Advertisement
ಶ್ರೀಮಠದಲ್ಲಿ ವಿರಾಜಮಾನವಾದ ಶ್ರೀವೇದವ್ಯಾಸರ ಅಧಿಷ್ಠಾನಕ್ಕೆ ಶ್ರೀಗಳವರು ಮಹಾಪೂಜೆಯನ್ನು ನೆರವೇರಿಸಿದರು. ಶ್ರೀಗಳವರು ವ್ಯಾಸಪೂಜೆ ನೆರವೇರಿಸಿ ಚಾತುರ್ಮಾಸ್ಯ ವ್ರತ ಸಂಕಲ್ಪಿಸಿ ಶ್ರೀದೇವರ ವಿಶೇಷ ಪೂಜೆ ನಡೆಸಿದರು. ಸಮಸ್ತ ಶಿಷ್ಯ-ಭಕ್ತರ ಪರವಾಗಿ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ವಿ.ಎನ್.ಹೆಗಡೆ ಬೊಮ್ನಳ್ಳಿ ದಂಪತಿಗಳು ಶ್ರೀಗಳವರ ಪಾದಪೂಜೆ ನೆರವೇರಿಸಿದರು. ಬಳಿಕ ದೇವರಿಗೆ ಮಹಾಮಂಗಳಾರತಿ, ತೀರ್ಥಪ್ರಸಾದ ವಿತರಣೆ ನಡೆಯಿತು.
ಚಾತುರ್ಮಾಸ್ಯವು ಜುಲೈ 13 ರಿಂದ ಸೆಪ್ಟೆಂಬರ್ 10 ವರೆಗೆ ನಡೆಯಲಿದ್ದು ಆ ದಿನಗಳಲ್ಲಿ ಪ್ರತಿದಿನ ಶ್ರೀ ಶ್ರೀಗಳವರಿಂದ ಪ್ರವಚನ ನಡೆಯಲಿದೆ. ಪ್ರತಿ ದಿನ ಸಾಯಂಕಾಲ ಮಹಾಭಾರತ ಪುರಾಣ ಪ್ರವಚನ ಸಂಯೋಜಿಸಲಾಗಿದೆ. ದಿನವೂ ಶಿಷ್ಯ-ಭಕ್ತರಿಂದ ಶ್ರೀ ಶ್ರೀಗಳವರ ಭಿಕ್ಷೆ-ಪಾದಪೂಜೆ, ಮಾತೆಯರಿಂದ ಕುಂಕುಮಾರ್ಚನೆ, ಗಾಯತ್ರಿಜಪ ಮುಂತಾದ ದಾರ್ಮಿಕ ಅನುಷ್ಠಾನಗಳು ಜರುಗಲಿವೆ. ಸ್ವರ್ಣವಲ್ಲೀ ಶ್ರಿಗಳ ಜೊತೆ ತುರವೇಕೆರೆ ಶ್ರೀಪ್ರಣವಾನಂದತೀರ್ಥರೂ ಚಾತುರ್ಮಾಸ್ಯ ವೃತ ಸಂಕಲ್ಪಿಸಿದ್ದಾರೆ.