Advertisement

ಜ್ಞಾನಾಧಾರಿತ ಆರ್ಥಿಕವ್ಯವಸ್ಥೆ ಅಗತ್ಯ: ಉಪರಾಷ್ಟ್ರಪತಿ

11:48 AM Sep 28, 2017 | Team Udayavani |

ಬೆಂಗಳೂರು: “ಭಾರತದ ಶೇ.65ರಷ್ಟು ಯುವ ಸಂಪತ್ತಿನ ಸದ್ಬಳಕೆ ಮಾಡಬೇಕಾಗಿದೆ. ಹೊಸ ಆವಿಷ್ಕಾರಗಳನ್ನು ಕೈಗೊಳ್ಳ ಬೇಕಾಗಿದೆ. ಈ ಮೂಲಕ ಜ್ಞಾನಾಧಾರಿತ ಆರ್ಥಿಕ ವ್ಯವಸ್ಥೆ ನಿರ್ಮಿಸುವ ಅಗತ್ಯ ವಿದೆ’ ಎಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅಭಿಪ್ರಾಯಪಟ್ಟರು.

Advertisement

ಭಾರತೀಯ ವಿಜ್ಞಾನ ಸಂಸ್ಥೆಯ ನ್ಯಾನೋ ಸೈನ್ಸ್‌, ಎಂಜಿನಿಯರಿಂಗ್‌, ಸೂಪರ್‌ ಕಂಪ್ಯೂಟಿಂಗ್‌ ಎಜುಕೇಷನ್‌
ಮತ್ತು ಸಂಶೋಧನಾ ಕೇಂದ್ರಕ್ಕೆ ಬುಧವಾರ ಭೇಟಿ ನೀಡಿ, ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಅವರು, “ಜ್ಞಾನಾಧಾರಿತ ಆರ್ಥಿಕತೆ ನಿರ್ಮಾಣದಲ್ಲಿ ಸಂಶೋಧನೆ ಹಾಗೂ ಆವಿಷ್ಕಾರ ವಿಶೇಷ ಪಾತ್ರ ವಹಿಸಲಿದೆ. ದೇಶದ ಒಟ್ಟು ಜನಸಂಖ್ಯೆಯ ಶೇ.65ರಷ್ಟು ಜನ 35 ವರ್ಷದ ಒಳಗಿನವರು. ಇದರ ಸದುಪಯೋಗ ಪಡೆಯಬೇಕು’ ಎಂದರು.

ತಂತ್ರಜ್ಞಾನ ಪರಿಹಾರ: ದೇಶದಲ್ಲಿ ಒದಗುವ ವೈಜ್ಞಾನಿಕ ಸಮಸ್ಯೆಗಳಿಗೆ ತಂತ್ರ ಜ್ಞಾನದ ಮೂಲಕ ಪರಿಹಾರ ಕಂಡು
ಹಿಡಿಯಲು ಯುವ ಮತ್ತು ಅನುಭವಿ ವಿಜ್ಞಾನಿಗಳು ಮುಂದಾಗಬೇಕು. ವಿಜ್ಞಾನ ಸಂಸ್ಥೆಗಳಲ್ಲಿ ಸಂಶೋಧನೆಗೆ ಬೇಕಾದ ವಾತಾವರಣ ನಿರ್ಮಿಸಿ, ವಿದ್ಯಾರ್ಥಿಗಳ ಪ್ರತಿಭೆಯ ಅನಾವರಣಕ್ಕೆ ನಿರ್ದೇಶ ಕರು, ವಿವಿಧ ತಂಡದ ಮುಖ್ಯಸ್ಥರು,
ಪ್ರಾಜೆಕ್ಟ್ ಲೀಡರ್‌ಗಳು ಶ್ರಮವಹಿಸಬೇಕು ಎಂದರು.

ದೇಶವು ವಿಜ್ಞಾನ, ತಂತ್ರಜ್ಞಾನ ಹಾಗೂ ಸಾಮಾಜಿಕ ಆರ್ಥಿಕ ಅಭಿವೃದ್ಧಿಯಲ್ಲೂ ಮುಂದಿದೆ ಎಂಬುದು ಜಾಗತಿಕ ಮಟ್ಟ
ದಲ್ಲಿ ಸಾಬೀತಾಗಿದೆ. ಗುಣಮಟ್ಟದ ವೈಜ್ಞಾನಿಕ ಸಂಶೋಧನೆಯಲ್ಲಿ ಭಾರತ ಎರಡನೇ ಸ್ಥಾನದಲ್ಲಿದೆ ಎಂಬುದನ್ನು ಇತ್ತೀಚಿನ ವರದಿ ಹೇಳಿದೆ ಎಂದರು.

ಸ್ವಿಟ್ಜರ್‌ಲ್ಯಾಂಡ್‌, ಸ್ವೀಡನ್‌, ನೆದರ್‌ ಲ್ಯಾಂಡ್‌, ಯುಎಸ್‌ಎ, ಯುಕೆ ಮುಂತಾದ ದೇಶಗಳು ಜಾಗತಿಕ ಮಟ್ಟದಲ್ಲಿ
ಇನ್ನೋವೇಟಿವ್‌ ಎನ್ನಿಸಿಕೊಂಡಿವೆ. ಭಾರತ, ಕೀನ್ಯಾ ಇನ್ನಿತರ ದೇಶಗಳು ಅಭಿವೃದ್ಧಿಯಲ್ಲಿ ಸಾಧನೆ ತೋರುತ್ತಿವೆ ಎಂದು ಹೇಳಿದರು.

Advertisement

ವಿಜ್ಞಾನಿಗಳಿಂದ ಶ್ರೀಮಂತಿಕೆ: ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಏಕ ಮನಸ್ಸಿನಿಂದ ಸೇವೆ ಸಲ್ಲಿಸಿದಾಗ ಜ್ಞಾನದ ವ್ಯಾಪ್ತಿ ವಿಸ್ತರಿಸಿ ಕೊಳ್ಳಬಹುದು. ಶಿಕ್ಷಕರಿಗೆ ಸಕಾರಾತ್ಮಕ ಚಿಂತನೆಯ ಜತೆಗೆ ಹೊಸ ಆಲೋಚನೆಗಳು ಇರಬೇಕು. ಜಾಗತಿಕ ವಿದ್ಯಮಾನಗಳ ಬಗ್ಗೆ ಅರಿವಿರಬೇಕು. ವಿಜ್ಞಾನಿಗಳ ಆಲೋಚನಾ ಶಕ್ತಿ ಹಾಗೂ ಕಾರ್ಯವಿಧಾನ, ಅನುಷ್ಠಾನದ ಕ್ರಮದಿಂದಾಗಿಯೇ ವಿಶ್ವ ಇಷ್ಟು ಶ್ರೀಮಂತವಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next