Advertisement
ದಕ್ಷಿಣ ಆಫ್ರಿಕಾದಲ್ಲಿ ಎರಡು ಟೆಸ್ಟ್ ಪಂದ್ಯದಲ್ಲಿ ಬ್ಯಾಟಿಂಗ್ ಮಾತ್ರವಲ್ಲದೆ ವಿಕೆಟ್ ಕೀಪಿಂಗ್ ನಲ್ಲಿಯೂ ಕೆಎಲ್ ರಾಹುಲ್ ಅವರು ತಮ್ಮ ಕೌಶಲದಿಂದ ಮಿಂಚಿದ್ದರು. ಆದರೆ ಇಂಗ್ಲೆಂಡ್ ವಿರುದ್ಧ ಭಾರತದಲ್ಲಿ ನಡೆಯಲಿರುವ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ರಾಹುಲ್ ವಿಕೆಟ್ ಕೀಪಿಂಗ್ ನಡೆಸುವುದಿಲ್ಲ. ಅವರು ಸ್ಪೆಷಲಿಸ್ಟ್ ಬ್ಯಾಟರ್ ಆಗಿ ತಂಡದಲ್ಲಿ ಆಡಲಿದ್ದಾರೆ ಎನ್ನಲಾಗಿದೆ.
Related Articles
Advertisement
ಟೈಮ್ಸ್ ಆಫ್ ಇಂಡಿಯಾದ ವರದಿಯ ಪ್ರಕಾರ, ಸ್ಪಿನ್ ಸ್ನೇಹಿ ತವರು ಪಿಚ್ ಗಳಲ್ಲಿ ವಿಕೆಟ್ ಕೀಪರ್ ಪಾತ್ರಕ್ಕೆ ರಾಹುಲ್ ಸೂಕ್ತ ಎಂದು ಬಿಸಿಸಿಐ ಭಾವಿಸುವುದಿಲ್ಲ, ಆದ್ದರಿಂದ ಇಬ್ಬರು ತಜ್ಞರನ್ನು ಆಯ್ಕೆ ಮಾಡಲಾಗಿದೆ.
“ರಾಹುಲ್ ಇನ್ಮುಂದೆ ಸ್ಪೆಷಲಿಸ್ಟ್ ಬ್ಯಾಟರ್ ಆಗಿ ಆಡುತ್ತಾರೆ. ಸಾಗರೋತ್ತರ ಟೆಸ್ಟ್ ಗಳಲ್ಲಿ ನೀವು ವೇಗಿಗಳಿಗೆ ಕೀಪಿಂಗ್ ಮಾಡಬಲ್ಲರು, ಸ್ಪಿನ್ನರ್ ಗಳು ಹೆಚ್ಚಾಗಿ ಕಾರ್ಯನಿರ್ವಹಿಸುವ ಭಾರತದಲ್ಲಿ ವಿಕೆಟ್ ಕೀಪಿಂಗ್ ಸುಲಭವಲ್ಲ. ಸ್ಪಿನ್ ಸ್ನೇಹಿ ತವರು ವಿಕೆಟ್ ಗಳಲ್ಲಿ ಚೆಂಡು ಪುಟಿಯಬಹುದು ಅಥವಾ ತೀವ್ರವಾಗಿ ತಿರುಗಬಹುದು. ಕೀಪರ್ ಆಗಿ ಮೇಲಕ್ಕೆ ಮತ್ತು ಕೆಳಕ್ಕೆ ಚಲಿಸುತ್ತಿರಬೇಕು. ಹೀಗಾಗಿ ಸ್ಪೆಷಲಿಸ್ಟ್ ಕೀಪರ್ ಅಗತ್ಯವಿದೆ” ಎಂದು ಬಿಸಿಸಿಐ ಮೂಲವೊಂದು ಹೇಳಿದೆ.