Advertisement

Kittur Chennamma; 200 ನೇ ಕಿತ್ತೂರು ವಿಜಯೋತ್ಸವಕ್ಕೆ  40 ಕೋಟಿ ರೂ.ಅನುದಾನ 

08:53 PM Aug 19, 2024 | Team Udayavani |

ಚನ್ನಮ್ಮನ ಕಿತ್ತೂರು: 2024 ನೇ ಸಾಲಿನ ಚನ್ನಮ್ಮನ ಕಿತ್ತೂರು ವಿಜಯೋತ್ಸವವನ್ನು ಸಂಭ್ರಮದಿಂದ ಅದ್ಧೂರಿಯಾಗಿ ಆಚರಿಸುವ ನಿಟ್ಟಿನಲ್ಲಿ ಸೋಮವಾರ(ಆ19) ಬೆಂಗಳೂರಿನ ವಿಕಾಸ ಸೌಧದಲ್ಲಿ ಕಂದಾಯ ಸಚಿವ ಹಾಗೂ ಕಿತ್ತೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ  ಕೃಷ್ಣ ಬೈರೇಗೌಡ ಅವರ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ಜರುಗಿತು.

Advertisement

200ನೇ ಕಿತ್ತೂರು ವಿಜಯೋತ್ಸವದ ಉತ್ಸವಕ್ಕೆ ಚನ್ನಮ್ಮನ ಕಿತ್ತೂರು ಕೋಟೆ ಆವರಣದಲ್ಲಿ ಥೀಮ್  ಪಾರ್ಕ್ ನಿರ್ಮಾಣ ಮಾಡಲು  35 ಕೋಟಿ ರೂ. ಹಾಗೂ ಉತ್ಸವಕ್ಕೆ ರೂ 5 ಕೋಟಿ ಸೇರಿದಂತೆ ಒಟ್ಟು  40 ಕೋಟಿ ರೂ. ಕಾಮಗಾರಿಗೆ ಅನುಮೋದನೆ ನೀಡಿ ಅನುದಾನವನ್ನು ಸಚಿವ  ಕೃಷ್ಣ ಬೈರೇಗೌಡ  ಬಿಡುಗಡೆಗೊಳಿಸಿದರು.

ಗ್ಯಾರಂಟಿ ಅನುಷ್ಠಾನದ ಮಧ್ಯೆ ಇತರೆ ಕಾಮಗಾರಿಗಳಿಗೆ ಸರ್ಕಾರ ಅನುದಾನ ಒದಗಿಸುತ್ತಿಲ್ಲ ಎಂಬ ಅಪವಾದದ ಮಧ್ಯೆಯೂ ಶಾಸಕ ಬಾಬಾಸಾಹೇಬ ಪಾಟೀಲ ಅವಿರತ ಪ್ರಯತ್ನದಿಂದ  200ನೇ ಕಿತ್ತೂರು ವಿಜಯೋತ್ಸವಕ್ಕೆ ವಿಶೇಷ ಕಾಳಜಿ ತೋರಿ ಅನುದಾನ ಪಡೆಯುವಲ್ಲಿ ಸಫಲರಾಗಿದ್ದಾರೆ.

ದೇಶದಲ್ಲಿ ಪ್ರಥಮ ಸ್ವಾತಂತ್ರದ ಕಿಚ್ಚು ಹತ್ತಿಸಿದ ಕೀರ್ತಿ ಕಿತ್ತೂರಿನ ರಾಣಿ ಚನ್ನಮ್ಮನಿಗೆ ಸಲ್ಲುತ್ತದೆ. ಈ ಬಾರಿಯ ಉತ್ಸವ 200 ನೇ ವರ್ಷದ ವಿಜಯೋತ್ಸವ ರಾಷ್ಟ್ರಮಟ್ಟದ ಉತ್ಸವವಾಗಬೇಕು, ದೇಶದಾತ್ಯಂತ ಜನರು ಚನ್ನಮ್ಮನ ಕಿತ್ತೂರು ನಾಡಿನ ಕಡೆಗೆ ಪ್ರವಾಸಕ್ಕೆ ಆಗಮಿಸುವಂತೆ ಪ್ರವಾಸಿ ಹಬ್ಬವಾಗಬೇಕು ಎನ್ನುವುದು ಶಾಸಕ ಬಾಬಾಸಾಹೇಬ್ ಪಾಟೀಲ ಅವರ ಒತ್ತಾಯವಾಗಿತ್ತು.

ಶಾಸಕರ ವಿಶೇಷ ಪ್ರಯತ್ನಕ್ಕೆ ಸಾರ್ವಜನಿಕರು, ಮಠಾಧೀಶರು, ಸಂಘ ಸಂಸ್ಥೆಗಳ ಪ್ರಮುಖರು ಸೇರಿದಂತೆ ನಾಡಿನ ಜನತೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

Advertisement

ರಾಜಗುರು ಸಂಸ್ಥಾನ ಕಲ್ಮಠದ ಶ್ರೀ ಮಡಿವಾಳ ರಾಜಯೋಗೀಂದ್ರ ಮಹಾಸ್ವಾಮಿಗಳು ಪ್ರತಿಕ್ರಿಯೆ ನೀಡಿ  “ರಾಜ್ಯ ಕಂಡ ಅತ್ಯಂತ ಕ್ರಿಯಾಶೀಲ ಸಚಿವರಾದ ಸತೀಶ ಜಾರಕಿಹೊಳಿ ಹಾಗೂ ತೇಜಸ್ವಿ ಶಾಸಕರಾದ ಬಾಬಾಸಾಹೇಬ ಪಾಟೀಲ ಅವರ ಸತತ ಪ್ರಯತ್ನದಿಂದ  200ನೇ ವರ್ಷದ ಕಿತ್ತೂರು ವಿಜಯೋತ್ಸವಕ್ಕೆ ರೂ 5 ಕೋಟಿ ಹಾಗೂ ಥೀಮ್ ಪಾರ್ಕ ನಿರ್ಮಾಣ ಮಾಡಲು ರೂ 35 ಕೋಟಿ ಹಣ ಬಿಡುಗಡೆಗೊಳಿಸದ್ದಕ್ಕೆ ಅಭಿನಂದನೆಗಳು. ಈ ಹಿಂದೆ ಕಿತ್ತೂರು ಉತ್ಸವದ ಪೂರ್ವಭಾವಿ ಸಭೆಯಲ್ಲಿ ಹೇಳಿದಂತೆ ನುಡಿದಂತೆ ನಡೆಯುವಲ್ಲಿ ಸಚಿವರು ಹಾಗೂ ಶಾಸಕರು ಯಶಸ್ವಿಯಾಗಿದ್ದಾರೆ. ಕಿತ್ತೂರು ಕ್ಷೇತ್ರದ ಶಾಸಕರ ಕ್ರಿಯಾಶೀಲತೆಯಿಂದ ಇಂತಹ ಅಭಿವೃದ್ಧಿ ಕೆಲಸಗಳು ಅನುಷ್ಠಾನಗೊಳ್ಳುತ್ತಿದ್ದು ಕಿತ್ತೂರು ಪಟ್ಟಣದಲ್ಲಿ ಬೇಗನೆ ಕಿತ್ತೂರು ಉತ್ಸವದ ಪೂರ್ವಭಾವಿ ಸಭೆ ನಡೆದರೆ ಉತ್ಸವ ಯಶಸ್ವಿಯಾಗಲು ಸಹಕಾರಿಯಾಗುವುದರ ಜತೆಗೆ ಸಾಕಷ್ಟು ಸಮಯ ಸಿಕ್ಕಂತಾಗುತ್ತದೆ. ಕಿತ್ತೂರು ನಾಡು ಕಟ್ಟುವ ಜತೆ ಜತೆಗೆ 200ನೇ ವರ್ಷದ ಕಿತ್ತೂರು ಉತ್ಸವ ಇಡಿ ಜಗತ್ತಿಗೆ ಮಾದರಿಯಾಗಲಿ. ಕಿತ್ತೂರು ವೈಭವ ಮತ್ತೆ ಮರಳಲಿ ಎಂದರು.

ಪೂರ್ವಭಾವಿ ಸಭೆಯಲ್ಲಿ ಶಾಸಕ ಮಹಾಂತೇಶ ಕೌಜಲಗಿ, ಜಿಲ್ಲಾಧಿಕಾರಿ ಮೊಹಮ್ಮದ ರೋಷನ್, ಜಿ.ಪಂ. ಸಿಇಒ ರಾಹುಲ ಶಿಂಧೆ, ಉಪ ವಿಭಾಗ ಅಧಿಕಾರಿ ಪ್ರಭಾವತಿ ಪಕ್ಕಿರಪೂರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪ ನಿರ್ದೇಶಕಿ ವಿದ್ಯಾವತಿ ಭಜಂತ್ರಿ, ಕ್ಯೂರೇಟರ್ ರಾಘವೇಂದ್ರ, ಸಂತೋಷ ಹಾನಗಲ್ಲ, ಅಸ್ಪಾಕ ಹವಾಲ್ದಾರ, ಸೇರಿ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next