Advertisement

ರಾಹುಲ್‌ ವರ್ಸಸ್‌ ಮಾರ್ಗನ್‌

10:07 PM Sep 30, 2021 | Team Udayavani |

ದುಬಾೖ: ಸದ್ಯ ಅಂಕಪಟ್ಟಿಯಲ್ಲಿ 4ನೇ ಸ್ಥಾನದಲ್ಲಿರುವ ಕೆಕೆಆರ್‌ ಮತ್ತು ಆರಕ್ಕೆ ಕುಸಿದಿರುವ ಪಂಜಾಬ್‌ ಕಿಂಗ್ಸ್‌ ಶುಕ್ರವಾರ ರಾತ್ರಿ ಪರಸ್ಪರ ಎದುರಾಗಲಿವೆ. 4ನೇ ಸ್ಥಾನವನ್ನು ಮತ್ತಷ್ಟು ಭದ್ರಪಡಿಸಿ ಪ್ಲೇ ಆಫ್‌ಗೆ ಏರುವ ಅವಕಾಶ ಹೊಂದಿ ರುವ ಕೆಕೆಆರ್‌ಗೆ ಈ ಪಂದ್ಯ ಅತ್ಯಂತ ಮಹತ್ವದಾಗಿದೆ.

Advertisement

ಅಹ್ಮದಾಬಾದ್‌ನಲ್ಲಿ ನಡೆದ ಸಣ್ಣ ಮೊತ್ತದ ಮೊದಲ ಸುತ್ತಿನ ಪಂದ್ಯದಲ್ಲಿ ಕೆಕೆಆರ್‌ 5 ವಿಕೆಟ್‌ಗಳಿಂದ ಪಂಜಾಬ್‌ಗ ಸೋಲುಣಿಸಿತ್ತು. ಪಂಜಾಬ್‌ ಕಿಂಗ್ಸ್‌ 9 ವಿಕೆಟಿಗೆ ಕೇವಲ 123 ರನ್‌ ಗಳಿಸಿದರೆ, ಕೆಕೆಆರ್‌ 16.4 ಓವರ್‌ಗಳಲ್ಲಿ 5 ವಿಕೆಟಿಗೆ 126 ರನ್‌ ಮಾಡಿ ಗೆಲುವು ಕಂಡಿತ್ತು.

ಈ ಸೋಲಿಗೆ ಸೇಡು ತೀರಿಸಿಕೊಂಡರೆ ಪ್ಲೇ ಆಫ್‌ ರೇಸ್‌ನಲ್ಲಿ ಪಂಜಾಬ್‌ ಕೂಡ ಕಾಣಿಸಿಕೊಳ್ಳಲಿದೆ. ಎಡವಿದರೆ ರಾಹುಲ್‌ ಪಡೆಯ ಹಾದಿ ದುರ್ಗಮಗೊಳ್ಳಲಿದೆ.

Advertisement

Udayavani is now on Telegram. Click here to join our channel and stay updated with the latest news.

Next