ಅನುಮಾನವೇ ಇಲ್ಲ, ಅಫ್ಘಾನಿ ಸ್ಥಾನ ಈ ಕೂಟದ ಅತ್ಯಂತ ಅಪಾಯಕಾರಿ ಪಡೆ. ಅದು ವಿಶ್ವಕಪ್‌ಗೆ ನೇರ ಅರ್ಹ ತೆಯೊಂದಿಗೆ ಬಂದ ತಂಡ. ಹೀಗಾಗಿ ಇದಕ್ಕೆ ತಕ್ಕ ಪ್ರದರ್ಶನ ನೀಡಲೇಬೇಕಿತ್ತು. ಇಂಥ ದೊಂದು ಸುವರ್ಣಾವಕಾಶ ವಿಶ್ವ ಚಾಂಪಿಯನ್ ಇಂಗ್ಲೆಂಡ್ ವಿರುದ್ಧವೇ ಪ್ರಾಪ್ತವಾದ್ದರಿಂದ ಅಫ್ಘಾನ್ ತಂಡದ ಮೌಲ್ಯ ದೊಡ್ಡ ಮಟ್ಟದಲ್ಲೇ ವೃದ್ಧಿಯಾಗಿದೆ. ಹೀಗಾಗಿ ಎಲ್ಲ ಎದು ರಾಳಿಗಳು ಹಶ್ಮತುಲ್ಲ ಶಾಹಿದಿ ಪಡೆ ವಿರುದ್ಧ ತೀವ್ರ ಎಚ್ಚರಿಕೆಯಿಂದ ಇರ ಬೇಕಾದುದು ಅತ್ಯಗತ್ಯ. ಇದು ನ್ಯೂಜಿ ಲ್ಯಾಂಡ್‌ಗೂ ಅನ್ವಯಿಸುವ ಮಾತು.
Advertisement
ಮತ್ತೆ ಲ್ಯಾಥಂ ನಾಯಕತ್ವನ್ಯೂಜಿಲ್ಯಾಂಡ್ ಪುನಃ ನಾಯಕ ಕೇನ್ ವಿಲಿಯಮ್ಸನ್ ಗೈರಲ್ಲಿ ಆಡಲಿ ಳಿಯಬೇಕಿದೆ. ಮೊದಲೆರಡು ಪಂದ್ಯ ಗಳಿಂದ ಹೊರಗುಳಿದಿದ್ದ ವಿಲಿಯ ಮ್ಸನ್, ಬಾಂಗ್ಲಾದೇಶ ವಿರುದ್ಧದ ಪಂದ್ಯಕ್ಕೆ ಮರಳಿದರೂ ಕೈಗೆ ಏಟು ಅನು ಭವಿಸಿ ಮತ್ತೆ ತಂಡದಿಂದ ಬೇರ್ಪ ಟ್ಟಿದ್ದಾರೆ. ಟಾಮ್ ಲ್ಯಾಥಂ ಮರಳಿ ಕಿವೀಸ್ ಚುಕ್ಕಾಣಿ ಹಿಡಿಯಲಿದ್ದಾರೆ. ಇವರ ಸಾರಥ್ಯದಲ್ಲೇ ಇಂಗ್ಲೆಂಡ್ ಮತ್ತು ನೆದರ್ಲೆಂಡ್ಸ್ ವಿರುದ್ಧ ನ್ಯೂಜಿಲ್ಯಾಂಡ್ ಗೆದ್ದು ಬಂದಿದ್ದನ್ನು ಮರೆಯುವಂತಿಲ್ಲ. ಆದರೆ “ಇಂಗ್ಲೆಂಡ್ ಬೀಟರ್’ ಎಂಬ ಹಣೆಪಟ್ಟಿ ಇರುವುದರಿಂದ ಅಫ್ಘಾನಿಸ್ಥಾನವನ್ನು ಹಗುರವಾಗಿ ಪರಿಗಣಿಸುವಂತಿಲ್ಲ. ಅದೀಗ ಮೊದಲಿನ “ಸಾಮಾನ್ಯ ತಂಡ’ವಲ್ಲ.
ಬಾಂಗ್ಲಾದೇಶ ಮತ್ತು ಭಾರತದ ವಿರುದ್ಧ ಸೋಲನುಭವಿಸಿ ಬಂದಿದ್ದ ಅಫ್ಘಾನಿಸ್ಥಾನ, ವಿಶ್ವ ಚಾಂಪಿಯನ್ ಇಂಗ್ಲೆಂಡ್ ವಿರುದ್ಧ ನಿರೀಕ್ಷೆಗೂ ಮೀರಿದ ಪ್ರದರ್ಶನ ನೀಡಿತು. ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗಗಳೆರಡರಲ್ಲೂ ಮೇಲುಗೈ ಸಾಧಿಸಿ ಕ್ರಿಕೆಟ್ ಜಗತ್ತಿನಲ್ಲೊಂದು ಸಂಚಲನ ಮೂಡಿಸಿತು. ಇದರಿಂದ ತಂಡದ ಸಾಮರ್ಥ್ಯ ಪೂರ್ತಿಯಾಗಿ ಅನಾವರಣಗೊಂಡಿದೆ. ಇದೇ ಲಯದಲ್ಲಿ ಮುಂದುವರಿದು ವಿಶ್ವದ ಕೆಲವಾದರೂ ಬಲಿಷ್ಠ ತಂಡಗಳನ್ನು ತಲೆಕೆಳಗಾಗಿಸುವುದು ಶಾಹಿದಿ ಪಡೆಯ ಯೋಜನೆ. ಅದು ವಿಶ್ವಕಪ್‌ನಲ್ಲಿ ಕಳೆದುಕೊಳ್ಳುವಂಥದ್ದೇನಿಲ್ಲ. ಇಂಗ್ಲೆಂಡನ್ನು ಮಣಿಸುವ ಮೂಲಕ ಅದು ಕೆಲವು ಪಂದ್ಯಗಳಿಗಾಗುವಷ್ಟು ಸ್ಫೂರ್ತಿ ಪಡೆದಿದೆ.
Related Articles
Advertisement
ಅಫ್ಘಾನ್ ಬೌಲಿಂಗ್ ವಿಭಾಗ ಘಾತಕವಾಗಿದೆ. ಸ್ಪಿನ್ನರ್ ತ್ರಿವಳಿಗಳಾದ ಮುಜೀಬ್ ಉರ್ ರೆಹಮಾನ್, ರಶೀದ್ ಖಾನ್, ಮೊಹಮ್ಮದ್ ನಬಿ ಬೌಲಿಂಗ್ ಬೆನ್ನೆಲುಬಾಗಿದ್ದಾರೆ. ಅಕ ಸ್ಮಾತ್ ಕಿವೀಸ್ ಬ್ಯಾಟರ್ ಸ್ಪಿನ್ನರ್‌ಗಳನ್ನು ನಿಭಾಯಿಸುವಲ್ಲಿ ಎಡವಿದರೋ, ಆಗ ಗಂಡಾಂತರ ಕಾದಿದೆ ಎಂದೇ ಅರ್ಥ! ಇಂಗ್ಲೆಂಡ್ ಕೂಡ ಇವರ ಸ್ಪಿನ್ ದಾಳಿಯನ್ನು ಎದುರಿಸಲಾಗದೆ ಸೋತದ್ದನ್ನು ಮರೆಯುವಂತಿಲ್ಲ. ಈ ಮೂವರು ಸೇರಿ 8 ವಿಕೆಟ್ ಉಡಾಯಿಸಿದ್ದರು.
ಸಶಕ್ತ ಕಿವೀಸ್ ಪಡೆರನ್ನರ್ ಅಪ್ ನ್ಯೂಜಿಲ್ಯಾಂಡ್ ಕೂಡ ಉದ್ಘಾಟನ ಪಂದ್ಯದಲ್ಲಿ ಚಾಂಪಿಯನ್ ತಂಡವನ್ನು ಸದೆಬಡಿದು ಬಂದ ತಂಡ. ಬಳಿಕ ನೆದರ್ಲೆಂಡ್ಸ್ ಮತ್ತು ಬಾಂಗ್ಲಾದೇಶಕ್ಕೂ ನೀರು ಕುಡಿಸಿದೆ. ವಿಲಿಯಮ್ಸನ್ ಗೈರಲ್ಲೂ ಅದು ಸಮಸ್ಯೆಯನ್ನೇನೂ ಅನುಭವಿಸಿಲ್ಲ. ಡೇವನ್ ಕಾನ್ವೇ, ರಚಿನ್ ರವೀಂದ್ರ, ಡ್ಯಾರಿಲ್ ಮಿಚೆಲ್, ಗ್ಲೆನ್ ಫಿಲಿಪ್ಸ್ ಪ್ರಚಂಡ ಫಾರ್ಮ್ನಲ್ಲಿದ್ದಾರೆ. ದೊಡ್ಡ ಮೊತ್ತ ಪೇರಿಸುವುದಕ್ಕೂ, ದೊಡ್ಡ ಮೊತ್ತ ಬೆನ್ನಟ್ಟುವುದಕ್ಕೂ ಸೈ ಎನಿಸಿದ್ದಾರೆ. ಹಾಗೆಯೇ ಬೌಲಿಂಗ್ ವಿಭಾಗ. ಅನುಭವಿ ಟಿಮ್ ಸೌಥಿ ಈ ಪಂದ್ಯದಲ್ಲಿ ಆಡುವ ಸಾಧ್ಯತೆ ಇದೆ. ಉಳಿದಂತೆ ಬೌಲ್ಟ್, ಹೆನ್ರಿ, ಫರ್ಗ್ಯುಸನ್ ಹಾಗೂ ಸಾಲು ಸಾಲು ಆಲ್‌ರೌಂಡರ್‌ಗಳೆಲ್ಲ ನ್ಯೂಜಿಲ್ಯಾಂಡ್ ಬೌಲಿಂಗ್ ಶಕ್ತಿಯಾಗಿದ್ದಾರೆ. ಚೆನ್ನೈ ಟ್ರ್ಯಾಕ್ ಬೌಲರ್‌ಗಳಿಗೆ ಹೆಚ್ಚಿನ ನೆರವು ನೀಡುತ್ತಿದೆ. ನ್ಯೂಜಿಲ್ಯಾಂಡ್ ಇಲ್ಲಿ ಈಗಾಗಲೇ ಬಾಂಗ್ಲಾವನ್ನು ಎದುರಿ ಸಿದ್ದು, 8 ವಿಕೆಟ್‌ಗಳಿಂದ ಗೆದ್ದಿದೆ.