Advertisement
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಡೆಲ್ಲಿ ಶಿಖರ್ ಧವನ್ ಅವರ ಮತ್ತೂಂದು ಅಮೋಘ ಶತಕದ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟಿಗೆ 164 ರನ್ ಪೇರಿಸಿ ಪಂಜಾಬ್‌ಗ ಸವಾಲೊಡ್ಡಿತು. ಗುರಿ ಬೆನ್ನತ್ತಿದ ಪಂಜಾಬ್ 19 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 167 ರನ್ ಗಳಿಸಿ ಗೆಲುವಿನ ನಗೆ ಬೀರಿತು.
ಎರಡನೇ ವಿಕೆಟಿಗೆ ಆಡಳಿಲಿದ ನಾಯಕ ಅಯ್ಯರ್ ಮತ್ತು ಧವನ್ ತಂಡಕ್ಕೆ ಹಾನಿಯಾಗದ ರೀತಿಯಲ್ಲಿ ಆಡಲಾರಂಭಿಸಿದರು. ಈ ಜೋಡಿ 2ನೇ ವಿಕೆಟಿಗೆ 48 ರನ್ ಒಟ್ಟುಗೂಡಿಸಿತು. ಅಯ್ಯರ್ 14 ರನ್ ಗಳಿಸಿ ಮುರುಗನ್ ಅಶ್ವಿನ್‌ಗೆ ವಿಕೆಟ್ ಒಪ್ಪಿಸಿದರು. ಗಾಯದ ಸಮಸ್ಯೆಯಿಂದ ಚೇತರಿಸಿ ಕಣಕ್ಕಿಳಿದ ಪಂತ್ ಹೆಚ್ಚು ಹೊತ್ತು ಕ್ರೀಸ್ ಆಕ್ರಮಿಸಿಕೊಳ್ಳುವಲ್ಲಿ ವಿಫಲರಾದರು. ಮ್ಯಾಕ್ಸ್‌ವೆಲ್ ಎಸೆತವೊಂದನ್ನು ಸಿಕ್ಸರ್‌ಗಟ್ಟುವ ಪ್ರಯತ್ನದಲ್ಲಿ ಲಾಂಗ್‌ಆಪ್‌ನಲ್ಲಿದ್ದ ಅಗರ್ವಾಲ್‌ಗೆ ಕ್ಯಾಚಿತ್ತರೆ ಬಳಿಕ ಬಂದ ಆಸೀಸ್ ಆಲ್‌ರೌಂಡರ್ ಸ್ಟೋಯಿನಿಸ್ ಕೂಡ ಅಗರ್ವಾಲ್‌ಗೆ ಕ್ಯಾಚ್ ನೀಡಿ ಪೆವಿಲಿಯನ್ ಸೇರಿಕೋಂಡರು. ಈ ವಿಕೆಟ್ ಶಮಿ ಪಾಲಾಯಿತು.
Related Articles
Advertisement
ಸ್ಕೋರ್ ಪಟ್ಟಿಡೆಲ್ಲಿ ಕ್ಯಾಪಿಟಲ್ಸ್
ಪೃಥ್ವಿ ಶಾ ಸಿ ಮ್ಯಾಕ್ಸ್‌ವೆಲ್ ಬಿ ನೀಶಮ್ 7
ಶಿಖರ್ ಧವನ್ ಔಟಾಗದೆ 106
ಅಯ್ಯರ್ ಸಿ ರಾಹುಲ್ ಬಿ ಎಂ. ಅಶ್ವಿನ್ 14
ರಿಷಭ್ ಪಂತ್ ಸಿ ಅಗರ್ವಾಲ್ ಬಿ ಮ್ಯಾಕ್ಸ್‌ವೆಲ್ 14
ಸ್ಟೋಯಿನಿಸ್ ಸಿ ಅಗರ್ವಾಲ್ ಬಿ ಶಮಿ 9
ಹೆಟ್‌ಮೈರ್ ಬಿ ಶಮಿ 10 ಇತರ 4
ಒಟ್ಟು (20 ಓವರ್‌ಗಳಲ್ಲಿ 5 ವಿಕೆಟಿಗೆ) 164
ವಿಕೆಟ್ ಪತನ: 1-25, 2-73, 3-106, 4-141, 5-164. ಬೌಲಿಂಗ್:
ಗ್ಲೆನ್ ಮ್ಯಾಕ್ಸ್‌ವೆಲ್ 4-0-31-1
ಮೊಹಮ್ಮದ್ ಶಮಿ 4-0-28-2
ಆರ್ಷದೀಪ್ ಸಿಂಗ್ 3-0-30-0
ಜಿಮ್ಮಿ ನೀಶಮ್ 2-0-17-1
ಮುರುಗನ್ ಅಶ್ವಿನ್ 4-0-33-1
ರವಿ ಬಿಶ್ನೋಯಿ 3-0-24-0 ಪಂಜಾಬ್
ಕೆ. ಎಲ್ ರಾಹುಲ್ ಸಿ ಸ್ಯಾಮ್ ಬಿ ಅಕ್ಷರ್ 15
ಅಗರ್ವಾಲ್ ರನೌಟ್ 5
ಕ್ರಿಸ್ ಗೇಲ್ ಬಿ ಆರ್ ಅಶ್ವಿನ್ 29
ಪೂರನ್ ಸಿ ಪಂತ್ ಬಿ ರಬಾಡ 53
ಗ್ಲೆನ್ ಮ್ಯಾಕ್ಸ್‌ವೆಲ್ ಸಿ ಪಂತ್ ಬಿ ರಬಾಡ 32
ದೀಪಕ್ ಹೂಡ ಔಟಾಗದೆ 15
ಜೆಮ್ಮಿ ನಿಶಮ್ ಔಟಾಗದೆ 10 ಇತರ 8
ಒಟ್ಟು(19ವರ್‌ಗಳಲ್ಲಿ 5 ವಿಕೆಟಿಗೆ) 167
ವಿಕೆಟ್ ಪತನ:1-17, 2-52, 3-56, 4-125, 5-147. ಬೌಲಿಂಗ್
ಡೇನಿಯಲ್ ಸ್ಯಾಮ್ಸ್ 4-0-30-0
ಕಗಿಸೊ ರಬಾಡ 4-0-27-2
ಅಕ್ಷರ್ ಪಟೇಲ್ 4-0-27-1
ತುಷಾರ್ ಪಾಂಡೆ 2-0-41-0
ಆರ್. ಅಶ್ವಿನ್ 4-0-27-1
ಮಾರ್ಕಸ್ ಸ್ಟೋಯಿನಿಸ್ 1-0-14-0