Advertisement

ಹೆತ್ತವರನ್ನೂ ಕೊಂದು ಮುಗಿಸಿದ್ದೆ: ಲಿವ್‌ ಇನ್‌ ಜತೆಗಾತಿಯ ಕೊಲೆಗಾರ

07:51 PM Feb 04, 2017 | Team Udayavani |

ಭೋಪಾಲ್‌ : ತನ್ನ ಲಿವ್‌ ಇನ್‌ ಜತೆಗಾತಿಯನ್ನು ಕುತ್ತಿಗೆ ಬಿಗಿದು ಉಸಿರುಗಟ್ಟಿ ಸಾಯಿಸಿ ಬಳಿಕ ಆಕೆಯ ಶವವನ್ನು ತನ್ನ ಮನೆಯ ಅಡುಗೆ ಕೋಣೆಯಲ್ಲಿ ಸಮಾಧಿ ಮಾಡಿದ್ದ  32ರ ಹರೆಯದ ಉದಯನ್‌ ದಾಸ್‌, ತಾನು ಆರು ವರ್ಷಗಳ ಹಿಂದೆ ತನ್ನ ಹೆತ್ತವರನ್ನು ಕೂಡ ರಾಯಪುರದಲ್ಲಿನ ತನ್ನ ಮನೆ ಆವರಣದಲ್ಲಿ ಇದೇ ರೀತಿ ಕೊಂದು ಸಮಾಧಿ ಮಾಡಿರುವುದಾಗಿ ಹೇಳಿದ್ದಾನೆ.

Advertisement

ಫೇಸ್‌ ಬುಕ್‌ನಲ್ಲಿ ಪರಿಚಯವಾಗಿ ಬಳಿಕ ತನ್ನ ಲಿವ್‌ ಇನ್‌ ಸಂಗಾತಿಯಾಗಿದ್ದ ಪಶ್ಚಿಮ ಬಂಗಾಲದ ಬಂಕುರಾ ಜಿಲ್ಲೆಯ 28ರ ಹರೆಯದ ಆಕಾಂಕ್ಷಾ ಎಂಬಾಕೆಯನ್ನು ಉದಯನ್‌ ದಾಸ್‌ ಕಳೆದ ವರ್ಷ ಡಿಸೆಂಬರ್‌ನಲ್ಲಿ ಕತ್ತು ಬಿಗಿದು ಕೊಂದು ಆಕೆಯ ಶವವನ್ನು ದಿಲ್ಲಿಯಲ ಸಾಕೇತ್‌ ನಗರದಲ್ಲಿನ ತನ್ನ ಮನೆಯ ಅಡುಗೆ ಕೋಣೆಯಲ್ಲಿ ಸಮಾಧಿ ಮಾಡಿದ್ದ.

ಉದಯನ್‌ ದಾಸ್‌ ನನ್ನು ತನಿಖಾಧಿಕಾರಿಗಳು ತೀವ್ರವಾಗಿ ಪ್ರಶ್ನಿಸಿದಾಗ 2010-11ರಲ್ಲಿ ತನ್ನ ತಂದೆ ಮತ್ತು ತಾಯಿಯನ್ನು ಕುತ್ತಿಗೆ ಬಿಗಿದು ಕೊಂದು ಅವರ ಶವಗಳನ್ನು ರಾಯಪುರದಲ್ಲಿನ ಮನೆಯ ಆವರಣದಲ್ಲಿ ದಫ‌ನಮಾಡಿರುವುದಾಗಿ ಹೇಳಿದ್ದಾನೆ.

ಆದರೆ ಕ್ಷಣಕ್ಷಣಕ್ಕೆ ತನ್ನ ಹೇಳಿಕೆಯನ್ನು ಉದಯನ್‌ ದಾಸ್‌ ಬದಲಿಸುತ್ತಿರುವುದರಿಂದ ಆತನ ಹೇಳಿಕೆಯ ಸತ್ಯಾಸತ್ಯತೆಯನ್ನು ಅರಿಯಲು ರಾಯಪುರಕ್ಕೆ ಪೊಲೀಸರ ವಿಶೇಷ ತಂಡವನ್ನು ಕಳುಹಿಸಲಾಗಿದೆ ಎಂದು ದಕ್ಷಿಣ ಭೋಪಾಲ್‌ ಪೊಲೀಸ್‌ ಸುಪರಿಂಟೆಂಡೆಂಟ್‌ ಸಿದ್ಧಾರ್ಥ ಬಹುಗುಣ ಹೇಳಿದ್ದಾರೆ.

ಉದಯನ್‌ ದಾಸ್‌ನ ತಂದೆ ಪಿ ಕೆ ದಾಸ್‌ ಅವರು ಭೋಪಾಲ್‌ನಲ್ಲಿ ಬಿಎಚ್‌ಇಎಲ್‌ ಘಟಕದಲ್ಲಿ ಅಧಿಕಾರಿಯಾಗಿ ನಿವೃತ್ತರಾದ ಬಳಿಕ ಸ್ವಂತ ಕೈಗಾರಿಕೋದ್ಯಮ ಆರಂಭಿಸಿದ್ದರು.

Advertisement

ಇವರು 2010ರಲ್ಲಿ ರಾಯಪುರ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದರು ಎಂದು ಬೋಪಾಲ ಗೋವಿಂದಪುರ ಪ್ರದೇಶದ ನಗರ ಪೊಲೀಸ್‌ ಸುಪರಿಂಟೆಂಡೆಂಟ್‌ ವೀರೇಂದ್ರ ಮಿಶ್ರಾ ತಿಳಿಸಿದ್ದಾರೆ. ಇವರ ವ್ಯಾಪ್ತಿ ಪ್ರದೇಶದಲ್ಲಿ ಪಿ ಕೆ ದಾಸ್‌ ಅವರ ಕೊಲೆ ನಡೆದಿರುವುದಾಗಿ ಉದಯನ್‌ ಹೇಳಿಕೆ ಮೂಲಕ ಗೊತ್ತಾಗಿದೆ.

ಉದಯನ್‌ ದಾಸ್‌ ಐಐಟಿಯಲ್ಲಿ ಕಲಿತವನಲ್ಲ; ಆತ ಕೇವಲ 12ನೇ ತರಗತಿ ಪಾಸ್‌ ಮಾಡಿರುವವನು. ಆದರೆ ನಿರರ್ಗಳವಾಗಿ ಇಂಗ್ಲಿಷ್‌ ಮಾತನಾಡಬಲ್ಲ ಆತ ಅಷ್ಟೇ ಸುಲಲಿತವಾಗಿ ಸುಳ್ಳುಗಳನ್ನು ಕೂಡ ಹೇಳಬಲ್ಲವನಾಗಿದ್ದಾನೆ. 

ಉದಯನ್‌ ದಾಸ್‌ ಹೆತ್ತವರಿಗೆ ದಿಲ್ಲಿಯ ಡಿಫೆನ್ಸ್‌ ಕಾಲನಿಯಲ್ಲಿ ಒಂದು ಫ್ಲ್ಯಾಟ್‌ ಇದೆ; ಅದರಿಂದ ತಿಂಳಿಗೆ 10,000 ರೂ. ಬಾಡಿಗೆ ಬರುತ್ತದೆ; ರಾಯಪುರದಲ್ಲೂ ಒಂದು ಫ್ಲ್ಯಾಟ್‌ ಇದೆ; ಅದರಿಂದ 7,000 ರೂ. ಬಾಡಿಗೆ ಬರುತ್ತದೆ; ಸಾಕೇತ್‌ ನಗರದಲ್ಲಿರುವ ಫ್ಲ್ಯಾಟ್‌ನಿಂದ ಕೂಡ 5,000 ರೂ. ಬಾಡಿಗೆ ಬರುತ್ತದೆ.

ತಂದೆ ಪಿ ಕೆ ದಾಸ್‌ ಅವರೊಂದಿಗೆ ಜಂಟಿ ಹೆಸರಿನಲ್ಲಿ ರುವ 8.5 ಲಕ್ಷ ರೂ. ಗಳ ಬ್ಯಾಂಕ್‌ ನಿರಖು ಠೇವಣಿಯ ಬಡ್ಡಿ ಕೂಡ ಉದಯನ್‌ ದಾಸ್‌ಗೆ ಸಿಗುತ್ತಿದೆ. ಹೆತ್ತವರ ಪಿಂಚಣಿಯನ್ನು ಕೂಡ ಉದಯನ್‌ ದಾಸ್‌ ವಿತ್‌ ಡ್ರಾ ಮಾಡುತ್ತಿದ್ದ ಎಂದು ಪೊಲೀಸರು ಶಂಕಿಸಿದ್ದಾರೆ. ಉದಯನ್‌ ಅತ್ಯಂತ ಐಶಾರಾಮಿ ಜೀವನ ನಡೆಸುತ್ತಿದ್ದ ಎಂದವರು ಹೇಳಿದ್ದಾರೆ. 

ಉದಯನ್‌ ತಾಯಿ ಅಮೆರಿಕದಲ್ಲೂ ದಿಲ್ಲಿಯಲ್ಲೂ ವಾಸವಾಗಿದ್ದಳು ಎಂಬುದನ್ನು ಪೊಲೀಸರು ಖಚಿತ ಪಡಿಸಿಕೊಂಡಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next