ಹೊಸಪೇಟೆ: ದಕ್ಷಿಣಕಾಶಿ ಖ್ಯಾತಿಯ ಹಂಪಿಯ ಶ್ರೀ ವಿದ್ಯಾರಣ್ಯ ಮಠದ ಪೀಠಾಧ್ಯಕ್ಷರಾದ ವಿದ್ಯಾರಣ್ಯ ಭಾರತಿ ಸ್ವಾಮಿಗಳು, ಗುರು ಪೂರ್ಣಿಮೆ ದಿನವಾದ ಬುಧವಾರ ಚಾತುರ್ಮಾಸ್ಯ ಸಂಕಲ್ಪ ಕೈಗೊಂಡರು.
ಇತ್ತೀಚಿಗಷ್ಟೆ ತಿರುಪತಿಗೆ ತೆರಳಿ, ತಿರುಮಲ ವೆಂಕಟೇಶ್ವರ ಸ್ವಾಮಿ ದರ್ಶನ ಪಡೆದುಕೊಂಡು ಹಂಪಿಗೆ ಆಗಮಿಸಿರುವ ಶ್ರೀಗಳು, ತುಂಗಭದ್ರಾ ನದಿಯಲ್ಲಿ ಪುಣ್ಯ ಸ್ನಾನ ಗೈದು, ಚಾತುರ್ಮಾಸ್ಯ ಆರಂಭಿಸಿದರು.
ಬಳಿಕ ಶ್ರೀ ಮಠದಲ್ಲಿ ವ್ಯಾಸ ಮಂಟಪ ಪೂಜೆ ಹಾಗೂ ಸಂಜೆ ವಿರೂಪಾಕ್ಷೇಶ್ವರಿಗೆ ಅಭಿಷೇಕ, ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ಕರ್ನಾಟಕ, ಆಂಧ್ರ, ತೆಲಂಗಾಣ ಹಾಗೂ ಮಹರಾಷ್ಟ್ರರಾಜ್ಯದಿಂದ ಆಗಮಿಸಿದ ಶಿಷ್ಯವರ್ಗ ಶ್ರೀಗಳಿಗೆ ಸಾಮೂಹಿಕ ಪಾದ ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಶ್ರೀಕಾಂತ್, ವೆಂಕಟೇಶ್ ಎಂ.,ಮಂಜುಳಾ ವೆಂಕಟೇಶ್, ಪ್ರವೀಣ್ ಶರ್ಮಾ, ಅನಂತರೆಡ್ಡಿ, ಆಂಜನೇಯ ಗೌಡ, ನಾಗರಾಜ ಪಾಟೇಲ್ ಸೇರಿದಂತೆ ಅಪಾರ ಶಿರ್ಷ ವೃಂದ ಹಾಜರಿದ್ದರು.
ಗುರು ಪೂರ್ಣಿಮೆ ದಿನದಿಂದ ಆರಂಭಗೊಂಡಿರುವ ಚಾತುರ್ಮಾಸ್ಯ ವೃತಾಚರಣೆ ಕಾರ್ತಿಕ ಪೂರ್ಣಿಮೆಯವರೆಗೆ ನಡೆಯಲಿದೆ.ಈ ಕಾಲದಲ್ಲಿ ಶ್ರೀಗಳು ಹಂಪಿ ಕ್ಷೇತ್ರದಲ್ಲಿ ಉಳಿದು ನಿತ್ಯ ಭಕ್ತರಿಗೆ ಪ್ರವಚನ, ಆರ್ಶಿವಚನ ನೀಡಿ ಆರ್ಶಿವಾದ ಮಾಡುವರು. ಶ್ರೀಗಳ ದರ್ಶನ ಪಡೆಯಲು ಕರ್ನಾಟಕ, ಆಂಧ್ರ, ತೆಲಂಗಾಣ ಹಾಗೂ ಮಹರಾಷ್ಟ್ರದಿಂದ ಭಕ್ತರು ಹಂಪಿಗೆ ಆಗಮಿಸುತ್ತಾರೆ.
ಚಾತುರ್ಮಾಸ್ಯ ವೃತಾಚರಣೆ ಪೂರ್ಣಗೊಳಿಸಿದ ನಂತರ ಶ್ರೀಗಳು ರಾಷ್ಟ್ರ ಪರ್ಯಟನೆ ಕೈಗೊಳ್ಳುವರು.