ಬಂಟ್ವಾಳ : ಜ್ಞಾನ, ಧ್ಯಾನ, ತಪಸ್ಸು ಮನುಷ್ಯನಿಗೆ ಅಗತ್ಯ. ಎಲ್ಲವೂ ಭಗವಂತನ ಇಚ್ಛೆಯಂತೆ ನಡೆಯುತ್ತದೆ. ಸಾಧನೆ ಮನಸ್ಸನ್ನು ಶುದ್ಧಿ ಮಾಡುವುದು. ಸರ್ವ ಅಪೇಕ್ಷೆಗಳನ್ನು ಅರ್ಪಣೆ ಮಾಡುವುದೇ ಚಾತುರ್ಮಾಸ್ಯ ಎಂದು ಮುನಿಶ್ರೀ 108 ವೀರ ಸಾಗರ ಮಹಾರಾಜ ಹೇಳಿದರು.
ಅವರು ಜು. 9ರಂದು ಶ್ರೀ ಕ್ಷೇತ್ರ ಪಾಣೇರ್ ಭ| ಶ್ರೀ 1008 ಅನಂತನಾಥ ಸ್ವಾಮಿ ಜಿನ ಚೆ„ತ್ಯಾಲಯದಲ್ಲಿ ಪ್ರಪ್ರಥಮವಾಗಿ ನಡೆಯುತ್ತಿರುವ ಭವ್ಯ ಮಂಗಲ ವರ್ಷಾಯೋಗ ಹಾಗೂ ಚಾತುರ್ಮಾಸ್ಯ ನಿಮಿತ್ತ ನಡೆದ ಕಲಶ ಸ್ಥಾಪನಾ ಮಹೋತ್ಸವದಲ್ಲಿ ಆಶೀರ್ವಚನ ನೀಡಿದರು.
ಶ್ರೀಕ್ಷೇತ್ರ ಸೋಂದಾದ ಭಟ್ಟಾಕಲಂಕಾ ಭಟ್ಟಾರಕ ಸ್ವಾಮಿಗಳು ಮಾತನಾಡಿ ಯೋಗ ಎಲ್ಲರಿಗೂ ದೊರೆಯುತ್ತದೆ. ಧರ್ಮದ ಯೋಗವನ್ನು ಎಲ್ಲರೂ ಆಚರಿಸಬೇಕು. ಈ ಚಾತುರ್ಮಾಸ್ಯದಲ್ಲಿ ಇದು ಹೆಚ್ಚಾಗಿದೆ.
ಗುರು-ಶಿಷ್ಯರ ಮಿಲನದ ದಿನ ಗುರುಪೂರ್ಣಿಮೆಯಾಗಿದ್ದು ಎಲ್ಲರೂ ಇದರ ಮಹತ್ವ ಅರಿಯಬೇಕು ಎಂದರು.
ಚಾತುರ್ಮಾಸ್ಯ ಸಮಿತಿಯ ಗೌರವ ಸಂರಕ್ಷಕ, ಎಸ್.ಸಿ.ಡಿ.ಸಿ.ಸಿ. ಬ್ಯಾಂಕ್ ಅಧ್ಯಕ್ಷ ಎಂ.ಎನ್.ರಾಜೇಂದ್ರ ಕುಮಾರ್ ಕಲಶ ಸ್ಥಾಪನೆ ಮಾಡಿದರು. ಗೌರವ ಸಂರಕ್ಷಕ ಜಿನರಾಜ ಆರಿಗ ಪಚ್ಚಾಜೆ ಧ್ವಜಾರೋಹಣ ನೆರವೇರಿಸಿದರು.
ಕಾರ್ಯಕಾರಿ ಸಮಿತಿ ಅಧ್ಯಕ್ಷ ಸಂಪತ್ ಕುಮಾರ್ ಶೆಟ್ಟಿ ಹೊಸಂಗಡಿ ಅರಮನೆ, ಗೌರವ ಸಂರಕ್ಷಕರಾದ ಭರತ್ ಕುಮಾರ್ ಬಲ್ಲೋಡಿಗುತ್ತು, ಜಯವರ್ಮರಾಜ್ ಬಲ್ಲಾಳ್, ಪುಷ್ಪರಾಜ್ ಜೈನ್ ಮಂಗಳೂರು, ಚಾತುರ್ಮಾಸ್ಯ ಸಮಿತಿಯ ಅಧ್ಯಕ್ಷ ರತ್ನಾಕರ ಜೈನ್ ಮಂಗಳೂರು, ಜಿ.ಪಂ. ಸದಸ್ಯ ಬಿ. ಪದ್ಮಶೇಖರ ಜೈನ್, ಪ್ರಧಾನ ಕಾರ್ಯದರ್ಶಿ ಧರಣೇಂದ್ರ ಇಂದ್ರ ಪಾಣೆಮಂಗಳೂರು, ಕಾರ್ಯದರ್ಶಿಗಳಾದ ಸುಭಾಶ್ಚಂದ್ರ ಜೈನ್ ಬಂಟ್ವಾಳ, ಹರ್ಷರಾಜ್ ಬಲ್ಲಾಳ್, ಬಿ.ಸಿ.ರೋಡ್, ಆರಾಧನ ಸಮಿತಿ ಸಂಚಾಲಕ ಆದಿರಾಜ್ ಜೈನ್, ಕೊçಕುಡೆ, ಸ್ವಾಗತ ಸಮಿತಿ ಸಂಚಾಲಕ ಸತೀಶ್ ಜೈನ್ ಪಿಲಿಂಗಾಲು, ಸಭಾ ಸಮಿತಿ ಸಂಚಾಲಕ ಡಾ| ಸುದೀಪ್ ಇಂದ್ರ ಸಿದ್ಧಕಟ್ಟೆ, ಆಹಾರ ಸಮಿತಿ ಸಂಚಾಲಕ ರಘುಚಂದ್ರ ಜೈನ್ ವಾಮದಪದವು, ಪ್ರಚಾರ ಸಮಿತಿ ಸಂಚಾಲಕ ಸುಕುಮಾರ್ ಬಲ್ಲಾಳ್, ಪುರೋಹಿತ ಸಮಿತಿ ಸಂಚಾಲಕ ಅಜಿತ್ ಕುಮಾರ್ ಇಂದ್ರ ಹಚ್ಚಾಡಿ ಬಸದಿ ಮತ್ತಿತರರು ಉಪಸ್ಥಿತರಿದ್ದರು.
ಚಾತುರ್ಮಾಸ್ಯ ಸಮಿತಿ ಅಧ್ಯಕ್ಷ ಸುದರ್ಶನ್ ಜೈನ್ ವಂದಿಸಿದರು.