Advertisement

KMC : ಎಪ್ರಿಲ್ 27ರಿಂದ ಆಸ್ಪತ್ರೆಯ ಎಲ್ಲ OPD ವಿಭಾಗಗಳು ಸೇವೆಗೆ ಮುಕ್ತ

04:11 PM Apr 25, 2020 | sudhir |

ಮಣಿಪಾಲ: ಎಪ್ರಿಲ್ 27 ರಿಂದ ಕೆಎಂಸಿ ಆಸ್ಪತ್ರೆಯ ಎಲ್ಲ ಹೊರರೋಗಿ ವಿಭಾಗಗಳು ಎಂದಿನಂತೆ ಸೇವೆಗೆ ಮುಕ್ತವಾಗಲಿದೆ ಎಂದು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ. ಅವಿನಾಶ ಶೆಟ್ಟಿ ಅವರು ತಿಳಿಸಿದ್ದಾರೆ.

Advertisement

ಬೆಳಿಗ್ಗೆ 8.30ರಿಂದ ಅಪರಾಹ್ನ 1.00ರವರೆಗೆ ಹೊರರೋಗಿ ವಿಭಾಗವು ಕಾರ್ಯಾಚರಿಸಲಿದ್ದು ಈ ಸೇವೆಯನ್ನು ಪಡೆದುಕೊಳ್ಳಲು ಬರುವ ಪ್ರತಿಯೊಂದು ರೋಗಿಯು ಆಸ್ಪತ್ರೆಯ ಹೊರಾಂಗಣದಲ್ಲಿ ಹಾಕಿರುವ ತಾತ್ಕಾಲಿಕ ಜ್ವರದ ಚಿಕಿತ್ಸಾಲಯಕ್ಕೆ ಭೇಟಿ ನೀಡಬೇಕು, ನಂತರ ಅಲ್ಲಿಂದ ಸಂಬಂಧ ಪಟ್ಟ ವಿಭಾಗಗಳಿಗೆ ಕಳುಹಿಸಿಕೊಡಲಾಗುವುದು ಎಂದು ತಿಳಿಸಿದ್ದಾರೆ.

ರೋಗಿ ಜೊತೆ ಒಬ್ಬರಿಗೆ ಮಾತ್ರ ಅವಕಾಶ :
ಎಲ್ಲಾ ರೋಗಿಗಳು ಮತ್ತು ಆಸ್ಪತ್ರೆಗೆ ಭೇಟಿ ನೀಡುವ ಪ್ರತಿಯೊಬ್ಬರು ಖಡ್ಡಾಯವಾಗಿ ಮುಖಗವಸು (ಮಾಸ್ಕ್) ಧರಿಸಬೇಕು ಮತ್ತು ಪ್ರತೀ ರೋಗಿಗಳೊಂದಿಗೆ ಒಬ್ಬ ಸಹಾಯಕರಿಗೆ ಮಾತ್ರ ಅವಕಾಶ ಕಲ್ಪಿಸಲಾಗುವುದು.

ಟೆಲಿಮೆಡಿಸಿನ್ ಸೇವೆ ಲಭ್ಯ :
ಆದಾಗ್ಯೂ ಟೆಲಿಮೆಡಿಸಿನ್ ಮೂಲಕ ವೈದ್ಯರ ಸಮಾಲೋಚನಾ ಸೇವೆಯು ಬೆಳಿಗ್ಗೆ 9ರಿಂದ ಮಧ್ಯಾಹ್ನ 4ರವರೆಗೆ ಲಭ್ಯವಿದೆ. ಸಾರ್ವಜನಿಕರು 080-47192235 ಗೆ ಕರೆಮಾಡಿ ತಮ್ಮ ಅಗತ್ಯ ಸೇವೆ ಪಡೆಯಬಹುದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next