Advertisement

ವಿಶ್ವನಾಥನ್‌ ಆನಂದ್‌ ಜೊತೆ ನಟ ಕಿಚ್ಚ ಸುದೀಪ್‌ ಚೆಸ್‌ ಆಟ!

10:18 AM Jun 12, 2021 | Team Udayavani |

ಬೆಂಗಳೂರು: ಚೆಸ್‌ ಜಗತ್ತಿನ ಮಹಾನ್‌ ತಾರೆ, 5 ಬಾರಿಯ ಮಾಜಿ ವಿಶ್ವ ಚಾಂಪಿಯನ್‌ ವಿಶ್ವನಾಥನ್‌ ಆನಂದ್‌; ಜೂ.13ರಂದು ಏಕಕಾಲದಲ್ಲಿ ಹಲವರೊಂದಿಗೆ ಪ್ರದರ್ಶನ ಪಂದ್ಯಗಳಲ್ಲಿ ಪಾಲ್ಗೊಳ್ಳಲಿದ್ದಾರೆ.  ಸಂಜೆ 5ಕ್ಕೆ ಈ ಪಂದ್ಯಗಳು ಆರಂಭವಾಗಲಿದ್ದು, ತಾರೆಯರು, ಉದ್ಯಮಿಗಳೊಂದಿಗೆ ವಿಶಿ ಆಡಲಿದ್ದಾರೆ.

Advertisement

ವಿಶೇಷವೆಂದರೆ ಈ ಪಂದ್ಯಗಳಲ್ಲಿ ಬಾಲಿವುಡ್‌ ನಟ ಸಾಮ್ರಾಟ್‌ ಅಮೀರ್‌ ಖಾನ್‌, ಬಹುಭಾಷಾ ತಾರೆ, ಕರ್ನಾಟಕದ ಖ್ಯಾತ ನಟ ಕಿಚ್ಚ ಸುದೀಪ್‌ ಕೂಡಾ ಪಾಲ್ಗೊಳ್ಳಲಿದ್ದಾರೆ. ಇವರೊಂದಿಗೆ ನಟ ರೀತೇಶ್‌ ದೇಶಮುಖ್‌, ಗಾಯಕ ಅರಿಜಿತ್‌ ಸಿಂಗ್‌, ಗಾಯಕಿ ಅನನ್ಯಾ ಬಿರ್ಲಾ, ಕ್ರಿಕೆಟಿಗ ಯಜುವೇಂದ್ರ ಚಹಲ್‌, ಶಿಯೋಮಿ ಇಂಡಿಯಾದ ಸಿಇಒ ಮನುಕುಮಾರ್‌ ಜೈನ್‌, ಝೆರೊಧ ಸಹಸಂಸ್ಥಾಪಕ ನಿಖೀಲ್‌ ಕಾಮತ್‌, ನಿರ್ಮಾಪಕ ಸಾಜಿದ್‌ ನಾಡಿಯವಾಲ, ಪ್ರಚುರ ಪದಕಣ್ಣಯ್ಯ ಕೂಡಾ ಆಡಲಿದ್ದಾರೆ.

ಇದನ್ನೂ ಓದಿ:ದಿಗ್ಗಜರ ಕಾಳಗ: ಫ್ರೆಂಚ್ ಓಪನ್ ಸೆಮಿಫೈನಲ್ ನಲ್ಲಿ ಜೋಕೊವಿಕ್ ಎದುರು ಸೋತ ನಡಾಲ್

ಇದರ ಉದ್ದೇಶ ಕೊರೊನಾ ಪರಿಹಾರನಿಧಿಗೆ ಹಣ ಸಂಗ್ರಹಿಸುವುದು. ಅಕ್ಷಯ ಪಾತ್ರಾ ಫೌಂಡೇಶನ್‌, ಚೆಸ್‌.ಕಾಮ್‌, ಎಕ್ಸ್‌ಸೆಟರಾ ಟ್ಯಾಲೆಂಟ್‌ ಮ್ಯಾನೇಜ್‌ಮೆಂಟ್‌ ಸಹಯೋಗದಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಚೆಸ್‌.ಕಾಮ್‌ನ ಅಧಿಕೃತ ಯೂಟ್ಯೂಬ್‌ ವಾಹಿನಿಯಲ್ಲಿ ಇದು ನೇರ ಪ್ರಸಾರಗೊಳ್ಳಲಿದೆ

Advertisement

Udayavani is now on Telegram. Click here to join our channel and stay updated with the latest news.

Next