Advertisement

Delhi: ನಕಲಿ ಕೇಸ್‌ ನಲ್ಲಿ ಸಿಎಂ ಅತಿಶಿ ಬಂಧನಕ್ಕೆ ಇ.ಡಿ, ಸಿಬಿಐಗೆ ಬಿಜೆಪಿ ಆದೇಶ: ಕೇಜ್ರಿ!

01:31 PM Dec 25, 2024 | Team Udayavani |

ನವದೆಹಲಿ: ನಕಲಿ ಸಾರಿಗೆ ಪ್ರಕರಣದ(Fake Transport case) ಆರೋಪದಲ್ಲಿ ದೆಹಲಿ ಮುಖ್ಯಮಂತ್ರಿ ಅತಿಶಿ ಅವರನ್ನು ಶೀಘ್ರವೇ ಬಂಧಿಸುವ ಸಾಧ್ಯತೆ ಇದ್ದಿರುವುದಾಗಿ ಆಮ್‌ ಆದ್ಮಿ ಪಕ್ಷದ ವರಿಷ್ಠ ಅರವಿಂದ್‌ ಕೇಜ್ರಿವಾಲ್‌(Arvind Kejriwal) ಬುಧವಾರ (ಡಿ.25) ಗಂಭೀರವಾಗಿ ಆರೋಪಿಸಿದ್ದಾರೆ.

Advertisement

ಆಪ್ ಪಕ್ಷದ ಮಹಿಳಾ ಸಮ್ಮಾನ್‌ ಯೋಜನೆ ಮತ್ತು ಸಂಜೀವಿನಿ ಯೋಜನೆಯ ಘೋಷಣೆಯು ಬಿಜೆಪಿಯನ್ನು ಕೆರಳಿಸಿದ್ದು, ಸೇಡಿನ ಕ್ರಮವಾಗಿ ಸಿಎಂ ಅತಿಶಿಯನ್ನು ಬಂಧಿಸುವ ಸಿದ್ಧತೆ ನಡೆದಿರುವುದಾಗಿ ಕೇಜ್ರಿವಾಲ್‌ ದೂರಿದ್ದಾರೆ.

ಸಿಎಂ ಅತಿಶಿ ಜತೆ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ಕೇಜ್ರಿವಾಲ್‌, ಇತ್ತೀಚೆಗೆ ಇ.ಡಿ, ಸಿಬಿಐ ಹಾಗೂ ಆದಾಯ ತೆರಿಗೆ ಇಲಾಖೆ ಸಭೆಯನ್ನು ನಡೆಸಿದೆ. ಅಲ್ಲದೇ ಆಮ್‌ ಆದ್ಮಿ ಪಕ್ಷದ ಹಿರಿಯ ಮುಖಂಡರು ಮತ್ತು ಮುಖ್ಯಮಂತ್ರಿಯನ್ನು ಬಂಧಿಸುವಂತೆ ಉನ್ನತ ಮಟ್ಟದಿಂದ ಆದೇಶ ಬಂದಿರುವುದಾಗಿ ತಿಳಿಸಿದ್ದಾರೆ.

ಆಮ್‌ ಆದ್ಮಿ ಪಕ್ಷ ಚುನಾವಣ ಪ್ರಚಾರದಿಂದ ದೂರ ಉಳಿಯುವಂತೆ ಮಾಡುವ ನಿಟ್ಟಿನಲ್ಲಿ ಭಾರತೀಯ ಜನತಾ ಪಕ್ಷ ಪ್ರಯತ್ನಿಸುತ್ತಿದೆ ಎಂದು ಕೇಜ್ರಿವಾಲ್‌ ಆರೋಪಿಸಿದ್ದಾರೆ. ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣದ ಯೋಜನೆ ಕುರಿತು ನಕಲಿ ಪ್ರಕರಣ ದಾಖಲಿಸಿ ಅತಿಶಿಯನ್ನು ಬಂಧಿಸುವ ಹುನ್ನಾರ ಬಿಜೆಪಿಯದ್ದಾಗಿದೆ. ಆದರೆ ನಾನು ಎಲ್ಲಿಯವರೆಗೆ ಜೀವಂತವಾಗಿರುತ್ತೇನೆ ಅಲ್ಲಿಯವರೆಗೆ ಉಚಿತ ಬಸ್‌ ಸೇವೆ ಯೋಜನೆ ನಿಲ್ಲಿಸಲ್ಲ ಎಂದು ಕೇಜ್ರಿವಾಲ್‌ ದೂರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next