Advertisement

ಭರತನಾಟ್ಯ ಪ್ರತಿಭೆ ವಾಣಿಶ್ರೀ

03:45 AM Feb 10, 2017 | Team Udayavani |

ಮಂಗಳೂರಿನ ಯುವ ಕಲಾವಿದೆ ಕು| ವಾಣಿಶ್ರೀ ಭರತನಾಟ್ಯ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ರೀತಿ ಅಭಿನಂದನೀಯ. ಈಕೆ ತನ್ನ 5ನೇ ವಯಸ್ಸಿನಲ್ಲೇ ಭರತನಾಟ್ಯ ಅಭ್ಯಾಸವನ್ನು ಪ್ರಾರಂಭಿಸಿ, 7ನೇ ವಯಸ್ಸಿನಿಂದಲೇ ನೃತ್ಯ ಕಾರ್ಯಕ್ರಮಗಳನ್ನು ನೀಡಲಾರಂಭಿಸಿ ವಿವಿಧ ಮಟ್ಟದ ಸ್ಪರ್ಧೆಗಳಲ್ಲಿ ಬಹುಮಾನಗಳನ್ನು ತನ್ನದಾಗಿಸಿಕೊಂಡಿದ್ದಾಳೆ. ಭರತನಾಟ್ಯದಲ್ಲಿ ಈಕೆಯ ಉತ್ಕರ್ಷವನ್ನು ಗಮನಿಸಿ ದ.ಕ. ಸಾಹಿತ್ಯ ಪರಿಷತ್ತು ರಾಜ್ಯೋತ್ಸವ ಸಾಧಕ ಪುರಸ್ಕಾರವನ್ನು ನೀಡಿ ಗೌರವಿಸಿದೆ. ಈ ಎಲ್ಲ ಸಾಧನೆಗೆ ಬೆನ್ನೆಲುಬಾಗಿ ನಿಂತವರು ಈಕೆಯ ಹೆತ್ತವರಾದ ವಿ. ಶಂಕರನಾರಾಯಣ ಭಟ್‌ ಮತ್ತು ಮಮತಾ ದಂಪತಿ. ಮಗಳ ಕಲಾಸಕ್ತಿಯನ್ನು ಗಮನಿಸಿ ನಗರದ ಪ್ರತಿಷ್ಠಿತ ನೃತ್ಯ ವಿದ್ಯಾಸಂಸ್ಥೆಯಾದ ಸನಾತನ ನಾಟ್ಯಾಲಯದ ವಿ| ಶಾರದಾ ಮಣಿಶೇಖರ್‌ ಅವರಲ್ಲಿ ನೃತ್ಯಾಭ್ಯಾಸಕ್ಕೆ ತೊಡಗಿಸಿದರು. ತದನಂತರ ಇನ್ನೋರ್ವ ಗುರು ವಿ| ಶ್ರೀಲತಾ ನಾಗರಾಜ್‌ ಅವರ ಸೂಕ್ಷ್ಮ ತರಬೇತಿಯೊಂದಿಗೆ ನೃತ್ಯ ಸಾಧನೆ ಮುನ್ನಡೆಸಿದ್ದಾರೆ. 

Advertisement

ಓದಿನಲ್ಲಿಯೂ ಆಸಕ್ತಿ ಹೊಂದಿರುವ ಈಕೆ ಸನಾತನ ಕಲೆಯನ್ನು ಬೆಳೆಸುವಲ್ಲಿ ಕೈಜೋಡಿಸುವ ಯುವ ಶಕ್ತಿ ಎಂಬುದು ನಿಸ್ಸಂದೇಹ.

Advertisement

Udayavani is now on Telegram. Click here to join our channel and stay updated with the latest news.

Next