Advertisement

Padubidri: ಮಟ್ಕಾ ದಾಳಿ, ಈರ್ವರ ಸೆರೆ, ಪ್ರಕರಣ ದಾಖಲು

08:54 PM Dec 31, 2024 | Team Udayavani |

ಪಡುಬಿದ್ರಿ: ಮಾರ್ಕೆಟ್‌ ಪ್ರದೇಶದ ತರಕಾರಿ ಅಂಗಡಿಯೊಂದರ ಬಳಿ ಮಟ್ಕಾ ಚೀಟಿ ಬರೆಯುತ್ತಿದ್ದ ಆರೋಪಿಗಳಾದ ಚಂದ್ರ ಅವರಾಲು ಮಟ್ಟು ಹಾಗೂ ಮುರಳೀಧರ ಸಾಲ್ಯಾನ್‌ ಪಡಹಿತ್ಲು ಎಂಬವರನ್ನು ಪಡುಬಿದ್ರಿ ಪಿಎಸ್‌ಐ ಪ್ರಸನ್ನ ಹಾಗೂ ಸಿಬಂದಿ ಮಂಗಳವಾರ ಬಂಧಿಸಿದ್ದಾರೆ ಅವರಿಂದ 1,,835 ರೂ. ನಗದು, ಮಟ್ಕಾ ಚೀಟಿಗಳು, ಟೇಬಲ್‌ ಹಾಗೂ ಎರಡು ಕುರ್ಚಿಗಳ ಸಹಿತ 2 ಮೊಬೈಲ್‌ ಮತ್ತಿತರ ಪರಿಕರಗಳನ್ನು ವಶಪಡಿಕೊಳ್ಳಲಾಗಿದೆ.

Advertisement

ಇವರಿಂದ ಹಣ ಸಂಗ್ರಹಿಸುತ್ತಿದ್ದ ನಿರ್ವಾಹಕ ಏಜೆಂಟ್‌ ಎರ್ಮಾಳಿನ ಮನೋಜ್‌ ಕೋಟ್ಯಾನ್‌ನನ್ನು ಪ್ರಕರಣದಲ್ಲಿ ಆರೋಪಿಯಾಗಿಸಿ ಮೂವರ ವಿರುದ್ಧ ಪಡುಬಿದ್ರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಂಧಿತ ಆರೊಪಿಗಳಿಬ್ಬರನ್ನೂ ಉಡುಪಿಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next