Advertisement

ಜು.13 ರಿಂದ ಸ್ವರ್ಣವಲ್ಲೀ‌ ಶ್ರೀಗಳ 32 ನೇ ಚಾತುರ್ಮಾಸ್ಯ

08:03 PM Jul 02, 2022 | Team Udayavani |

ಶಿರಸಿ: ಸೋಂದಾ‌ ಸ್ವರ್ಣವಲ್ಲೀ‌ ಮಹಾ‌ಸಂಸ್ಥಾನದ‌ ಮಠಾಧೀಶ ಶ್ರೀಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿಗಳ 32 ನೇ ಚಾತುರ್ಮಾಸ್ಯ ವೃತ ಸಂಕಲ್ಪವನ್ನು ಆಷಾಢ ಪೂರ್ಣಿಮೆ ಜು.13 ರಿಂದ ಉತ್ತರ ಕನ್ನಡದ ಶಿರಸಿ ಸಮೀಪದ ಸ್ವರ್ಣವಲ್ಲೀ ಮಠದಲ್ಲಿ ಕೈಗೊಳ್ಳಲಿದ್ದಾರೆ.

Advertisement

ಅಂದು ಶ್ರೀಗಳು ವ್ಯಾಸ ಪೂಜೆ‌ ಸಲ್ಲಿಸಿ ವೃತ ಸಂಕಲ್ಪಿಸಿದ ಬಳಿಕ ಶಿಷ್ಯರು ಶ್ರೀಗಳಿಗೆ ಪಾದಪೂಜೆ‌ ನಡೆಸಲಿದ್ದಾರೆ. ಮಧ್ಯಾಹ್ನ ೩ಕ್ಕೆ ನಡೆಯುವ ಧರ್ಮಸಭೆಯಲ್ಲಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ ಪಾಲ್ಗೊಳ್ಳಲಿದ್ದು, ಇದೇ ವೇಳೆ ಸಹಕಾರಿ ರತ್ನ ಶಂಭುಲಿಂಗ ಹೆಗಡೆ ನಿಡಗೋಡ, ವೈದ್ಯ ಡಾ.ಕೃಷ್ಣಪ್ರಸಾದ ಉಡುಪಿ ಅವರನ್ನು ಗೌರವಿಸಲಾಗುತ್ತಿದೆ. ಶ್ರೀಗಳು ಸಾನ್ನಿಧ್ಯ ನೀಡಲಿದ್ದಾರೆ.

ಸೆ.೧೦ರ ತನಕ ನಡೆಯಲಿರುವ ಚಾತುರ್ಮಾಸ್ಯ ಅವಧಿಯಲ್ಲಿ ಮಹಾಭಾರತ ಪ್ರವಚನಗಳು, ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಶಿಷ್ಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲುವಂತೆ ಮಠದ‌ ಆಡಳಿತ ಮಂಡಳಿ ಅಧ್ಯಕ್ಷ ವಿ.ಎನ್.ಹೆಗಡೆ ಬೊಮ್ನಳ್ಳಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next