ಕೋನ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಕರ್ನಾಟಕದ ಮನೀಶ್ ಪಾಂಡೆ ಮತ್ತೆ ತಂಡಕ್ಕೆ ಪುನರಾಯ್ಕೆಯಾಗಿದ್ದಾರೆ. ಇವರೊಂದಿಗೆ ಅಂಬಾಟಿ ರಾಯುಡು, ಕೇದಾರ್ ಜಾದವ್ ಕೂಡಾ ತಂಡಕ್ಕೆ ಆಯ್ಕೆಯಾಗಿದ್ದಾರೆ.
ಇದರೊಂದಿಗೆ ರಾಜಸ್ಥಾನದ 20ರ ಹರೆಯದ ಎಡಗೈ ವೇಗಿ ಖಲೀಲ್ ಅಹಮದ್ ಮೊದಲ ಬಾರಿಗೆ ಟೀಂ ಇಂಡಿಯಾ ಕದ ತಟ್ಟಿದ್ದಾರೆ. ತಂಡಕ್ಕೆ ಆಯ್ಕೆಯಾಗುವ ನಿರೀಕ್ಷೆಯಲ್ಲಿದ್ದ, ಉತ್ತಮ ಫಾರ್ಮ್ನಲ್ಲಿರುವ ಕರ್ನಾಟಕದ ಮಯಾಂಕ್ ಅಗರ್ವಾಲ್ ಮತ್ತೆ ನಿರಾಸೆ ಅನುಭವಿಸಿದ್ದಾರೆ.
ಭಾರತ ತಂಡ: ರೋಹಿತ್ ಶರ್ಮ (ನಾಯಕ), ಶಿಖರ್ ಧವನ್ (ಉಪ ನಾಯಕ), ಕೆ.ಎಲ್.ರಾಹುಲ್, ಅಂಬಟಿ ರಾಯುಡು, ಮನೀಶ್ ಪಾಂಡೆ, ಕೇದಾರ್ ಜಾದವ್, ಮಹೇಂದ್ರ ಸಿಂಗ್ ಧೋನಿ (ವಿ.ಕೀಪರ್), ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯ, ಕುಲದೀಪ್ ಯಾದವ್, ಯುಜುವೇಂದ್ರ ಚಾಹಲ್, ಅಕ್ಷರ್ ಪಟೇಲ್, ಭುವನೇಶ್ವರ್ ಕುಮಾರ್, ಜಸ್ಪಿçತ್ ಬುಮ್ರಾಹ್, ಶಾರ್ದೂಲ್ ಠಾಕೂರ್, ಖಲೀಲ್ ಅಹಮದ್